ಕೆಲವರಿಗೆ ವರದಾನವಾದ Corona Epidemic, ಫೋರ್ಬ್ಸ್ ಬಿಲೆನಿಯರ್ಸ್ ಪಟ್ಟಿಯಲ್ಲಿ 4 ಭಾರತೀಯರು

                  

Corona Epidemic ಸಮಯದಲ್ಲಿ ಕೋಟ್ಯಾಧಿಪತಿಗಳಾದ 50 ಜನರ ಪಟ್ಟಿಯನ್ನು ಫೋರ್ಬ್ಸ್ ಇತ್ತೀಚೆಗೆ ಬಿಡುಗಡೆ ಮಾಡಿತು. ಇದರಲ್ಲಿ 4 ಭಾರತೀಯರ ಹೆಸರುಗಳನ್ನು ಸಹ ಉಲ್ಲೇಖಿಸಲಾಗಿದೆ.

1 /6

ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಜನರು ಉದ್ಯೋಗ ಕಳೆದುಕೊಂಡರೆ, ಕೆಲವು ಜನರ ಸಂಪತ್ತಿನಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಫೋರ್ಬ್ಸ್‌ನ ವರದಿಯ ಪ್ರಕಾರ ಸಾಂಕ್ರಾಮಿಕ ಸಮಯದಲ್ಲಿ ವಿಶ್ವದಾದ್ಯಂತದ 50 ವೈದ್ಯರು, ವಿಜ್ಞಾನಿಗಳು ಮತ್ತು ಆರೋಗ್ಯ ಕ್ಷೇತ್ರದ ಉದ್ಯಮಿಗಳು ಹೊಸ ಬಿಲಿಯನೇರ್ ಪಟ್ಟಿ ಸೇರಿದ್ದಾರೆ. ಈ 28 ವಿಜ್ಞಾನಿಗಳಲ್ಲಿ ಹೆಚ್ಚಿನವರು ಚೀನಾದವರು. 4 ಶತಕೋಟ್ಯಾಧಿಪತಿಗಳು ಭಾರತದ ನಿವಾಸಿಗಳು. ಈ ಪ್ರಮುಖ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳೋಣ ...  

2 /6

ಪ್ರೇಮ್‌ಚಂದ್ ಗೋಧಾ ಅವರು ಭಾರತೀಯ ಔಷಧೀಯ ಕಂಪನಿ ಇಪ್ಕಾ ಲ್ಯಾಬ್ಸ್‌ನ (Ipca Labs) ಅಧ್ಯಕ್ಷರಾಗಿದ್ದಾರೆ. ಅವರ ನಿವ್ವಳ ಮೌಲ್ಯ 10,000 ಕೋಟಿ ರೂ. ವಾಸ್ತವವಾಗಿ ಕರೋನಾ ವೈರಸ್‌ನಿಂದಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ (Hydroxychloroquine) ಔಷಧದ ಬೇಡಿಕೆ ವೇಗವಾಗಿ ಹೆಚ್ಚಾಯಿತು. ಈ ಕಾರಣಕ್ಕಾಗಿ ಕಂಪನಿಯ ಆಸ್ತಿ ವೇಗವಾಗಿ ಹೆಚ್ಚಾಯಿತು.

3 /6

ರಾಜೇಂದ್ರ ಅಗರ್ವಾಲ್, ಬನ್ವರಿಲಾಲ್ ಬಾವ್ರಿ ಮತ್ತು ಗಿರ್ಧಾರಿ ಲಾಲ್ ಬಾವ್ರಿ ಈ ಮೂವರು ಸಹೋದರರು. 1986 ರಲ್ಲಿ ಅವರು ರಾಜಸ್ಥಾನದ ಜೈಪುರ ನಗರದಲ್ಲಿ ಮ್ಯಾಕ್ಲಿಯೋಡ್ಸ್ ಫಾರ್ಮಾಸ್ಯುಟಿಕಲ್ಸ್ ಎಂಬ ಔಷಧೀಯ ಕಂಪನಿಯನ್ನು ಸ್ಥಾಪಿಸಿದರು. ಈ ಕಂಪನಿಯು ಟಿಬಿ, ಆಸ್ತಮಾ (Aastama), ಮಧುಮೇಹ ಮತ್ತು ಇತರ ಕಾಯಿಲೆಗಳಿಗೆ ಔಷಧಿಗಳನ್ನು ತಯಾರಿಸುತ್ತದೆ. ಕರೋನಾ ಅವಧಿಯಲ್ಲಿ, ಈ ಔಷಧಿಗಳ ಬಳಕೆ ಹೆಚ್ಚಾಯಿತು ಮತ್ತು ಕಂಪನಿಯ ನಿವ್ವಳ ಮೌಲ್ಯ 9,559 ಕೋಟಿ ರೂ.ವರೆಗೆ ತಲುಪಿತು. ಇದನ್ನೂ ಓದಿ: ಕೊರೊನಾ ಕುರಿತ ಸುಳ್ಳು ಮಾಹಿತಿ ತಡೆಗೆ ಬಂದಿದೆ WHO Covid-19 app

4 /6

ಚೀನಾದ ಹೊಸ ಬಿಲಿಯನೇರ್‌ಗಳಲ್ಲಿ ಪ್ರಮುಖರು ಬಯೋನೋಟೆಕ್‌ನ ಸಹ-ಸಂಸ್ಥಾಪಕ ಉರ್ ಸಾಹಿನ್ ಮತ್ತು ಮಾಡರ್ನಾದ ಸಿಇಒ ಸ್ಟೀಫನ್ ಬನ್ಸೆಲ್. ಬಯೋನೋಟೆಕ್ ಕಂಪನಿಯ ಫೈಜರ್ (Pfyzer) ಜೊತೆಗೆ ಕರೋನಾ ಲಸಿಕೆಯನ್ನು ಅಭಿವೃದ್ಧಿಪಡಿಸಿತು. ಕಂಪನಿಯ ಲಸಿಕೆಯಿಂದ ಫಿಜರ್ ಮತ್ತು ಮಾಡರ್ನಾ ಎರಡನ್ನೂ ಯಶಸ್ವಿ ಎಂದು ಘೋಷಿಸಲಾಗಿದೆ. ಫಿಜರ್‌ನೊಂದಿಗಿನ ಪಾಲುದಾರಿಕೆಯ ನಂತರ ಬಯೋನೋಟೆಕ್‌ನ ಷೇರು ಬೆಲೆ 160% ಹೆಚ್ಚಾಗಿದೆ. ಮೊಡೆರ್ನಾ ಸಿಇಒ ಸ್ಟೀಫನ್ ಬನ್ಸೆಲ್ 30,147 ಕೋಟಿ ರೂ. ಸಂಪತ್ತನ್ನು ಹೊಂದಿದ್ದಾರೆ. ಇದನ್ನೂ ಓದಿ: ಕೊರೊನಾ ಔಷಧಿಯಿಂದ ಗುಪ್ತರೋಗದ ಅಪಾಯ, ಎಚ್ಚರಿಕೆ ನೀಡಿದ WHO

5 /6

ಚೀನಾದ ಮತ್ತೊಂದು ಕಂಪನಿಯಾದ ಶೆನ್ಜೆನ್ ಕಾಂಗ್ಟೈ ಜೈವಿಕ ಉತ್ಪನ್ನಗಳಲ್ಲಿ ಶೇ. 24 ರಷ್ಟು ಪಾಲನ್ನು ಹೊಂದಿರುವ ಯುವಾನ್ ಲಿಪಿಂಗ್ ಆಸ್ತಿಗಳಲ್ಲಿ ಸಹ ಗಮನಾರ್ಹ ಏರಿಕೆ ಕಂಡಿದೆ. ಜೂನ್‌ನಲ್ಲಿ ಪತಿಯಿಂದ ವಿಚ್ಛೇದನದ ನಂತರ ಯುವಾನ್‌ನ ಒಟ್ಟು ಆಸ್ತಿ 30,147 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಕಾರಣದಿಂದಾಗಿ ಯುವಾನ್ ಕೆನಡಾದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. (ಸಾಂದರ್ಭಿಕ ಚಿತ್ರ)

6 /6

ಚೀನಾದ ಕಾಂಟೆಕ್ ಮೆಡಿಕಲ್ ಸಿಸ್ಟಮ್ಸ್ ಅಧ್ಯಕ್ಷ ಹೂ ಕುನ್ ಕೂಡ ಈ ವರ್ಷ ಬಿಲಿಯನೇರ್ ಆದರು. ಅವರ ಆಸ್ತಿ ಮೌಲ್ಯ 28,677 ಕೋಟಿ ರೂ. ಈ ಕಂಪನಿಯು ಆಸ್ಪತ್ರೆಗೆ ಉಪಕರಣಗಳನ್ನು ತಯಾರಿಸುತ್ತದೆ. (ಸಾಂಕೇತಿಕ ಚಿತ್ರ)