Calcium For Bone Health: ಈ ಐದು ಆಹಾರಗಳನ್ನು ಸೇವಿಸಿದರೆ ಸ್ನಾಯು ನೋವು ಒಂದು ವಾರದಲ್ಲಿ ಗುಣವಾಗುತ್ತದೆ

Calcium For Bone Health: ಸ್ನಾಯು ನೋವಿನ ಸಮಸ್ಯೆಯಿಂದ ಬಳಲುತ್ತಿರುವ ಜನರು ಕ್ಯಾಲ್ಸಿಯಂ ಹೆಚ್ಚಾಗಿರುವ  ಆಹಾರವನ್ನು ಸೇರಿಸಬಹುದು. ನಮ್ಮ ದೇಹದಲ್ಲಿ 99% ಕ್ಯಾಲ್ಸಿಯಂ ಮೂಳೆಗಳಲ್ಲಿದ್ದರೆ, 1% ಹಲ್ಲುಗಳಲ್ಲಿರುತ್ತದೆ. ನೀವು ಪ್ರತಿದಿನ ಕ್ಯಾಲ್ಸಿಯಂ ಭರಿತ ಆಹಾರವನ್ನು ಬಳಸಿದರೆ, ಮೂಳೆ ಮುರಿತದ ಅಪಾಯವೂ ಕಡಿಮೆಯಾಗುತ್ತದೆ. ಬಲವಾದ ಮೂಳೆಗಳಿಲ್ಲದೆ, ನಾವು ದೈನಂದಿನ ಕೆಲಸಗಳನ್ನು ಸಹ ಮಾಡಲು ಸಾಧ್ಯವಿಲ್ಲ. ಆದ್ದರಿಂದ, ಅವುಗಳನ್ನು ಬಲಪಡಿಸಲು, ನಿಮ್ಮ ಆಹಾರದಲ್ಲಿ ಈ ಐದು ಕ್ಯಾಲ್ಸಿಯಂ ಭರಿತ ಆಹಾರಗಳನ್ನು ಸೇರಿಸಿ.

1 /5

ಪ್ರೋಟೀನ್ ಕೊರತೆಯನ್ನು ನೀಗಿಸಲು ಸೋಯಾಬೀನ್ ಅನ್ನು ಸೇವಿಸಿ. ಅದನ್ನು ಆಹಾರದಲ್ಲಿ ಸೇರಿಸುವ ಮೂಲಕ, ನಿಮ್ಮ ಮೂಳೆಗಳನ್ನು ಬಲಪಡಿಸಬಹುದು. ಇದಕ್ಕಾಗಿ ನೀವು ಸೋಯಾ ಚಂಕ್, ಸೋಯಾ ಹಾಲನ್ನು ಸೇವಿಸಬಹುದು.

2 /5

ಮೂಳೆಗಳನ್ನು ಬಲಪಡಿಸಲು ಆಹಾರದಲ್ಲಿ ಹಾಲು ಮತ್ತು ಅದರಿಂದ ತಯಾರಿಸಿದ ಆಹಾರವನ್ನು ಸೇವಿಸಿ. ಸಾಧ್ಯವಾದಷ್ಟು ಹಾಲು, ಮೊಸರು ಮತ್ತು ಚೀಸ್ ಅನ್ನು ಬಳಸಬೇಕು. ಇವುಗಳ ಸೇವನೆಯಿಂದ ಶಕ್ತಿ ಪಡೆಯಬಹುದು.

3 /5

ಜೀರಿಗೆ ಸಾಂಬಾರ ಪದಾರ್ಥವಾಗಿದ್ದು ಇದನ್ನು ಮನೆಗಳಲ್ಲಿ ದಿನನಿತ್ಯ ಬಳಸುತ್ತಾರೆ. ನೀವು ಕ್ಯಾಲ್ಸಿಯಂ ಕೊರತೆಯನ್ನು ಸರಿದೂಗಿಸಲು ದಿನಕ್ಕೆ ನಾಲ್ಕರಿಂದ ಐದು ಬಾರಿ ಒಂದು ಟೀ ಚಮಚ ಜೀರಿಗೆಯೊಂದಿಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯಿರಿ.

4 /5

ಬಾದಾಮಿ ತಿನ್ನುವುದರಿಂದ ಮೆದುಳು ಚುರುಕಾಗುತ್ತದೆ. ಆದರೆ ಇದನ್ನು ತಿನ್ನುವುದರಿಂದ ಮೂಳೆಗಳಿಗೆ ಅದ್ಭುತವಾದ ಪ್ರಯೋಜನಗಳು ಸಿಗುತ್ತವೆ. ಇದರಿಂದ ಮೂಳೆಗಳು ಗಟ್ಟಿಯಾಗುತ್ತವೆ. ಇದರಲ್ಲಿ ಕ್ಯಾಲ್ಸಿಯಂ ಕೂಡ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ.

5 /5

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಇದು ಕೂದಲು ಮತ್ತು ಚರ್ಮವನ್ನು ಚೆನ್ನಾಗಿರಿಸುತ್ತದೆ. ಇದರ ಹೊರತಾಗಿ ಇದು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ. ಈ ಕಾರಣಕ್ಕಾಗಿ ಇದನ್ನು ಸೇವಿಸುವುದರಿಂದ ದೇಹವು ಸದೃಢವಾಗುತ್ತದೆ.