ಈ ರಾಶಿಯವರು 7 ವರ್ಷಗಳವರೆಗೆ ರಾಜರ ರೀತಿ ಬದುಕು ಸಾಗಿಸುತ್ತಾರೆ. ಇವರ ಜೀವನದಲ್ಲಿ ಸರ್ವ ಸುಖವೂ ಒಲಿದು ಬರುವುದು.
ಬೆಂಗಳೂರು : ಮಂಗಳ ಮಹಾದಶಾ ನಿಮ್ಮ ಜೀವನದಲ್ಲಿ 7 ವರ್ಷಗಳವರೆಗೆ ಇರುತ್ತದೆ. ಉಳಿದ ಗ್ರಹಗಳಿಗೆ ಹೋಲಿಸಿದರೆ ಮಂಗಳ ಅತ್ಯಂತ ಆಕ್ರಮಣಕಾರಿ ಎಂದೇ ಹೇಳಲಾಗುತ್ತದೆ.
ಮಂಗಳ ಗ್ರಹ ಅಹಂಕಾರ, ಕ್ರೀಡೆ ಮತ್ತು ಹೆಚ್ಚಿನ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಇದನ್ನು ಯುದ್ಧದ ದೇವರು ಎಂದು ಕರೆಯಲಾಗುತ್ತದೆ.ಮಂಗಳ ಅತ್ಯಂತ ಶಕ್ತಿಶಾಲಿ ಗ್ರಹವಾಗಿದೆ. ಮಂಗಳನ ಉತ್ತಮ ಪ್ರಭಾವದ ಅಡಿಯಲ್ಲಿ ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸಮಸ್ಯೆಯನ್ನು ಕೂಡಾ ಅದು ನಿಗ್ರಹಿಸುತ್ತದೆ. ವಿಜಯದ ದಾರಿ ಸುಗಮವಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Channel- bit.ly/46lENGm
Facebook Link - https://bit.ly/3Hhqmcj
Youtube Link - https://www.youtube.com/watch?v=kr-YIH866cM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
Twitter Link - https://bit.ly/3n6d2R8 ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ :ನೀವಂದು ಕೊಂಡ ಕೆಲಸ ಸುಗಮವಾಗಿ ನೆರವೇರುವುದು. ನಿಮ್ಮ ಮಾತುಗಳನ್ನು ಎಲ್ಲರೂ ಕೇಳುವಂತಾಗುತ್ತದೆ.ನಿಮ್ಮ ಜೀವನದಲ್ಲಿ ಎಲ್ಲವೂ ಮಂಗಳಮಯ ಎಂದರೂ ತಪ್ಪಲ್ಲ. ಹಣಕಾಸಿನ ಕೊರತೆ ನಿಮ್ಮನ್ನು ಕಾಡುವುದಿಲ್ಲ.
ವೃಶ್ಚಿಕ ರಾಶಿ :ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಬಿಟ್ಟರೆ ನಿಮ್ಮದು ನೆಮ್ಮದಿಯ ಬದುಕು. ನಿಮ್ಮ ಮನಸ್ಸಿನ ಬಯಕೆಯಂತೆಯೇ ಎಲ್ಲವೂ ನೆರವೇರುವುದು. ಉನ್ನತ ಹುದ್ದೆಗೆ ನೀವು ಏರುವ ಭಾಗ್ಯ ಇದೆ.
ಸಿಂಹ ರಾಶಿ :ನಿಮ ಜೀವನದಲ್ಲಿ ಕಷ್ಟದ ದಿನಗಳು ಕಡಿಮೆಯೇ. ಏನೇ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ನಿಮ್ಮ ಹಠ ಒಮ್ಮೊಮ್ಮೆ ನಿಮಗೆ ಮುಳುವಾಗಬಹುದು. ಕೋಪ ಕಡಿಮೆ ಮಾಡಿಕೊಂಡರೆ ನಿಮ್ಮನ್ನು ಮೀರಿಸುವುದು ಯಾರಿಗೂ ಸಾಧ್ಯ ಇಲ್ಲ.
ಕರ್ಕ ರಾಶಿ :ನಿಮಗೆ ಜೀವನದ ಸರ್ವ ಸುಖವೂ ಒಲಿದು ಬರುವುದು. ನಿಮ್ಮ ಜೀವನದಲ್ಲಿ ಯಶಸ್ಸಿನ ಉತ್ತುಂಗಕ್ಕೆ ಏರುವಿರಿ. ಆರ್ಥಿಕವಾಗಿ ಸದೃಢವಾಗಿ ಇರುವಿರಿ.
ಧನು ರಾಶಿ :ಮೊದಲು ಸ್ವಲ್ಪ ಕಷ್ಟ ಅನುಭವಿಸಿರಬಹುದು. ಆದರೆ ನಂತರ ನಿಮ್ಮದು ಏನಿದ್ದರೂ ಗೆಲುವಿನ ಹಾದಿಯೇ. ನೀವು ಎತ್ತರಕ್ಕೆ ಏರುತ್ತಲೇ ಹೋಗುವಿರಿ. ಮನೆ, ವಾಹನ, ಉನ್ನತ ಸ್ಥಾನಮಾನ ನಿಮಗೆ ಒಲಿದು ಬರುವುದು.
ಮೀನ ರಾಶಿ :ನಿಮ್ಮ ಜಾತಕದಲ್ಲಿ ಸಾಂಸಾರಿಕ ಸುಖ ಜಾಸ್ತಿ. ಸ್ವಭಾವತಃ ನೀವು ಹಠಮಾರಿಯಾದರೂ ನಿಮ್ಮ ಮಾತಿನ ಮುಂದೆ ಎದುರಿನವರು ತಲೆ ಬಾಗುತ್ತಾರೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ