Kailash Kher suicide : ಪ್ರತಿಯೊಬ್ಬ ನಟನೂ ಬಾಲಿವುಡ್ಗೆ ಕಾಲಿಡಲು ಬಯಸುತ್ತಾನೆ. ಆ ದಿಸೆಯಲ್ಲಿಯೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾ ಒಂದೊಂದೆ ಹೆಜ್ಜೆಗಳನ್ನು ಇಡುತ್ತಾರೆ. ಪ್ರತಿದಿನ ಅನೇಕ ಜನರು ಹಲವಾರು ಕನಸುಗಳೊಂದಿಗೆ ಬಣ್ಣದ ಲೋಕಕ್ಕೆ ಬರುತ್ತಾರೆ.. ಆದರೆ ಇಲ್ಲಿ ಗೆಲ್ಲುವುದು ಅಷ್ಟು ಸುಲಭವಲ್ಲ..
ಪ್ರತಿಯೊಬ್ಬ ನಟನೂ ಬಾಲಿವುಡ್ಗೆ ಕಾಲಿಡಲು ಬಯಸುತ್ತಾನೆ. ಆ ದಿಸೆಯಲ್ಲಿ ಶ್ರಮ ವಹಿಸುತ್ತಾರೆ.. ಆದರೆ ಅದು ಅಷ್ಟು ಸರಳವಲ್ಲ. ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಲ್ಲವನ್ನೂ ಎದುರಿಸಿ, ಏಳುಬೀಳುಗಳನ್ನು ಗೆದ್ದು, ಯಶಸ್ಸು ಗಳಿಸುವುದ ಸಾಮಸ್ಯವಲ್ಲ.. ಸಧ್ಯ ಸಾಕಷ್ಟು ಸಮಸ್ಯೆಗಳ ಸುಳಿಯಲ್ಲಿ ಸಿಕ್ಕು, ಬಿದ್ದು ಎದ್ದು ಸ್ಟಾರ್ಗಿರಿ ಪಡೆದ ಈ ಸಿಂಗರ್ ಕಥೆ ನಿಮಗೆ ಸ್ಪೂರ್ತಿ ನೀಡುತ್ತೆ..
ಕೈಲಾಶ್ ಖೇರ್ ಈ ಹೆಸರನ್ನು ದೇಶದ ಜನ ಕೇಳಿಯೇ ಇರುತ್ತಾರೆ.. ಕನ್ನಡಿಗರಿಗೂ ಇವರ ಹಾಡುಗಳು ಅಚ್ಚು ಮೆಚ್ಚು. ಕೈಲಾಶ್ ತಮ್ಮ ಹಾಡುಗಳ ಮೂಲಕ ಕೋಟ್ಯಂತರ ಜನರ ಪ್ರೀತಿಯನ್ನ ಗಳಿಸಿದಸ್ದಾರೆ. ಇಂತಹ ಸಿಂಗರ್ ಬದುಕು ಇದ್ದಕ್ಕಿದ್ದಂತೆ ಕತ್ತಲೆ ಕೂಪದಲ್ಲಿ ಮುಳುಗಿತ್ತು.
ಗಾಯಕ ಕೈಲಾಶ್ ಖೇರ್ ಗಾಯನವನ್ನು ತಮ್ಮ ತಂದೆಯಿಂದ ಕಲಿತರು. 14ನೇ ವಯಸ್ಸಿನಲ್ಲಿ ಏನಾದರೂ ಮಾಡಬೇಕೆಂಬ ಕನಸನ್ನು ಹೊತ್ತು ಮನೆ ಬಿಟ್ಟ, ಸಿಂಗರ್ ಪ್ರಯಾಣ ಅಷ್ಟು ಸರಳವಾಗಿರಲಿಲ್ಲ. ಊಟ, ನಿದ್ದೆ, ಇರಲು ಸರಿಯಾದ ಸ್ಥಳ ಇಲ್ಲದೆ ಹೋರಾಡಬೇಕಾಯಿತು..
20-21ನೇ ವಯಸ್ಸಿನಲ್ಲಿ.. ಕೈಲಾಶ್ ಖೇರ್ ಹಾಡುವುದನ್ನು ಬಿಟ್ಟು ರಫ್ತು ಉದ್ಯಮಕ್ಕೆ ಸೇರಿದರು. ಆದರೆ ಅವರ ಹಣೆಬರಹದಲ್ಲಿ ಬೇರೆಯೇ ಬರೆದಿತ್ತು. ಆ ವ್ಯವಹಾರವು ನಷ್ಟ ಅನುಭವಿಸಿತು. ಇದರಿಂದಾಗಿ ತೀವ್ರ ಖಿನ್ನತೆಗೆ ಒಳಗಾಗಿದ್ದ ಕೈಲಾಶ್ ಆತ್ಮಹತ್ಯೆಗೂ ಪ್ರಯತ್ನಿ ನದಿಗೆ ಹಾರಿ ಬದುಕುಳಿದರು..
ಕೈಲಾಶ್ ಖೇರ್ 2001 ರಲ್ಲಿ ಮುಂಬೈಗೆ ಬಂದರು. ಇಲ್ಲಿಂದ ಅವರ ಬದುಕು ಬದಲಾಯಿತು. ಜಾಹೀರಾತಿಗೆ ಜಿಂಗಲ್ಸ್ ಬರೆಯುವ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಕ್ರಮೇಣ ಸಂಗೀತದ ಹಾದಿಯನ್ನು ಹಿಡಿದರು. 'ರಬ್ಬಾ ಇಷ್ಕ್ ನಾ ಹೋ' ಹಾಡಿನ ಮೂಲಕ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡರು. ಆ ನಂತರ ಅವರು ಅನೇಕ ಹಿಟ್ ಹಾಡುಗಳನ್ನು ನೀಡಿದರು.
ಕೈಲಾಸ್ ಖೇರ್ ಹಾಡಿದ ‘ಅಲ್ಲಾ ಕೆ ಬಂದೆ’ ಹಾಡು ಬಹಳ ಜನಪ್ರಿಯವಾಯಿತು. ಈ ಹಾಡು ಅವರನ್ನು ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಿ ಮಾಡಿತು. ಇಂದು ಕೈಲಾಶ್ ಖೇರ್ ತಮ್ಮ ವೈವಿಧ್ಯಮಯ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ. ಗಾಯಕನ ದೊಡ್ಡ ವಿಶೇಷತೆಯೆಂದರೆ.. ಅವರ ಧ್ವನಿ, ಅವರ ಹಾಡುಗಳು ಇಂದಿಗೂ ಪ್ರಪಂಚದಾದ್ಯಂತ ಕೇಳುಗರ ಹೃದಯವನ್ನು ಗೆಲ್ಲುತ್ತವೆ.
ಪ್ರತಿ ಹಾಡಿಗೆ ರೂ.50 ಚಾರ್ಜ್ ಮಾಡುತ್ತಿದ್ದ ಕೈಲಾಶ್ ಖೇರ್ ಈಗ ಪ್ರತಿ ಹಾಡಿಗೆ ಲಕ್ಷಗಟ್ಟಲೆ ಸಂಪಾದಿಸುತ್ತಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ, ಈ ಗಾಯಕ ತನ್ನ ಪ್ರತಿ ಹಾಡಿಗೆ 10 ರಿಂದ 20 ಲಕ್ಷ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಕೈಲಾಶ್ ಒಟ್ಟು ಸಂಪತ್ತು 292 ಕೋಟಿ ರೂ.