BBK11: ಒಬ್ಬರಲ್ಲ.. ಇಬ್ಬರು ಘಟಾನುಘಟಿ ಸ್ಪರ್ಧಿಗಳೇ ಔಟ್.. 16ನೇ ವಾರ ಬಿಗ್ ಬಾಸ್ ಮನೆಯಲ್ಲಿ ಡಬಲ್ ಎಲಿಮಿನೇಷನ್ ಟ್ವಿಸ್ಟ್!‌

Bigg Boss Kannada 11 Double Elimination: ಬಿಗ್‌ಬಾಸ್‌ ಕನ್ನಡ 11 ಫಿನಾಲೆಗೆ ಸಮೀಪಿಸುತ್ತಿದ್ದಂತೆಯೇ ಮನೆಯಿಂದ ಒಬ್ಬೊಬ್ಬರಾಗಿ ಹೊರಗೆ ಕಾಲಿಡುತ್ತಿದ್ದಾರೆ. ಸದ್ಯ ಉಳಿದ 8 ಸ್ಪರ್ಧಿಗಳಲ್ಲಿ 16ನೇ ವಾರ ಇಬ್ಬರು ಎಲಿಮಿನೇಟ್‌ ಆಗುತ್ತಾರೆ ಎನ್ನುವುದು ಪಕ್ಕಾ ಎಂದು ಹೇಳಲಾಗುತ್ತಿದೆ.. 

1 /6

ಬಿಗ್‌ಬಾಸ್‌ ಮನೆಯಲ್ಲಿ ಉಳಿದಿರೋ 8 ಸ್ಪರ್ಧಿಗಳಿಗೆ ಪ್ರತಿ ಹೆಜ್ಜೆಗೊಂದು ಟ್ವಿಸ್ಟ್‌ ನೀಡಲಾಗುತ್ತಿದೆ.. ಇದೇ ವಾರದಲ್ಲಿ ಮಿಡ್‌ವೀಕ್‌ ಎಲಿಮಿನೇಷನ್‌ ನಡೆಯಲಿದೆ ಎಂದು ಹೇಳಲಾಗಿತ್ತು.. ಆದರೆ ಇದನ್ನು ಕೊನೆ ಕ್ಷಣದಲ್ಲಿ ರದ್ದು ಮಾಡಲಾಯಿತು.. ಆ ಮೂಲಕ ಮನೆಯಿಂದ ಯಾರೂ ಹೊರಬರಲಿಲ್ಲ..   

2 /6

ನಡುರಾತ್ರಿ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಶಾಕ್‌ ನೀಡಿದ ಬಿಗ್‌ಬಾಸ್‌ ಮಂಜು, ಮೋಕ್ಷಿತಾ, ಗೌತಮಿ, ಭವ್ಯಾ, ತ್ರಿವಿಕ್ರಮ್‌, ರಜತ್, ಅವರ ಹಾರ್ಟ್‌ಬೀಟ್‌ ಹೆಚ್ಚಾಗಿತ್ತು.. ಕೊನೆಗೆ ಯಾರೂ ಮುಖ್ಯದಾರದಿಂದ ಹೊರಬರುವಂತಿಲ್ಲ ಎಂದು ಘೋಷಣೆ ಮಾಡಲಾಗಿತ್ತು..    

3 /6

ಇದರ ಬಳಿಕ ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಮತ್ತೊಂದು ಬಿಗ್‌ಟ್ವಿಸ್ಟ್‌ ಎದುರಾಯಿತು.. ಧನರಾಜ್‌ ಟಾಸ್ಕ್‌ನಲ್ಲಿ ಮೋಸಮಾಡಿರುವುದಾಗಿ ತಿಳಿದುಬಂದಿದ್ದು, ಇದರಿಂದ ಧನರಾಜ್‌ಗೆ ನೀಡಲಾಗಿದ್ದ ಇಮ್ಯೂನಿಟಿಯನ್ನು ಹಿಂಪಡೆಯಲಾಯಿತು.. ಇದರಿಂದ ಧನರಾಜ್‌ ಅವರು ಸಹ ನಾಮಿನೇಟ್‌ ಆದವರ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ..  

4 /6

ಬಿಗ್‌ಬಾಸ್‌ ನಿಯಮಾವಳಿಯಂತೆ ಈ ವಾರಾಂತ್ಯದಲ್ಲಿ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಹೋಗುವುದು ಪಕ್ಕಾ ಆಗಿದೆ.. ಇದಲ್ಲದೇ ನಾಳೆ ಕಿಚ್ಚನ ಪಂಚಾಯಿತಿಯಲ್ಲಿ ಹಲವು ವಿಚಾರಗಳು ಚರ್ಚೆಯಾಗಲಿದ್ದು, ಡಬಲ್‌ ಎಲಿಮಿನೇಷಬ್‌ ನಡೆಯುವುದಂತೂ ಖಚಿತ ಎನ್ನಲಾಗಿದೆ..   

5 /6

ಸದ್ಯ ಬಿಗ್‌ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ಹನುಮಂತನನ್ನು ಹೊರತುಪಡಿಸಿ ಉಳಿದ ಏಳು ಸ್ಪರ್ಧಿಗಳು ಡೇಂಜರ್‌ ಝೋನ್‌ನಲ್ಲಿದ್ದಾರೆ.. ಫಿನಾಲೆಗೆ ಒಂದೇ ಒಂದು ವಾರ ಬಾಕಿ ಇರುವಾಗಲೇ ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್,  ರಜತ್, ಗೌತಮಿ, ಧನರಾಜ್, ಮಂಜು ಇವರಲ್ಲಿ ಈ ವಾರ ಇಬ್ಬರು ತಮ್ಮ ಬಿಗ್‌ಬಾಸ್‌ ಪ್ರಯಾಣವನ್ನು ಅಂತ್ಯ ಗೊಳಿಸುತ್ತಾರೆ..   

6 /6

ಸೋಷಿಯಲ್‌ ಮಿಡಿಯಾದಲ್ಲಿ ಪ್ರಸ್ತುತ ನಡೆಯುತ್ತಿರುವ ಚರ್ಚೆಯ ಪ್ರಕಾರ ಧನರಾಜ್‌, ಗೌತಮಿ, ರಜತ್ ಈ ಮೂವರಲ್ಲಿ ಇಬ್ಬರು ಈ ವಾರ ಮನೆಯಿಂದ ಹೊರಹೋಗಲಿದ್ದಾರೆ ಎನ್ನಲಾಗುತ್ತಿದೆ.. ಆದರೆ ಈ ಬಗ್ಗೆ ಅಧಿಕೃತ ಮಾಹಿತಿಗಳಿಲ್ಲ.. ಇವು ಬರೀ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಊಹಾಪೋಹಗಳಾಗಿವೆ.. ಹಾಗಾಗಿ ಬಿಗ್‌ಬಾಸ್‌ ಮನೆಯಿಂದ ಯಾರು ಹೊರಹೋಗುತ್ತಾರೆ ಎನ್ನುವುದನ್ನು ತಿಳಿಯಲು ಮುಂದಿನ ಸಂಚಿಕೆಯವರೆಗೂ ಕಾಯಬೇಕಿದೆ..