Diet for Strong Bones: ಸದೃಢ ಮೂಳೆಗಾಗಿ ಡಯಟ್ ನಲ್ಲಿ ಸೇವಿಸಿ ಈ ಆಹಾರ

ವಯಸ್ಸಾದ ನಂತರ ಮೂಳೆಗಳು ದುರ್ಬಲವಾಗುವುದು ಸಹಜ. ಆದರೆ ನಿಮ್ಮ ನಿತ್ಯದ ಆಹಾರದಲ್ಲಿ ಕೆಲವು ಅಂಶಗಳನ್ನು ಸೇರಿಸಿದರೆ, ವಯಸ್ಸಿಗೆ ಮುಂಚೆಯೇ ಮೂಳೆಗಳು ದುರ್ಬಲಗೊಳ್ಳುವುದನ್ನು ತಡೆಯಬಹುದು. 

ನವದೆಹಲಿ : ಮೂಳೆಗಳು (Bones) ನಮ್ಮ ದೇಹದ ಆಧಾರವಾಗಿದ್ದು, ಮೂಳೆಗಳ ಆರೋಗ್ಯಕ್ಕೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ.  ಬಾಲ್ಯ, ಹದಿಹರೆಯದ ಅವಧಿಯಲ್ಲಿ ಆರಂಭದಲ್ಲಿ ಮಿನರಲ್ ಗಳು ಮೂಳೆಗಳಲ್ಲಿ ಸಂಗ್ರಹಗೊಳ್ಳುತ್ತವೆ. ಆದರೆ, 30 ವರ್ಷ ಆಯಿತು ಒಂದೊಂದೇ ಸಮಸ್ಯೆ ಶುರುವಾಗಲು ಆರಂಭವಾಗುತ್ತದೆ. ಹಾಗಿರುವಾಗ ಚಿಕ್ಕ ವಯಸ್ಸಿನಿಂದಲೇ ಕೆಲವು ಆಹಾರಗಳನ್ನು (Food) ನಮ್ಮ ಡಯಟ್ ನಲ್ಲಿ (Diet) ಸೇರಿಸಿಕೊಳ್ಳುವುದು ಒಳ್ಳೆಯದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೂಳೆಗಳು ದುರ್ಬಲವಾಗಿದ್ದರೆ  ರಿಕೆಟ್ಸ್ ಮತ್ತು ಆಸ್ಟಿಯೊಪೊರೋಸಿಸ್ ನಂತಹ ಕಾಯಿಲೆಗಳು ಎದುರಾಗಬಹುದು. ಈ ರೋಗಗಳಿದ್ದರೆ , ಸಣ್ಣ ಏಟಾದರೂ ಮೂಳೆ ಮುರಿತದ ಅಪಾಯವಿರುತ್ತದೆ. ಆದ್ದರಿಂದ, ನಿಮ್ಮ ಮೂಳೆಗಳು ಆರೋಗ್ಯಕರವಾಗಿ ಬಲಿಷ್ಟವಾಗಬೇಕಾದರೆ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಮತ್ತು  ವಿಟಮಿನ್ ಡಿ ತೆಗೆದುಕೊಳ್ಳಬೇಕು.  

2 /5

 ಮೊಸರು ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಎರಡರ ಅತ್ಯುತ್ತಮ ಮೂಲವಾಗಿದೆ. ಮೊಸರು ತಿನ್ನುವುದರಿಂದ ಮೂಳೆ ಬಲಿಷ್ಟವಾಗಿರುತ್ತದೆ.  ಪ್ರತಿ ದಿನ ಮೊಸರು ಸೇವಿಸುವುದರಿಂದ ಮೂಳೆ ಮುರಿತದ ಆಪಾಯ ಕಡಿಮೆಯಾಗುತ್ತದೆ. ಆದ್ದರಿಂದ, ನಿಮ್ಮ ದೈನಂದಿನ ಆಹಾರದಲ್ಲಿ ಮೊಸರು ಸೇರಿಸಿ.

3 /5

ಮೊಟ್ಟೆ ಪ್ರಿಯರಿಗೆ ಇದು ಒಳ್ಳೆಯ ಸುದ್ದಿ. ಮೊಟ್ಟೆಗಳಲ್ಲಿ ವಿಟಮಿನ್ ಡಿ ಕಂಡುಬರುತ್ತದೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೊಟ್ಟೆಯ ಹಳದಿ ಭಾಗವು ವಿಟಮಿನ್ ಡಿ ಅನ್ನು ಹೊಂದಿರುತ್ತದೆ. ಒಂದು ವೇಳೆ ನೀವು ಮೊಟ್ಟೆಯ ಬಿಳಿ ಭಾಗವನ್ನು    ಮಾತ್ರ ಸೇವಿಸಿದರೆ, ವಿಟಮಿನ್ ಡಿ ನಿಮ್ಮ ದೇಹ ಸೇರುವುದಿಲ್ಲ. ಹಾಗಿ ಬೇಯಿಸಿದ ಮೊಟ್ಟೆ ತಿನ್ನುವಾಗ ಹಳದಿ ಭಾಗದ ಸಮೇತ ಸೇವಿಸಿ.      

4 /5

ಪಾಲಕದಂತಹ ಹಸಿರು ಸೊಪ್ಪು ತರಕಾರಿಗಳು ಮೂಳೆಗಳ ಆರೋಗ್ಯಕ್ಕೆ ಬಹಳ ಮುಖ್ಯ. 1 ಕಪ್ ಪಾಲಕ್ ದೈನಂದಿನ ಕ್ಯಾಲ್ಸಿಯಂ ಅಗತ್ಯದ  ಶೇಕಡಾ 25 ರಷ್ಟು ಪ್ರಮಾಣವನ್ನು ಹೊಂದಿರುತ್ತದೆ. ಇದಲ್ಲದೆ, ಪಾಲಕ್ ನಲ್ಲಿ ಕಬ್ಬಿಣ ಮತ್ತು ವಿಟಮಿನ್ ಎ ಇದೆ. ಆದ್ದರಿಂದ  ನಿಮ್ಮ ಆಹಾರದಲ್ಲಿ ಪಾಲಕ್ ಅನ್ನು ಖಂಡಿತವಾಗಿ ಸೇವಿಸಿ. 

5 /5

ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಮಾತ್ರವಲ್ಲ, ಪ್ರೋಟೀನ್ ಕೂಡ ಬಹಳ ಮುಖ್ಯ.  ಎಲುಬುಗಳಲ್ಲಿ 50 ಪ್ರತಿಶತ ಪ್ರೋಟೀನ್‌ನಿಂದ ಕೂಡಿದೆ. ದೇಹದಲ್ಲಿ ಪ್ರೋಟೀನ್‌ ಅಂಶ ಕಡಿಮೆಯಾದರೆ, ಕ್ಯಾಲ್ಸಿಯಂ ಹೀರಿಕೊಳ್ಳುವಿಕೆ ಕೂಡಾ ಕಡಿಮೆಯಾಗುತ್ತದೆ.   ಇದರಿಂದ ಮೂಳೆ ಮುರಿತದ ಅಪಾಯ ಹೆಚ್ಚಿಸುತ್ತದೆ. ಹಾಗಾಗಿ ಆಹಾರದಲ್ಲಿ ಬಾದಾಮಿ, ಓಟ್ಸ್, ಪನೀರ್, ಹಾಲು, ಕೋಸುಗಡ್ಡೆ ಮುಂತಾದವುಗಳನ್ನು ಹೇರಳವಾಗಿ ಸೇವಿಸಿ .