Shani-Shukra Yuti 2024 Rajyoga: ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ಒಂದು ನಿಗದಿತ ಸಮಯದಲ್ಲಿ ಸಾಗುತ್ತಿರುತ್ತವೆ. ಗ್ರಹಗಳ ಸಂಚಾರದಿಂದ ಶುಭ ಯೋಗ ಮತ್ತು ರಾಜಯೋಗವು ರೂಪುಗೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗ್ರಹಗಳ ಸಂಕ್ರಮಣವು ಭೂಮಿಯ ಮೇಲಿನ ಎಲ್ಲಾ ಜೀವಿಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂಬುದು ನಂಬಿಕೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್’ನಲ್ಲಿ 2 ರಾಜಯೋಗಗಳು ಏಕಕಾಲದಲ್ಲಿ ರೂಪುಗೊಳ್ಳಲಿವೆ.
ಈ ರಾಜಯೋಗವು ಶುಕ್ರ ಮತ್ತು ಶನಿದೇವರಿಂದ 500 ವರ್ಷಗಳ ನಂತರ ಸೃಷ್ಟಿಯಾಗಲಿದೆ. ಜ್ಯೋತಿಷಿಗಳ ಪ್ರಕಾರ ಶನಿದೇವ ಶಶರಾಜಯೋಗವನ್ನು ಸೃಷ್ಟಿ ಮಾಡಿದರೆ, ಶುಕ್ರದೇವನು ಮಾಲವ್ಯರಾಜಯೋಗವನ್ನು ಸೃಷ್ಟಿಸಲಿದ್ದಾನೆ. ಎರಡೂ ಗ್ರಹಗಳ ರಾಜಯೋಗ ರಚನೆಯಿಂದ ಕೆಲವು ರಾಶಿಗಳ ಭವಿಷ್ಯ ಬದಲಾಗಲಿದೆ.
ಆ ರಾಶಿಗಳು ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ವೃತ್ತಿಜೀವನದಲ್ಲಿ ಯಶಸ್ಸನ್ನು ಸಹ ಪಡೆಯಬಹುದು. ಹಾಗಾದರೆ ಆ ಅದೃಷ್ಟದ ರಾಶಿಗಳ ಯಾವುವು ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮಾಳವ್ಯ ರಾಜಯೋಗ ಮತ್ತು ಶಶ ರಾಜಯೋಗವು ಬಹಳ ಶುಭಕರವಾಗಿರುತ್ತದೆ. ವೃತ್ತಿ ಮತ್ತು ವ್ಯವಹಾರದ ವಿಷಯದಲ್ಲಿ ಇದು ವ್ಯಕ್ತಿಗೆ ಬಹಳ ಮಂಗಳಕರವೆಂದು ಸಾಬೀತುಪಡಿಸುತ್ತದೆ. ಈ ಸಮಯದಲ್ಲಿ ವ್ಯಕ್ತಿಯು ಅದೃಷ್ಟವನ್ನು ಪಡೆಯುತ್ತಾನೆ. ಇದರೊಂದಿಗೆ ಬುದ್ಧಿವಂತಿಕೆ ಮತ್ತು ಜ್ಞಾಪಕ ಶಕ್ತಿ ಹೆಚ್ಚುತ್ತದೆ.
ತುಲಾ ರಾಶಿ: ಶನಿ ದೇವ ಮತ್ತು ಶುಕ್ರ ದೇವನಿಂದ ರಚಿಸಲ್ಪಟ್ಟ ರಾಜಯೋಗವು ತುಲಾ ರಾಶಿಯ ಜನರಿಗೆ ಬಹಳ ಮಂಗಳಕರವಾಗಿರುತ್ತದೆ. ಜ್ಯೋತಿಷಿಗಳ ಪ್ರಕಾರ, ಶನಿಯು ತುಲಾ ರಾಶಿಯ ಐದನೇ ಮನೆಯಲ್ಲಿ ಸಂಚರಿಸುತ್ತಿದ್ದರೆ, ಶುಕ್ರನು ಆರನೇ ಮನೆಯಲ್ಲಿ ಇರಲಿದ್ದಾನೆ. ಈ ಎರಡು ಗ್ರಹಗಳ ಕಾರಣದಿಂದಾಗಿ, ತುಲಾ ರಾಶಿಯ ಜನರ ಮನಸ್ಸಿನಲ್ಲಿ ಏಕಾಗ್ರತೆ ಜೊತೆ ಬುದ್ಧಿವಂತಿಕೆಯೂ ಹೆಚ್ಚುತ್ತದೆ. ಪ್ರಗತಿಯ ಹೊಸ ಹಾದಿಗಳು ತೆರೆದುಕೊಳ್ಳುತ್ತವೆ.
ಕುಂಭ ರಾಶಿ: ಶಶ ರಾಜಯೋಗ ಮತ್ತು ಮಾಲವ್ಯ ರಾಜಯೋಗವು ಈ ರಾಶಿಗೆ ಅದೃಷ್ಟವನ್ನು ತರಲಿದೆ. ಜ್ಯೋತಿಷಿಗಳ ಪ್ರಕಾರ, ಶನಿದೇವನು ಕುಂಭ ರಾಶಿಯ ಲಗ್ನ ಮನೆಯಲ್ಲಿ ಶಶ ರಾಜಯೋಗವನ್ನು ಸೃಷ್ಟಿಸಿದರೆ, ಶುಕ್ರ ಗ್ರಹವು ಸಂಪತ್ತಿನ ಮನೆಯಲ್ಲಿ ಸಂಚರಿಸಲಿದ್ದಾನೆ. ಈ ಎರಡೂ ರಾಜಯೋಗಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚಿಸುತ್ತವೆ. ವೃತ್ತಿಜೀವನದಲ್ಲಿ ಯಶಸ್ವಿಯಾಗಲು ಅನೇಕ ಅವಕಾಶಗಳನ್ನು ಸಹ ಪಡೆಯುತ್ತೀರಿ. ಹಠಾತ್ ಆರ್ಥಿಕ ಲಾಭವಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಜ್ಯೋತಿಷ್ಯವನ್ನು ಆಧರಿಸಿದೆ ಮತ್ತು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ ಅದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಯಾವುದೇ ಪರಿಹಾರವನ್ನು ತೆಗೆದುಕೊಳ್ಳುವ ಮೊದಲು, ಸಂಬಂಧಪಟ್ಟ ವಿಷಯದ ತಜ್ಞರನ್ನು ಸಂಪರ್ಕಿಸಿ.