Unhealthy Food Habits: ತಪ್ಪಿಯೂ ಈ ಆಹಾರ ಪದ್ಧತಿ ಅನುಸರಿಸದಿರಿ, ಕೆಡಬಹುದು ಹಲ್ಲುಗಳ ಆರೋಗ್ಯ

ಸೋಡಾ, ಸಿಹಿ ಪಾನೀಯ, ಎನರ್ಜಿ ಡ್ರಿಂಕ್ಸ್ ಗಳಿಂದ ಹಲ್ಲುಗಳಿಗೆ ಹಾನಿಯುಂಟಾಗಬಹುದು. . ಅಲ್ಲದೆ, ಈ ಆಹಾರಗಳು, ಬೊಜ್ಜು, ಹೃದ್ರೋಗಗಳಂಥಹ ಸಮಸ್ಯೆಗಳನ್ನೂ ಉಂಟುಮಾಡಬಹುದು.

ನವದೆಹಲಿ : ಹಲ್ಲುಗಳನ್ನು ಸದೃಢವಾಗಿ ಮತ್ತು ಸುಂದರವಾಗಿಡಲು ಯಾರು ತಾನೇ ಬಯಸುವುದಿಲ್ಲ. ಆದರೆ ಕೆಲವೊಮ್ಮೆ ನಮ್ಮ ಆಹಾರ ಪದ್ಧತಿಯಿಂದ ಹಲ್ಲುಗಳು ಹಾನಿಗೊಳಗಾಗುತ್ತವೆ. ಹಲ್ಲು ಮತ್ತು ಒಸಡುಗಳನ್ನು ಸದೃಢವಾಗಿಡಲು ಬಯಸಿದರೆ, ಮೊದಲು ಆಹಾರ ಪದ್ಧತಿಯತ್ತ ಗಮನ ಕೊಡಬೇಕು. ಮತ್ತು ಕೆಲವು ವಸ್ತುಗಳಿಂದ ದೂರವಿರಬೇಕು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕಪ್ ಕೇಕ್ ಗಳು, ಡೊನಟ್ ನಂಥಹ ಸಕ್ಕರೆ ಆಹಾರ ಪದಾರ್ಥಗಳು ಹಲ್ಲುಗಳ ಆರೋಗ್ಯಕ್ಕೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಇದು ನಿಮ್ಮ ಹಲ್ಲುಗಳ ಹುಳುಕಿಗೆ ಕಾರಣವಾಗುತ್ತದೆ.

2 /5

 ಸೋಡಾ, ಸಿಹಿ ಪಾನೀಯ, ಎನರ್ಜಿ ಡ್ರಿಂಕ್ಸ್ ಗಳಿಂದ ಹಲ್ಲುಗಳಿಗೆ ಹಾನಿಯುಂಟಾಗಬಹುದು. ಅಲ್ಲದೆ, ಈ ಆಹಾರಗಳು, ಬೊಜ್ಜು, ಹೃದ್ರೋಗಗಳಂಥಹ ಸಮಸ್ಯೆಗಳನ್ನೂ ಉಂಟುಮಾಡಬಹುದು. ಈ  ಪಾನೀಯಗಳು ಹಲ್ಲುಗಳಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯಲು ಕಾರಣವಾಗುತ್ತವೆ ಮತ್ತು ಹಲ್ಲಿನ ಹೊರ ಪದರವನ್ನು ಹಾನಿಗೊಳಿಸುತ್ತವೆ. ಇದರಲ್ಲಿರುವ ಆಸಿಡ್ ಗಳು ದೇಹದೊಳಗಿನ ಆಮ್ಲದ ಪ್ರಮಾಣವನ್ನು ಹೆಚ್ಚಿಸುತ್ತವೆ. ಇದು ದಂತಕವಚವನ್ನು ಹಾನಿಗೊಳಿಸುತ್ತದೆ. ಈ ಪಾನೀಯವನ್ನು ಕುಡಿದ ತಕ್ಷಣ ಬ್ರಷ್ ಮಾಡಬೇಕು .  

3 /5

ಬೇಕ್ ಮಾಡಿದ ಸಿಹಿತಿಂಡಿಗಳು ಹಲ್ಲು ಮತ್ತು ಒಸಡುಗಳ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತವೆ. ಕೇಕ್ ಮತ್ತು ಪೇಸ್ಟ್ರಿಗಳಂತಹ ವಸ್ತುಗಳನ್ನು ಬೆಳಿಗ್ಗೆ ತಿನ್ನುವುದನ್ನು ಆದಷ್ಟು ತಪ್ಪಿಸಿ.   

4 /5

ವೈಟ್  ಬ್ರೆಡ್, ಆಲೂಗೆಡ್ಡೆ ಚಿಪ್ಸ್ ಗಳನ್ನೂ ಅತಿಯಾಗಿ ತಿನ್ನುವುದು ಒಳ್ಳೆಯದಲ್ಲ. ಇದರಲ್ಲಿರುವ ಸಂಸ್ಕರಿಸಿದ ಕಾರ್ಬ್ಸ್ ಮತ್ತು ಸ್ಟಾರ್ಚ್  ಹಲ್ಲುಗಳಿಗೆ ಹಾನಿ ಮಾಡುತ್ತದೆ. ವೈಟ್ ಬ್ರೆಡ್ ಮತ್ತು ಚಿಪ್ಸ್  ಹಲ್ಲುಗಳ ಹುಳುಕು ಹೆಚ್ಚಿಸಲು ಕಾರಣವಾಗುತ್ತದೆ. 

5 /5

ಶುಗರ್  ಕ್ಯಾಂಡಿ ಅಥವಾ ಹೆಚ್ಚಿಗೆ ಸಕ್ಕರೆ ತಿನ್ನುವುದರಂದ ಕೂಡಾ ಹಲ್ಲುಗಳಿಗೆ ಹಾನಿ ಮಾಡುತ್ತದೆ. ಇದು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾವನ್ನು ಸೃಷ್ಟಿಸುತ್ತದೆ. ನೈಸರ್ಗಿಕವಾಗಿರುವ ಸಿಹಿ ಪದಾರ್ಥಗಳಾದ ಡೈರಿ ಉತ್ಪನ್ನಗಳು ಮತ್ತು ಹಣ್ಣುಗಳು ಫೈಬರ್ ಮತ್ತು ಖನಿಜಗಳನ್ನು ಹೊಂದಿರುತ್ತವೆ.  ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಅಥವಾ ಟೇಬಲ್ ಶುಗರ್ ಬಾಯಿಯ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದು ಹಲ್ಲುಗಳನ್ನು ದುರ್ಬಲಗೊಳಿಸುತ್ತದೆ.