Dreams: ನಿಮಗೆ ಬೀಳುವ 5 ಸಾಮಾನ್ಯ ಕನಸುಗಳ ಅರ್ಥವನ್ನು ತಿಳಿಯಿರಿ

ನಾವು ನಿದ್ರೆಯಲ್ಲಿದ್ದಾಗ ಅನೇಕ ಕನಸುಗಳು ಬೀಳುತ್ತವೆ. ಕೆಲವು ಕನಸುಗಳು ಒಳ್ಳೆಯದಾಗಿದ್ದರೆ, ಇನ್ನು ಕೆಲವು ಕನಸುಗಳು ಕೆಟ್ಟದ್ದಾಗಿರುತ್ತವೆ.

ನವದೆಹಲಿ: ಮಲಗಿರುವಾಗ ಬರುವ ಕನಸುಗಳು ನಮ್ಮ ನಿಜ ಜೀವನಕ್ಕೆ ಸಂಬಂಧಿಸಿರುತ್ತವೆ. ಆದ್ದರಿಂದ ನಿಮಗೆ ಬೀಳುವ ಕನಸುಗಳ ಸಂಕೇತಗಳನ್ನು ನಿರ್ಲಕ್ಷಿಸಬೇಡಿ. ಈ ಕನಸುಗಳ ಬಗ್ಗೆ ನೀವು ವಿಶೇಷ ಗಮನ ನೀಡಬೇಕು. ಕೆಲವು ಸಾಮಾನ್ಯ ಕನಸುಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಕನಸುಗಳ ಬಗ್ಗೆ ತಿಳಿದುಕೊಳ್ಳುವುದು ನಿಜವಾಗಿಯೂ ಆಸಕ್ತಿದಾಯಕ ಸಂಗತಿಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕನಸಿನಲ್ಲಿ ನಿಮ್ಮ ಸಂಗಾತಿ ಮೋಸ ಮಾಡುವುದನ್ನು ಕಾಣುವುದು ಸಂಬಂಧದ ಬಗ್ಗೆ ನಿಮಗೆ ಕಳವಳಕ್ಕೆ ಕಾರಣವಾಗಬಹುದು. ಈ ವಿಧಾನದ ಕನಸು ನಿಜ ಜೀವನದಲ್ಲಿ ನಿಮ್ಮ ಸಂಬಂಧದಲ್ಲಿನ ನಂಬಿಕೆಯ ಕೊರತೆಯನ್ನು ತೋರಿಸುತ್ತದೆ. ನಿಮ್ಮಿಬ್ಬರ ನಡುವೆ 3ನೇ ವ್ಯಕ್ತಿ ಪ್ರವೇಶವಾಗಿದ್ದು, ಆತ ಆಗಾಗ್ಗೆ ನಿಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡುತ್ತಾನೆಂಬುದು ಇದರರ್ಥ.

2 /5

ನಿಮ್ಮ ಕನಸಿನಲ್ಲಿ ನೀವು ಬಹಳಷ್ಟು ಹಣವನ್ನು ಕಂಡರೆ? ಇದರ ಅರ್ಥವನ್ನು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ನಿಮ್ಮ ಕನಸಿನಲ್ಲಿ ಹಣವನ್ನು ನೋಡುವುದು ಎಂದರೆ ನಿಮ್ಮ ಜೀವನದಲ್ಲಿ ನೀವು ಯಶಸ್ಸನ್ನು ಪಡೆಯಲು ಬಯಸುತ್ತೀರಿ. ಇಷ್ಟು ಮಾತ್ರವಲ್ಲದೆ ಅಧಿಕಾರ ಪಡೆಯುವ ಆಸೆಯೂ ನಿಮ್ಮ ಮನಸ್ಸಿನಲ್ಲಿ ಮೂಡುತ್ತಿದೆ ಎಂದರ್ಥ.

3 /5

ಕನಸಿನಲ್ಲಿ ಭಗವಂತನನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ಧರ್ಮದ ಹಾದಿಯಲ್ಲಿ ಮುಂದುವರಿಯಲು ದೇವರು ನಿಮಗೆ ಸೂಚನೆ ನೀಡುತ್ತಿದ್ದಾನೆ ಎಂದರ್ಥ. ಕಷ್ಟದಲ್ಲಿರುವ ವ್ಯಕ್ತಿಗೆ ಕನಸಿನಲ್ಲಿ ದೇವರು ಕಾಣಿಸಿಕೊಂಡರೆ, ನೀವು ತಾಳ್ಮೆಯಿಂದಿರಬೇಕು ಎಂದರ್ಥ.

4 /5

ನೀವು ಕನಸಿನಲ್ಲಿ ಹಾರುತ್ತಿರುವುದನ್ನು ನೋಡಿದರೆ, ಇದು 2 ಅರ್ಥಗಳನ್ನು ಹೊಂದಿರಬಹುದು. ನಿಮ್ಮ ಕನಸಿನಲ್ಲಿ ಹಾರಲು ನೀವು ಸಂತೋಷಪಟ್ಟರೆ, ನಿಮ್ಮ ಜೀವನದಲ್ಲಿ ಬರುವ ಅನುಭವಕ್ಕಾಗಿ ನೀವು ಉತ್ಸುಕರಾಗಿದ್ದೀರಿ ಎಂದರ್ಥ. ಮತ್ತೊಂದೆಡೆ ನಿಮ್ಮ ಕನಸಿನಲ್ಲಿ ಹಾರುತ್ತಿರುವಾಗ ನೀವು ಭಯಭೀತರಾಗುತ್ತಿದ್ದರೆ, ನೀವು ಮುಂಬರುವ ಹೊಸ ಅನುಭವದ ಬಗ್ಗೆ ಚಿಂತೆ ಅಥವಾ ಭಯಪಡುತ್ತೀರಿ ಎಂದರ್ಥ.

5 /5

ಕನಸಿನಲ್ಲಿ ನೀವು ಶಾಲೆಯನ್ನು ನೋಡಿದ್ದರೆ ನಿಮ್ಮ ಜೀವನವು ಸಂತೋಷದಿಂದ ತುಂಬಿರುತ್ತದೆ ಎಂದರ್ಥ. ಈ ವಿಧಾನದ ಕನಸು ನೀವು ಶೀಘ್ರದಲ್ಲೇ ಯಶಸ್ಸನ್ನು ಪಡೆಯುತ್ತೀರಿ ಎಂದು ಸೂಚಿಸುತ್ತದೆ. ಈ ಓಟದ ಬದುಕಿನಲ್ಲಿ ಅನೇಕ ಬಾರಿ ಜನರು ಶಾಲಾ ಜೀವನವನ್ನು ನೆನಪಿಸಿಕೊಳ್ಳುತ್ತಾರೆ.