17 ವರ್ಷಗಳ ಕ್ರಿಕೆಟ್ ಕೆರಿಯರ್’ಗೆ ಸ್ಟಾರ್ ಬ್ಯಾಟರ್ ನಿವೃತ್ತಿ ಘೋಷಣೆ: ಕೊಹ್ಲಿ ಜೊತೆ ವಿಶ್ವಕಪ್ ಗೆದ್ದಿದ್ದ ಟೀಂ ಇಂಡಿಯಾದ ದಿಗ್ಗಜನೀತ!

Saurabh Tiwary Retirement: ಫೆಬ್ರವರಿ 16ರಿಂದ ಜೆಮ್‌ಶೆಡ್‌ಪುರದಲ್ಲಿ ನಡೆಯಲಿರುವ ಜಾರ್ಖಂಡ್ ಮತ್ತು ರಾಜಸ್ಥಾನ ನಡುವಿನ ಅಂತಿಮ ರಣಜಿ ಟ್ರೋಫಿ ಲೀಗ್ ಪಂದ್ಯದ ನಂತರ ಎಡಗೈ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ವೃತ್ತಿಪರ ಕ್ರಿಕೆಟ್‌’ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿರದ ಎಡಗೈ ಬ್ಯಾಟ್ಸ್‌ಮನ್ ಸೌರಭ್ ತಿವಾರಿ ವೃತ್ತಿಪರ ಕ್ರಿಕೆಟ್‌’ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ.

2 /5

ಸೌರಭ್ ತಿವಾರಿ ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಜಾರ್ಖಂಡ್ ಅನ್ನು ಪ್ರತಿನಿಧಿಸಿದ್ದರು. ಇನ್ನು ಟೀಂ ಇಂಡಿಯಾ ಪರ ಮೂರು ಏಕದಿನ ಪಂದ್ಯಗಳನ್ನು ಆಡಿದ್ದು, ಐಪಿಎಲ್‌’ನಲ್ಲಿ ನಾಲ್ಕು ಫ್ರಾಂಚೈಸಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.

3 /5

ESPN ಕ್ರಿಕ್‌ ಇನ್‌ಫೋ ಪ್ರಕಾರ “ನಾನು ನನ್ನ ಶಾಲಾ ಶಿಕ್ಷಣಕ್ಕೂ ಮೊದಲು ಪ್ರಾರಂಭಿಸಿದ ಈ ಪ್ರಯಾಣಕ್ಕೆ ವಿದಾಯ ಹೇಳುವುದು ಸ್ವಲ್ಪ ಕಷ್ಟ. ಆದರೆ ಇದು ಅದಕ್ಕೆ ಸರಿಯಾದ ಸಮಯ ಎಂದು ನಾನು ನಂಬುತ್ತೇನೆ. ರಾಷ್ಟ್ರೀಯ ತಂಡ ಮತ್ತು ಐಪಿಎಲ್‌’ನಲ್ಲಿ ಆಡದಿದ್ದರೆ, ರಾಜ್ಯ ತಂಡದಲ್ಲಿ ಯುವ ಆಟಗಾರನಿಗೆ ಜಾಗವನ್ನು ಮುಕ್ತಗೊಳಿಸುವುದು ಸರಿ ಎಂದು ನನಗೆ ಅನಿಸುತ್ತದೆ. ನಮ್ಮ ಟೆಸ್ಟ್ ತಂಡದಲ್ಲಿ ಹಲವು ಯುವ ಆಟಗಾರರಿಗೆ ಅವಕಾಶ ಸಿಗುತ್ತಿದೆ ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ” ಎಂದು ತಿವಾರಿ ವಿದಾಯ ಘೋಷಣೆ ಮಾಡಿದ್ದಾರೆ.

4 /5

ಸೌರಭ್ ತಿವಾರಿ ಅವರು 2010 ರಲ್ಲಿ ಭಾರತದ ಮೂರು ODI ಪಂದ್ಯಗಳನ್ನು ಆಡಿದ್ದರು. ಇದರಲ್ಲಿ ಅವರು 49 ರನ್ ಗಳಿಸಿದ್ದಾರೆ. 115 ಪ್ರಥಮ ದರ್ಜೆ ಪಂದ್ಯಗಳಲ್ಲಿ 47.51 ಸರಾಸರಿಯಲ್ಲಿ 8030 ರನ್ ಗಳಿಸಿದ್ದಾರೆ.ಇದರಲ್ಲಿ 22 ಶತಕಗಳು ಮತ್ತು 34 ಅರ್ಧ ಶತಕಗಳು ಸೇರಿವೆ.

5 /5

ಐಪಿಎಲ್‌’ನಲ್ಲಿ 93 ಪಂದ್ಯಗಳಲ್ಲಿ 28.73 ಸರಾಸರಿಯಲ್ಲಿ 1494 ರನ್ ಗಳಿಸಿದ್ದಾರೆ. ಇನ್ನು 181 ಟಿ20 ಪಂದ್ಯಗಳನ್ನಾಡಿದ್ದು 3454 ರನ್ ಗಳಿಸಿದ್ದಾರೆ. ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಸೌರಭ್ ತಿವಾರಿ ನಾಲ್ಕು ಪಂದ್ಯಗಳನ್ನು ಆಡಿದ್ದು, ಜಾರ್ಖಂಡ್ ತಂಡ ಈಗಾಗಲೇ ನಾಕೌಟ್‌ ರೇಸ್‌’ನಿಂದ ಹೊರಗುಳಿದಿದೆ.