Chhattisgarh: ಸಚಿವರ ವಿರುದ್ಧವೇ ಚುನಾವಣೆ ಗೆದ್ದು ಮಗನ ಸಾವಿನ ಸೇಡು ತೀರಿಸಿಕೊಂಡ ಅಪ್ಪ!

Chhattisgarh Assembly Election 2023: ಛತ್ತೀಸ್‌ಗಢದ ಕಾಂಗ್ರೆಸ್‌ ಸರ್ಕಾರವು ಕೊಲೆಯಾದ ಭುವನೇಶ್ವರ್ ಸಾಹು ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತ್ತು. ಆದರೆ ಈಶ್ವರ್ ಸಾಹು ಕುಟುಂಬ ಈ ಪರಿಹಾರ ಪಡೆಯಲು ನಿರಾಕರಿಸಿತ್ತು.

The Story Of Ishwar Sahu: ಎಲ್ಲರನ್ನೂ ಅಚ್ಚರಿಗೊಳಿಸುವಂತೆ ಛತ್ತೀಸ್‌ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಎಲ್ಲಾ ಸಮೀಕ್ಷೆಗಳ ಭವಿಷ್ಯವನ್ನು ಬುಡಮೇಲು ಮಾಡಿದ ಬಿಜೆಪಿ, ಭೂಪೇಶ್ ಬಘೆಲ್ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಿತು. ಆದರೆ ಈ ಇಡೀ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಅಭ್ಯರ್ಥಿ ಈಶ್ವರ್ ಸಾಹು. ಗಲಭೆಯಲ್ಲಿ ಹತ್ಯೆಯಾದ ತಮ್ಮ ಮಗನ ಸಾವಿಗೆ ನ್ಯಾಯ ದೊರಕದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಾಹು, 7 ಬಾರಿ ಶಾಸಕ ಮತ್ತು ಬಘೆಲ್ ಸರ್ಕಾರದಲ್ಲಿ ಸಚಿವರಾಗಿದ್ದ ರವೀಂದ್ರ ಚೌಬೆ ಅವರನ್ನೇ ಹೀನಾಯವಾಗಿ ಸೋಲಿಸಿದ್ದಾರೆ. ಈ ಮೂಲಕ ವೃತ್ತಿಯಲ್ಲಿ ಕೃಷಿಕರಾಗಿರುವ ಈಶ್ವರ ಸಾಹು ತಮ್ಮ ಮಗನ ಸಾವಿನ ಸೇಡನ್ನು ತೀರಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಗಲಭೆಯಲ್ಲಿ ಹತ್ಯೆಯಾಗಿದ್ದ ತನ್ನ ಮಗನ ಸಾವಿನ ವಿರುದ್ಧ ಸೇಡು ತೀರಿಸಿಕೊಳ್ಳಲು ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಂದೆಗೆ ಭರ್ಜರಿ ಗೆಲುವು ಸಿಕ್ಕಿದೆ. 7 ಬಾರಿ ಚುನಾವಣೆ ಗೆದ್ದು ಸಚಿವರಾಗಿದ್ದ  ಅಭ್ಯರ್ಥಿಯ ವಿರುದ್ಧವೇ ಭರ್ಜರಿ ಗೆಲುವು ಸಾಧಿಸಿರುವುದು ಅಚ್ಚರಿಯ ಸಂಗತಿಯಾಗಿದೆ.

2 /5

ಇದೇ ಮೊದಲ ಬಾರಿಗೆ ಸಜಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದ ಬಿಜೆಪಿ ಅಭ್ಯರ್ಥಿ, ವೃತ್ತಿಯಲ್ಲಿ ಕೃಷಿಕರಾಗಿರುವ ಈಶ್ವರ್‌ ಸಾಹು, ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ಕಾಂಗ್ರೆಸ್‌ ಅಭ್ಯರ್ಥಿ ರವೀಂದ್ರ ಚೌಬೆ ವಿರುದ್ಧ 40 ಸಾವಿರಕ್ಕೂ ಅಧಿಕ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.  

3 /5

2023ರ ಏಪ್ರಿಲ್ 8ರಂದು ಸಜಾ ಕ್ಷೇತ್ರದ ಗ್ರಾಮದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ವೇಳೆ 2 ಸಮುದಾಯಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು. ಈ ಘಟನೆ ನಡೆದ 4 ದಿನಗಳ ಬಳಿಕ ಗ್ರಾಮದಲ್ಲಿ ಅಲ್ಪಸಂಖ್ಯಾತ ಸಮುದಾಯದ ಈಶ್ವರ್ ಸಾಹು ಅವರ ಮಗ ಭುವನೇಶ್ವರ ಸಾಹು ಹತ್ಯೆಯಾಗಿದ್ದರು. ಪರಿಣಾಮ ಛತ್ತೀಸ್‌ಗಢದ ಭೂಪೇಶ್ ಬಘೇಲ್ ಸರ್ಕಾರದ ವಿರುದ್ಧ ಜನಾಕ್ರೋಶ ಎದುರಾಗಿತ್ತು. ತಮ್ಮ ಮಗನ ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಈಶ್ವರ್ ಸಾಹು ಪ್ರತಿಭಟನೆ ಕೈಗೊಂಡಿದ್ದರು.

4 /5

ಛತ್ತೀಸ್‌ಗಢದ ಕಾಂಗ್ರೆಸ್‌ ಸರ್ಕಾರವು ಕೊಲೆಯಾದ ಭುವನೇಶ್ವರ್ ಸಾಹು ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿತ್ತು. ಆದರೆ ಈಶ್ವರ್ ಸಾಹು ಕುಟುಂಬ ಈ ಪರಿಹಾರ ಪಡೆಯಲು ನಿರಾಕರಿಸಿತ್ತು. ನಮಗೆ ಹಣ ಮತ್ತು ಸರ್ಕಾರಿ ಉದ್ಯೋಗದ ಬದಲು ನ್ಯಾಯ ಬೇಕು ಅಂತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಬಿಜೆಪಿ ಈಶ್ವರ್ ಸಾಹುಗೆ ಟಿಕೆಟ್‌ ನೀಡಿತ್ತು.

5 /5

ಸದ್ಯ ಈಶ್ವರ್‌ ಸಾಹು ಅವರು 40 ಸಾವಿರಕ್ಕೂ ಹೆಚ್ಚು ಮತಗಳ ಅಂತದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಗಲಭೆಯಲ್ಲಿ ಸಾವನ್ನಪ್ಪಿದ ತಮ್ಮ ಪುತ್ರನಿಗೆ ತಂದೆ ನ್ಯಾಯ ಕೊಡಿಸಿದ್ದಾರೆ ಅಂತಾ ಅನೇಕರು ಈಶ್ವರ್ ಸಾಹುಗೆ ಶುಭಾಶಯ ತಿಳಿಸಿದ್ದಾರೆ. ವೃತ್ತಿಯಲ್ಲಿ ಕೃಷಿಕರಾಗಿರುವ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದಕ್ಕೆ ಸಹ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.