ಪ್ರತಿನಿತ್ಯ ಒಣದ್ರಾಕ್ಷಿ ಪಾನೀಯ ಸೇವಿಸಿ ಈ ಏಳು ಸಮಸ್ಯೆಗಳಿಂದ ದೂರವಿರಿ

ಒಣ ದ್ರಾಕ್ಷಿಯನ್ನು ಹಾಗೇ ತಿನ್ನುವುದಕ್ಕಿಂತ ನೀರಿನಲ್ಲಿ ನೆನೆಸಿ, ಆ ನೀರನ್ನು ಕುಡಿಯುವುದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. 

  • Aug 21, 2018, 19:10 PM IST

ಇತ್ತೀಚಿನ ದಿನಗಳಲ್ಲಿ ಮಾನವನ ಯಾಂತ್ರಿಕ ಜೀವನಶೈಲಿಯಿಂದಾಗಿ ಹೃದಯ ಸಮಸ್ಯೆಗಳು ಮತ್ತು ಜೀರ್ಣಕ್ರಿಯೆ ಸಮಸ್ಯೆಗಳು ಹೆಚ್ಚುತ್ತಲೇ ಇವೆ. ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು, ನಿದ್ದೆ ಮಾಡದಿರುವುದು, ಅಗತ್ಯ ಪೌಷ್ಟಿಕ ಆಹಾರದ ಕೊರತೆ ...ಹೀಗೆ ಹಲವು ಅಂಶಗಳು ಕಾರಣವಾಗುತ್ತವೆ. ಈ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಔಷಧಿಗಳ ಮೊರೆ ಹೋಗದೆ, ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಕೆಲವು ಮನೆಮದ್ದುಗಳನ್ನು ಬಳಸುವುದು ಸೂಕ್ತ. ಅವುಗಳಲ್ಲಿ ಒಣ ಹಣ್ಣುಗಳ ಸೇವನೆ ನಿಮ್ಮ ದೇಹದ ಆರೋಗ್ಯದ ಜೊತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡುತ್ತವೆ. ಅವುಗಳಲ್ಲಿ ಒಣ ದ್ರಾಕ್ಷಿ ಅತಿ ಮುಖ್ಯವಾದುದು. ಇದನ್ನು ಹಾಗೇ ತಿನ್ನುವುದಕ್ಕಿಂತ ನೀರಿನಲ್ಲಿ ನೆನೆಸಿ, ಆ ನೀರನ್ನು ಕುಡಿಯುವುದರಿಂದ ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. 

1 /7

ಒಣದ್ರಾಕ್ಸಿಯನ್ನು 20 ನಿಮಿಷಗಳ ಕಾಲ ನೀರಿನಲ್ಲಿ ಹಾಕಿ ಕುದಿಸಿ, ಒಂದು ರಾತ್ರಿ ಹಾಗೇ ಇಟ್ಟು ಬೆಳಿಗ್ಗೆ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ದೊರೆಯಲಿವೆ. 

2 /7

ಪ್ರತಿನಿತ್ಯ ಬೆಳಿಗ್ಗೆ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯುವುದರಿಂದ ಮಲಬದ್ಧತೆ ನಿವಾರಣೆಯಾಗಿ ಗ್ಯಾಸ್ಟ್ರಿಕ್ ಸಮಸ್ಯೆಯೂ ಪರಿಹಾರವಾಗುತ್ತದೆ.   

3 /7

ಪ್ರತಿನಿತ್ಯ ಬೆಳಿಗ್ಗೆ ಒಣದ್ರಾಕ್ಷಿ ನೆನೆಸಿದ ನೀರನ್ನು ಕುಡಿಯುವುದರಿಂದ ಕೊಲೆಸ್ಟ್ರಾಲ್ ಪ್ರಮಾಣ ಸಮತೋಲನದಲ್ಲಿರಲು ಸಹಾಯ ಮಾಡುತ್ತದೆ.   

4 /7

ಒಣ ದ್ರಾಕ್ಷಿ ನೆನೆಸಿದ ನೀರನ್ನು ಪ್ರತಿನಿತ್ಯ ಕುಡಿಯುವುದರಿಂದ ಹೃದಯದ ಆರೋಗ್ಯ ಹೆಚ್ಚಾಗಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಉಪ್ಪು ನೀರಿನೊಂದಿಗೆ ಎಅರ್ದು ಬೆಳ್ಳುಳ್ಳಿ ಎಸಳುಗಳನ್ನು ತಿನ್ನುವುದರಿಂದ ರಕ್ತದೊತ್ತಡ ಸಾಮಾನ್ಯವಾಗಿರುತ್ತದೆ.

5 /7

ಒಣದ್ರಾಕ್ಷಿಯಲ್ಲಿ ಆಂಟಿಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗಿರುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಚರ್ಮ ಸುಕ್ಕುಗಟ್ಟುವಿಕೆಯನ್ನು ಕಡಿಮೆ ಮಾಡಿ, ಬೇಗ ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ. 

6 /7

ಪ್ರತಿನಿತ್ಯ ಖಾಲಿ ಹೊಟ್ಟೆಗೆ ಕಪ್ಪು ಒಣದ್ರಾಕ್ಷಿ ನೀರನ್ನು ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗಿ ಜೀರ್ಣಕ್ರಿಯೆ ತ್ವರಿತವಾಗುತ್ತದೆ. 

7 /7

ಪ್ರತಿನಿತ್ಯ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ಮತ್ತು ನಿಂಬೆ ರಸವನ್ನು ಬಿಸಿ ನೀರಿನೊಂದಿಗೆ ಕುಡಿಯುವುದರಿಂದ ಯಕೃತ್ತು ಶುದ್ಧವಾಗುತ್ತದೆ. ಅಲ್ಲದೆ, ಚಯಾಪಚಯ ಶಕ್ತಿಯೂ ಹೆಚ್ಚಾಗುತ್ತದೆ.  (Pic Courtey: Pinterest/Instagram)