Donkey Export In Pakistan: China ಜನರಿಗಾಗಿ ಕತ್ತೆಗಳನ್ನು ಸಾಕುತ್ತಿದೆ ಪಾಕಿಸ್ತಾನ, ಕಾರಣ ಗೊತ್ತಾ?

Donkey Export In Pakistan - ಆರ್ಥಿಕ ಸಮೀಕ್ಷೆಯ ಪ್ರಕಾರ ಪಾಕಿಸ್ತಾನದಲ್ಲಿ (Pakistan) 2019-20ರ ಹೋಲಿಕೆಯಲ್ಲಿ 2020-21ರಲ್ಲಿ ಪಶುಗಳ ಸಂಖ್ಯೆ 19 ಲಕ್ಷ ಏರಿಕೆಯಾಗಿದೆ. ಕತ್ತೆಗಳ ಸಂಖ್ಯೆಯೂ ಕೂಡ 55 ಲಕ್ಷದಿಂದ 56 ಲಕ್ಷಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ - Corona Vaccine ಹಾಕಿಸಿಕೊಂಡ ಬಳಿಕ ದೇಹದಲ್ಲಿ ಕಾಂತೀಯ ಶಕ್ತಿಯ ಸಂಚಾರ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಪಾಕಿಸ್ತಾನದಲ್ಲಿ ಕತ್ತೆಗಳಿಗೆ ಹೆಚ್ಚು ಪ್ರಾಮುಖ್ಯತೆ ಇದೆ: ಪಾಕ್ (Pakistan) ನಲ್ಲಿ 'ಕತ್ತೆಗಳು ಹಾಗೂ ವಕೀಲರು ಗಲ್ಲಿ-ಗಲ್ಲಿ'ಗಳಲ್ಲಿ ಸಿಗುತ್ತಾರೆ ಎಂಬ ಮಾತು ಹೇಳಲಾಗುತ್ತದೆ. ಅಲ್ಲಿ ಕತ್ತೆಗಳು ಆರ್ಥಿಕತೆಯ ಬೆನ್ನೆಲುಬಾಗಿವೆ ಎಂದೂ ಕೂಡ ಹೇಳಲಾಗುತ್ತದೆ. ಏಕೆಂದರೆ ಪಾಕಿಸ್ತಾನ ಪ್ರಸ್ತುತ ಕತ್ತೆಗಳ ರಫ್ತು ಮಾಡಿ ವಿದೇಶ ಹೂಡಿಕೆಯನ್ನು ಪಡೆಯುತ್ತಿದೆ. ಕಳೆದ ಒಂದು ವರ್ಷದಲ್ಲಿ ರಫ್ತು ಮಾಡಿದ ಬಳಕವೂ ಕೂಡ ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ.   

2 /5

2. ಔಷಧ ತಯಾರಿಕೆಯಲ್ಲಿ ಬಳಕೆಯಾಗುತ್ತದೆ - ಚೀನಾದಲ್ಲಿ ಕತ್ತೆಗಳನ್ನು ಔಷಧಿ ತಯಾರಿಕೆಗಾಗಿ ಬಳಸಲಾಗುತ್ತದೆ. ಚೀನಾದ ಈ ಅವಶ್ಯಕತೆಯನ್ನು ಪೂರೈಸಲು ಪಾಕಿಸ್ತಾನ ಕತ್ತೆಗಳನ್ನು ಸಾಕುತ್ತದೆ. ಕಳೆದ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ಕತ್ತೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಪಾಕಿಸ್ತಾನದಲ್ಲಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಅಂದರೆ 2020-21 ರಲ್ಲಿ ಕತ್ತೆಗಳ ಸಂಖ್ಯೆಯಲ್ಲಿ 1 ಲಕ್ಷ ಏರಿಕೆಯಾಗಿ 56 ಲಕ್ಷಕ್ಕೆ ತಲುಪಿದೆ. ಕಳೆದ ವರ್ಷ ಈ ಸಂಖ್ಯೆ ಸುಮಾರು 55 ಲಕ್ಷದಷ್ಟಿತ್ತು. ಪಾಕಿಸ್ತಾನದ ಆರ್ಥಿಕ ಸಮೀಕ್ಷೆ 2020-21ರಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.  

3 /5

3. ಆರ್ಥಿಕ ಸಮೀಕ್ಷೆಯಲ್ಲಿ (Economic Survey) ಈ ಮಾಹಿತಿ ಬಹಿರಂಗ - ಗುರುವಾರ ಪಾಕ್ ವಿತ್ತ ಸಚಿವರಾಗಿರುವ ಶೌಕತ್ ತಾರೀನ್ ಆರ್ಥಿಕ ಸಮೀಕ್ಷೆ-2020-21ನ್ನು (Economic Survey 2020-21) ಜಾರಿಗೊಳಿಸಿದ್ದಾರೆ. ಈ ಆರ್ಥಿಕ ಸಮೀಕ್ಷೆಯ ಪ್ರಕಾರ, ಕಳೆದ ಒಂದು ವರ್ಷದ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಕುದುರೆಗಳು (Horse)ಹಾಗೂ ಹೆಸರಗತ್ತೇಗಳ (Mare) ಸಂಖ್ಯೆ ಸ್ಥಿರವಾಗಿದೆ. ಪಾಕಿಸ್ತಾನ ಕತ್ತೆಗಳನ್ನು ಚೀನಾಗೆ ರವಾನಿಸುತ್ತದೆ. ಕತ್ತೆಗಳ ಚರ್ಮಕ್ಕೆ ಚೀನಾದಲ್ಲಿ ಭಾರಿ ಬೇಡಿಕೆ ಇದ್ದು, ಅದರಿಂದ ಔಷಧಿ ತಯಾರಿಸಲಾಗುತ್ತದೆ.

4 /5

4. ಔಷಧಿ ತಯಾರಿಕೆಯಲ್ಲಿ ಬಳಕೆ - ಪಾಕಿಸ್ತಾನದ ವತಿಯಿಂದ ಚೀನಾಗೆ ಕತ್ತೆಗಳನ್ನು ಕಳುಹಿಸಲಾಗುತ್ತದೆ. ಚೀನಾದಲ್ಲಿ ಕತ್ತೆಗಳಿಗೆ ಭಾರಿ ಬೇಡಿಕೆ ಇದೆ. ಇದರಿಂದ ಪಾಕಿಸ್ತಾನಕ್ಕೆ ಸಾಕಷ್ಟು ಆದಾಯ ಹರಿದುಬರುತ್ತದೆ. ಚೀನಾದಲ್ಲಿ ಸಾಂಪ್ರದಾಯಿಕ ಔಷಧಿ (Traditional Medicine) ತಯಾರಿಕೆಯಲ್ಲಿ ಕತ್ತೆಗಳ ಚರ್ಮವನ್ನು (Donkey Skin) ಬಳಸಲಾಗುತ್ತದೆ. ಕತ್ತೆಗಳ ಸ್ಕಿನ್ ನಿಂದ ಉತ್ಪತ್ತಿಯಾಗುವ ಜಿಲೆಟಿನ್ ಔಷಧೀಯ ಗುಣಗಳನ್ನು ಹೊಂದಿದೆ. ಇದರಿಂದ ರಕ್ತ (Blood Level) ಹಾಗೂ ಇಮ್ಯೂನಿಟಿ (Immunity) ಮಟ್ಟ ಭಾರಿ ಸುಧಾರಿಸುತ್ತದೆ.

5 /5

5. ಹೆಚ್ಚಾದ ಕತ್ತೆಗಳ ಸಂಖ್ಯೆ - ಆರ್ಥಿಕ ಸಮೀಕ್ಷೆಯ ಪ್ರಕಾರ ಪಾಕಿಸ್ತಾನದಲ್ಲಿ 2019-20ರ ಹೋಲಿಕೆಯಲ್ಲಿ 2020-21ರಲ್ಲಿ ಪಶುಗಳ ಸಂಖ್ಯೆ 19 ಲಕ್ಷ ಏರಿಕೆಯಾಗಿದೆ (Increase In Donkies Number ). ಕತ್ತೆಗಳ ಸಂಖ್ಯೆಯೂ ಕೂಡ 55 ಲಕ್ಷದಿಂದ 56 ಲಕ್ಷಕ್ಕೆ ಏರಿಕೆಯಾಗಿದೆ. ಪಾಕಿಸ್ತಾನದಲ್ಲಿ ಒಟ್ಟು ಜಾನುವಾರುಗಳ ಸಂಖ್ಯೆ 2 ಕೋಟಿ 13 ಲಕ್ಷ 10 ಸಾವಿರರಷ್ಟಿದೆ. 2019-20 ರಲ್ಲಿ ಈ ಸಂಖ್ಯೆ 2 ಕೋಟಿ ಏಳು ಲಕ್ಷರಷ್ಟಿತ್ತು.