ಸಂಕ್ರಾಂತಿ ದಿನದಿಂದ ಈ ರಾಶಿಯವರು ಹೋದಲೆಲ್ಲಾ ಯಶಸ್ಸು.! ಕೈ ಇಟ್ಟಲೆಲ್ಲಾ ಹಣ

ಜನವರಿಯಲ್ಲಿಯೇ ಸಂಭವಿಸಲಿರುವ 4 ಗ್ರಹ ಸಂಕ್ರಮಣಗಳು ಅನೇಕ ರಾಶಿಯವರ ಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆಯನ್ನು ತರುತ್ತವೆ. 

ಬೆಂಗಳೂರು : ಜನವರಿ 13 ರಂದು ಮಂಗಳ ಗ್ರಹ ಮೇಷ ರಾಶಿಯನ್ನು ಬಿಟ್ಟು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಮಂಗಳ ನಡೆಯಲ್ಲಿನ ಈ ಬದಲಾವಣೆ ಅನೇಕ ಜನರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಜ್ಯೋತಿಷ್ಯದಲ್ಲಿ ಮಂಗಳವನ್ನು ಧೈರ್ಯ, ಶಕ್ತಿ, ಶೌರ್ಯ, ಭೂಮಿ ಇತ್ಯಾದಿಗಳ ಅಧಿಪತಿ ಎಂದು ಕರೆಯಲಾಗುತ್ತದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

ವೃಷಭ : ವೃಷಭ ರಾಶಿಯಲ್ಲಿ ಮಂಗಳ ಸಂಚಾರವು ಈ ರಾಶಿಯವರಿಗೆ ವಿಶೇಷ ಲಾಭವನ್ನು ತರುತ್ತದೆ. ಈ ರಾಶಿಯವರಿಗೆ ಈ ಅವಧಿಯಲ್ಲಿ ಭಾರೀ ಲಾಭವಾಗುತ್ತದೆ.   ದೀರ್ಘಕಾಲದಿಂದ ಪೂರ್ತಿಗೊಳಿಸಲು ಶ್ರಮಿಸುತ್ತಿರುವ ಕೆಲಸ ಈ ಸಮಯದಲ್ಲಿ ಪೂರ್ಣವಾಗುವುದು. ಮಾತ್ರವಲ್ಲ ಈ ಕಾರ್ಯಗಳಿಂದ ನೀವು ನಿರೀಕ್ಷಿಸಿದ ಫಲ ಕೂಡಾ ಸಿಗುವುದು. ವ್ಯಾಪಾರ ಇತ್ಯಾದಿಗಳನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಸಮಯವು ಅನುಕೂಲಕರವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ.

2 /3

ಸಿಂಹ :ಮಂಗಳನ ಚಲನೆಯು ಈ ರಾಶಿಯವರಿಗೆ ಶುಭ ಸುದ್ದಿಯನ್ನು ತರಲಿದೆ.  ಮಂಗಳನ ಸ್ಥಾನದಲ್ಲಿನ ಬದಲಾವಣೆ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಗುರಿ ಮತ್ತು ಉದ್ದೇಶಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಉದ್ಯೋಗಸ್ಥರು ಸಂಕ್ರಾಂತಿಯ ದಿನದಂದು ಸಂಕಲ್ಪದಿಂದ ಕೆಲಸ ಮಾಡಿದರೆ ಶುಭ ಫಲಗಳು ಸಿಗುತ್ತವೆ. 

3 /3

ವೃಶ್ಚಿಕ :ಈ ರಾಶಿಯವರಿಗೆ ಮಂಗಳನ ಸಂಚಾರ ಮಂಗಳಕರವಾಗಿರಲಿದೆ.  ವ್ಯಾಪಾರವನ್ನು ವಿಸ್ತರಿಸಲು ಈ ಸಮಯವು ಅನುಕೂಲಕರವಾಗಿರುತ್ತದೆ. ಕೆಲಸವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದರಲ್ಲಿ ಯಶಸ್ಸು ಸಿಗಲಿದೆ. ಈ ಸಮಯವು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಯಾವ ಕೆಲಸಕ್ಕೆ ಕೈ ಹಾಕಿದರೂ ಧನಾತ್ಮಕ ಫಲಿತಾಂಶ ಸಿಗಲಿದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)