ಲೈಫ್ ಇನ್ಶುರೆನ್ಸ್ ಮಾಡಿಸುವಾಗ ಈ ವಿಚಾರಗಳು ತಿಳಿದಿರಲಿ ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ .!

ನಿಗದಿತ ಅವಧಿಯಲ್ಲಿ ಪಾಲಿಸಿದಾರರ ಮರಣ ಹೊಂದಿದರೆ ಆ  ಸಂದರ್ಭದಲ್ಲಿ ಪಾಲಿಸಿದಾರರ ಪ್ರೀತಿಪಾತ್ರರಿಗೆ ಮೊತ್ತವನ್ನು ಪಾವತಿಸುವುದಾಗಿ ವಿಮಾ ಕಂಪನಿ ಭರವಸೆ ನೀಡುತ್ತದೆ. 

ಬೆಂಗಳೂರು : ಜೀವ ವಿಮಾ ಪಾಲಿಸಿಯು ಪಾಲಿಸಿದಾರ ಮತ್ತು ವಿಮಾ ಕಂಪನಿಯ ನಡುವಿನ ಒಪ್ಪಂದವಾಗಿದೆ. ಜೀವ ವಿಮಾ ಪಾಲಿಸಿಯಲ್ಲಿ, ನಿಗದಿತ ಅವಧಿಯಲ್ಲಿ ಪಾಲಿಸಿದಾರರ ಮರಣ ಹೊಂದಿದರೆ ಆ  ಸಂದರ್ಭದಲ್ಲಿ ಪಾಲಿಸಿದಾರರ ಪ್ರೀತಿಪಾತ್ರರಿಗೆ ಮೊತ್ತವನ್ನು ಪಾವತಿಸುವುದಾಗಿ ವಿಮಾ ಕಂಪನಿ ಭರವಸೆ ನೀಡುತ್ತದೆ. ಪ್ರತಿಯಾಗಿ ಪಾಲಿಸಿದಾರರು ವಿಮಾ ಕಂಪನಿಗೆ ಸಣ್ಣ ಮೊತ್ತವನ್ನು ಪ್ರೀಮಿಯಂ ಆಗಿ ಪಾವತಿಸುತ್ತಾರೆ. ಯಾವುದೇ ಜೀವ ವಿಮೆಯನ್ನು ತೆಗೆದುಕೊಳ್ಳುವ ಮೊದಲು, ವಿಮೆಯನ್ನು ತೆಗೆದುಕೊಳ್ಳುವ ವ್ಯಕ್ತಿಯು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು, ಅವುಗಳು ಈ ಕೆಳಗಿನಂತಿವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ನಾಮಿನಿ : ವಿಮೆ ಮಾಡಿಸಿಕೊಂಡಿರುವ ವ್ಯಕ್ತಿಯನ್ನು ಜೀವ ವಿಮಾದಾರ ಎಂದು ಕರೆಯಲಾಗುತ್ತದೆ. ವಿಮಾದಾರನ ಮರಣದ ನಂತರ, ಅವನ ನಾಮಿನಿಯು ವಿಮಾ ಮೊತ್ತವನ್ನು ಪಡೆಯುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ನಾಮಿನಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು.

2 /4

ಪಾಲಿಸಿ ಅವಧಿ : ಇದು ವಿಮಾ ಕಂಪನಿಯು ವ್ಯಾಪ್ತಿಯನ್ನು ಒದಗಿಸುವ ಅವಧಿಯಾಗಿದೆ. ಜೀವ ವಿಮಾ ಯೋಜನೆಗೆ ಪಾಲಿಸಿ ಅವಧಿಯನ್ನು ಪಾಲಿಸಿಯ ಪ್ರಾರಂಭದಲ್ಲಿ ನಿರ್ಧರಿಸಲಾಗುತ್ತದೆ.   

3 /4

ಡೆತ್ ಬೆನಿಫಿಟ್ : ಇದು ವಿಮಾದಾರನ ಮರಣದ ನಂತರ ವಿಮಾ ಕಂಪನಿಯು ನಾಮಿನಿಗೆ ನೀಡುವ ಮೊತ್ತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವಿಮೆಯನ್ನು ಪ್ರಾರಂಭಿಸುವಾಗ ಈ ಮೊತ್ತವನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕು.

4 /4

ಮೆಚ್ಯೂರಿಟಿ ಬೆನಿಫಿಟ್ :  ಪಾಲಿಸಿ ಅವಧಿ ಪೂರ್ಣಗೊಂಡ ನಂತರ ಪಾಲಿಸಿದಾರನಿಗೆ ನೀಡುವ ಮೊತ್ತ. ಟರ್ಮ್ ಲೈಫ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದೇ ಮೆಚ್ಯೂರಿಟಿ ಪ್ರಯೋಜನವಿಲ್ಲದಿದ್ದರೂ, ಇತರ ಜೀವ ವಿಮಾ ಯೋಜನೆಗಳು ಈ ಸೌಲಭ್ಯವನ್ನು ನೀಡುತ್ತವೆ.