ಡಾ. ಮನೋಜ್ ಕುಮಾರ್ ಕೃಷ್ಣಪ್ಪ ಅವರಿಗೆ ಜೀ ʼಯುವರತ್ನʼ ಪ್ರಶಸ್ತಿ ಪ್ರದಾನ..!

Zee Kannada News Yuvaratna Awards : ಯುವಜನಕ್ಕೆ ಸ್ಪೂರ್ತಿಯಾಗುವ ನಿಟ್ಟಿನಲ್ಲಿ ಸಾಧಕರನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಜೀ ಕನ್ನಡ ನ್ಯೂಸ್‌ ಮಾಡುತ್ತಿದೆ. ಅದರಂತೆ 2023-24 ರ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ, ಒಟ್ಟು 35 ಜನ ಯುವ ಸಾಧಕರನ್ನು ಗುರುತಿಸಿ, ಅವರಿಗೆ ಸನ್ಮಾನ ಮಾಡಿ ಗೌರವಿಸಿ "ಯುವರತ್ನ ಪ್ರಶಸ್ತಿ" ಪ್ರದಾನ ಮಾಡಲಾಯಿತು. 

1 /5

ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ತಳಮಟ್ಟದಿಂದ ಬೆಳೆದು ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.

2 /5

ಈ ಪೈಕಿ ಡಾ. ಮನೋಜ್ ಕುಮಾರ್ ಕೃಷ್ಣಪ್ಪ, ಇಟಾಚಿ ಸಂಸ್ಥೆಯ ಹೋಲ್ ಟೈಮ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್ ಅವರ ಸಾಧನೆಯನ್ನು ಗುರುತಿಸಿ ಜೀ ನ್ಯೂಸ್‌ ʼಯುವ ರತ್ನ ಪ್ರಶಸ್ತಿʼ ಪ್ರಧಾನ ಮಾಡಿ ಗೌರವಿಸಿತು.   

3 /5

ಡಾ. ಮನೋಜ್ ಕುಮಾರ್ ಕೃಷ್ಣಪ್ಪ ಇವರು ಇಟಾಚಿ ಸಂಸ್ಥೆಯ ಹೋಲ್ ಟೈಮ್ ಡೈರೆಕ್ಟರ್ ಮತ್ತು ಕಂಟ್ರಿ ಹೆಡ್. ವಿಕಸಿತ ಭಾರತದ ಕನಸು ಕಾಣ್ತಿರೋ ಸುಸಮಯದಲ್ಲಿ ಸಾರ್ವಜನಿಕರಿಗೆ ಅತ್ಯಗತ್ಯವಾಗಿರೋ ಮೆಟ್ರೋ ಸೇವೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ..  

4 /5

ಮನೋಜ್ ಕುಮಾರ್ ಅವರು ಯುದ್ದ ವಿಮಾನ ತೇಜಸ್ ಹಾಗೂ ಕಲ್ಕತ್ತ ಅಂಡರ್ ವಾಟರ್ ಮೆಟ್ರೋ ಪ್ರಾಜೆಕ್ಟ್ ಜಮ್ಮು ಕಾಶ್ಮೀರ ಮೆಟ್ರೋ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿರೂ ಕನ್ನಡಿಗ ಇವರು..  

5 /5

ಜನರಿಗೆ ಅತ್ಯಂತ ಸುರಕ್ಷಿತ ಸೇವೆ ಕಲ್ಪಿಸಿ ಕೊಡೋದೆ ನಮ್ಮ ಧ್ಯೇಯ ಅನ್ನೋ ಇವರ ಸೇವೆ ಸದಾ ಮುಂದುವರೆಯುತ್ತಿದೆ. ಮನೋಜ್ ಕುಮಾರ್ ಕೃಷ್ಣಪ್ಪ ಅವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್ ಹೆಮ್ಮೆ ಪಡುತ್ತದೆ.