Expensive Cars in 2024: ಹೊಸ ವರ್ಷಕ್ಕೆ ಈ ಕಾರುಗಳು ಮತ್ತಷ್ಟು ದುಬಾರಿ!

Car price hike in 2024: ಈಗಾಗಲೇ ಮಾರುತಿ, ಹ್ಯುಂಡೈ ಮತ್ತು ಟಾಟಾ ಸೇರಿದಂತೆ ಹಲವು ಕಾರು ಕಂಪನಿಗಳು ತಮ್ಮ ವಿವಿಧ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ. ಈ ನೂತನ ಬೆಲೆಯು ಜನವರಿ 2024ರಿಂದಲೇ ಜಾರಿಗೆ ಬರಲಿದೆ.

ನವದೆಹಲಿ: 2024ರ ಹೊಸ ವರ್ಷಕ್ಕೆ ಇನ್ನೇನು ಕೆಲವೇ ವಾರಗಳು ಬಾಕಿ ಇವೆ. 2023 ಮುಗಿದು ಹೊಸ ವರ್ಷ ಆರಂಭವಾಗುತ್ತಿದ್ದಂತೆಯೇ ದೇಶ-ವಿದೇಶದಲ್ಲಿ ಹಲವಾರು ಬದಲಾವಣೆಗಳಾಗಲಿವೆ. ಸದ್ಯ ಹಣ್ಣು-ತರಕಾರಿ, ಪೆಟ್ರೋಲ್-ಡೀಸೆಲ್, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯಿಂದ ದೇಶದ ಜನರು ಕಂಗಾಲಾಗಿ ಹೋಗಿದ್ದಾರೆ. ಹೊಸ ವರ್ಷವೂ ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ತಟ್ಟುತ್ತಾ ಅನ್ನೋ ಟೆನ್ಶನ್ ಹೆಚ್ಚಾಗಿದೆ. ಈ ನಡುವೆ ಜನಪ್ರಿಯ ಕಾರು ಕಂಪನಿಗಳು ತಮ್ಮ ವಿವಿಧ ಕಾರುಗಳ ಬೆಲೆ ಏರಿಸಲು ನಿರ್ಧರಿಸಿವೆ. ಈಗಾಗಲೇ ಮಾರುತಿ, ಹ್ಯುಂಡೈ ಮತ್ತು ಟಾಟಾ ಸೇರಿದಂತೆ ಹಲವು ಕಾರು ಕಂಪನಿಗಳು ತಮ್ಮ ವಿವಿಧ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿವೆ. ಈ ನೂತನ ಬೆಲೆಯು ಜನವರಿ 2024ರಿಂದಲೇ ಜಾರಿಗೆ ಬರಲಿದೆ. ಹೊಸ ವರ್ಷದಂದು ಯಾವ್ಯಾವ ಕಂಪನಿಗಳ ಕಾರುಗಳ ಬೆಲೆ ಏರಿಕೆಯಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

2023ರ ನವೆಂಬರ್ ಅಂತ್ಯದ ವೇಳೆಗೆ ಮಾರುತಿ ತನ್ನ ಅರೆನಾ ಮತ್ತು ನೆಕ್ಸಾ ಕಾರುಗಳ ಬೆಲೆಯನ್ನು ಏರಿಕೆ ಮಾಡುವುದಾಗಿ ಘೋಷಿಸಿತು. 2024ರ ಜನವರಿಯಿಂದ ಹೊಸ ದರಗಳು ಜಾರಿಗೆ ಬರಲಿವೆ. ಸರಕುಗಳ ಬೆಲೆ ಹೆಚ್ಚಳ ಮತ್ತು ಹಣದುಬ್ಬರದ ಕಾರಣ ನೀಡಿ ಕಂಪನಿ ಬೆಲೆ ಏರಿಕೆ ಮಾಡಿದೆ.

2 /5

2024 ಜನವರಿಯಿಂದ ಜಾರಿಗೆ ಬರುವಂತೆ ಜನಪ್ರಿಯ ಜನಪ್ರಿಯ ಕಾರು ಕಂಪನಿ ಹುಂಡೈ ತನ್ನ ವಿವಿಧ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ವೆಚ್ಚ ಹೆಚ್ಚಳ, ಅಧಿಕ ವಿನಿಮಯ ದರ ಮತ್ತು ಸರಕುಗಳ ಬೆಲೆ ಏರಿಕೆ ಕಾರಣ ನೀಡಿ ಕಂಪನಿಯು ಬೆಲೆ ಏರಿಕೆ ಘೋಷಿಸಿದೆ.

3 /5

ಟಾಟಾ ಮೋಟಾರ್ಸ್ ತನ್ನ ICE ಮತ್ತು EV ಸೇರಿದಂತೆ ಎಲ್ಲಾ ಮಾಡೆಲ್‌ಗಳ ಬೆಲೆಯನ್ನು 2024ರ ಜನವರಿಯಿಂದ ಹೆಚ್ಚಿಸುವುದಾಗಿ ತಿಳಿಸಿದೆ. ಟಾಟಾ ಪ್ರಸ್ತುತ EV ಸೇರಿದಂತೆ 10ಕ್ಕೂ ಹೆಚ್ಚು ಮಾಡೆಲ್‍ಗಳ ಕಾರುಗಳನ್ನು ಹೊಂದಿದೆ.  

4 /5

ದೇಶದ ಜನಪ್ರಿಯ ಕಾರು ಉತ್ಪಾದಕ ಕಂಪನಿ ಮಹೀಂದ್ರ & ಮಹೀಂದ್ರ ಕೂಡ ತನ್ನ ಕಾರುಗಳ ಬೆಲೆ ಏರಿಸುವುದಾಗಿ ತಿಳಿಸಿದೆ. ಎಲ್ಲಾ XUV400 EV ಸೇರಿದಂತೆ ಮಹೀಂದ್ರ ಮಾಡೆಲ್‌ಗಳು 2024ರ ಜನವರಿಯಿಂದ ಮತ್ತಷ್ಟು ದುಬಾರಿಯಾಗಲಿವೆ. ಅಧಿಕ ವೆಚ್ಚ ಮತ್ತು ಹಣದುಬ್ಬರದ ಕಾರಣ ನೀಡಿ ಕಂಪನಿಯು ಬೆಲೆ ಏರಿಕೆ ಘೋಷಿಸಿದೆ.

5 /5

ಜನಪ್ರಿಯ ಐಷಾರಾಮಿ ವಾಹನ ತಯಾರಕ ಸಂಸ್ಥೆ ಆಡಿ ಸಹ 2024ರ ಜನವರಿಯಿಂದ ಜಾರಿಗೆ ಬರುವಂತೆ ತನ್ನ ಎಲ್ಲಾ ಕಾರುಗಳ ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಅಧಿಕ ವೆಚ್ಚದ ಕಾರಣ ನೀಡಿ ಬೆಲೆ ಏರಿಸುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಆಡಿ ಒಟ್ಟು 15 ಮಾಡೆಲ್‌ಗಳನ್ನು ಹೊಂದಿದ್ದು, ಈ ಪೈಕಿ 4 EV ಸಹ ಸೇರಿವೆ.