ಚಳಿಗಾಲದಲ್ಲಿ ಉತ್ತಮ ಆರೋಗ್ಯಕ್ಕಾಗಿ ಈ ಆಹಾರಗಳನ್ನು ತಪ್ಪದೇ ಸೇವಿಸಿ

ಚಳಿಗಾಲದಲ್ಲಿ ಹೆಚ್ಚು ಫ್ರೆಶ್ ಆಗಿ ಸಿಗುವ ಈ ಹಣ್ಣು ತರಕಾರಿಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. 

Winter Diet: ಯಾವುದೇ ಸೀಸನ್‌ನಲ್ಲಿ ದೊರೆಯುವ ಹಣ್ಣು- ತರಕಾರಿಗಳನ್ನು ಆ ಸೀಸನ್‌ನಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನ ಲಭ್ಯವಾಗುತ್ತದೆ. ಅದೇ ರೀತಿ, ಕೆಲವು ತರಕಾರಿಗಳು ಬೇರೆ ಋತುವಿನಲ್ಲಿ ಲಭ್ಯವಿರುತ್ತದೆ ಆದರೂ, ಚಳಿಗಾಲದಲ್ಲಿ ಹೆಚ್ಚು ಫ್ರೆಶ್ ಆಗಿ ಸಿಗುವ ಈ ಹಣ್ಣು ತರಕಾರಿಗಳನ್ನು ನಿಮ್ಮ ಆಹಾರದ ಭಾಗವಾಗಿಸುವುದರಿಂದ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಅಂತಹ ಹಣ್ಣು ತರಕಾರಿಗಳ ಬಗ್ಗೆ ಇಲ್ಲಿದೆ ಮಾಹಿತಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಖರ್ಜೂರ : ಚಳಿಗಾಲದಲ್ಲಿ ಒಣ ಖರ್ಜೂರವನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಖರ್ಜೂರದ ಸೇವನೆಯಿಂದ ದೇಹವು ಬೆಚ್ಚಗಿರುತ್ತದೆ. ಆಯುರ್ವೇದದಲ್ಲೂ ಖರ್ಜೂರವು ಪ್ರಯೋಜನಕಾರಿ ಎಂದು ಹೇಳಲಾಗಿದ್ದು, ಇದರಿಂದ ಹಲವು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

2 /5

ಕ್ಯಾರೆಟ್:   ಚಳಿಗಾಲಕ್ಕೆ ಕ್ಯಾರೆಟ್ ಬೆಸ್ಟ್ ತರಕಾರಿ. ಕ್ಯಾರೆಟನ್ನು ಹೇಗೆ ತಿಂದರೂ ದೇಹಕ್ಕೆ ಉಪಯೋಗ. ಹಸಿಯಾಗಿ ತಿಂದರೆ ದೈಹಿಕ ಶಕ್ತಿ ಹೆಚ್ಚುತ್ತದೆ. ಬೇಯಿಸಿ ತಿಂದರೆ ವಿಟಮಿನ್ ಎ ದೊರೆಯುತ್ತದೆ. ಕ್ಯಾರೆಟ್ ಜ್ಯೂಸ್ ಕುಡಿದರೆ ಕೇವಲ ಆರೋಗ್ಯ ಮಾತ್ರವಲ್ಲ, ಸೌಂದರ್ಯವೂ ಹೆಚ್ಚುತ್ತದೆ. ಕ್ಯಾರೆಟ್ ಜ್ಯೂಸ್ ಸೇವಿಸಿದರೆ ತ್ವಚೆ ಒಳಗಿನಿಂದಲೇ ಶುದ್ಧಗೊಂಡು ಹೊಳೆಯುವಂತೆ ಮಾಡುತ್ತದೆ.

3 /5

ಸಿಹಿ ಗೆಣಸು :  ಸಿಹಿ ಗೆಣಸನ್ನು ಶಾಸ್ತ್ರಕ್ಕಾಗಿ ಸಂಕ್ರಾತಿಯ ಹಬ್ಬದಂದು ಮಾತ್ರ ಸೇವಿಸದೇ ಬೇರೆ ಸಮಯದಲ್ಲಿಯೂ ಇದು ಸೇವನೆ ಮಾಡಲೇಬೇಕಾದ ಸೂಪರ್ ಫುಡ್ ಆಗಿದೆ. ಏಕೆಂದರೆ ಇದರಲ್ಲಿನ ಪೌಷ್ಟಿಕ ಸತ್ವವು ದೇಹ ಹಾಗೂ ಚರ್ಮಕ್ಕೆ ಬೇಕಾದ ತೇವಾಂಶವನ್ನು ನೀಡುತ್ತದೆ.

4 /5

ಮೂಲಂಗಿ :  ಮೂಲಂಗಿ ಈ ಚಳಿಗಾಲದಲ್ಲಿ ಹೇರಳವಾಗಿರುವ ದೊರೆಯುವ ತರಕಾರಿಯಾಗಿದೆ. ಮೂಲಂಗಿಯಲ್ಲಿ ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿದೆ, ಇದು ರಕ್ತದೊತ್ತಡದ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಕಾರ್ಯವನ್ನು ಸೂಕ್ತವಾಗಿ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ.

5 /5

ಪಾಲಕ್ ಸೊಪ್ಪು : ಚಳಿಗಾಲದಲ್ಲಿ ಪಾಲಕ್ ಸೊಪ್ಪನ್ನು ಬಳಸುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಲ್ಲಿ ಹೇರಳ ಪ್ರಮಾಣದಲ್ಲಿ ಕ್ಯಾಲ್ಸಿಯಂ, ಸೋಡಿಯಂ, ಕ್ಲೋರಿನ್, ರಂಜಕ, ಪ್ರೋಟೀನ್ ಮತ್ತು ಕಬ್ಬಿಣ ಇರುತ್ತದೆ. ಪಾಲಕ್ ರಸವು ಅನೇಕ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.