Remedies: ನಿಮ್ಮ ಮನೆಯಲ್ಲೂ ಇಲಿಗಳ ಕಾಟ ಜಾಸ್ತಿ ಆಗಿದ್ಯಾ? ಈ ಮನೆಮದ್ದನ್ನು ಬಳಸಿ

              

Remedies To Get Rid Of Mice: ಮನೆಯಲ್ಲಿ ಇಲಿಗಳ ಉಪಸ್ಥಿತಿಯು ಕೆಲವೊಮ್ಮೆ ದೊಡ್ಡ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಏಕೆಂದರೆ ಇಲಿಗಳು ಮನೆಯಲ್ಲಿರುವ ಧಾನ್ಯಗಳು ಸೇರಿದಂತೆ ಎಲ್ಲ ಅಗತ್ಯ ಕಾಗದ, ಬಟ್ಟೆಗಳನ್ನು ಹಾಳುಮಾಡುತ್ತವೆ. ಇದಲ್ಲದೆ ಇಲಿಗಳಿಂದಾಗಿ ಅನೇಕ ರೀತಿಯ ಕಾಯಿಲೆಗಳು ಸಹ ಹರಡುತ್ತವೆ. ವಾಸ್ತವವಾಗಿ, ಇಲಿಗಳು ತಮ್ಮ ಕಾಲುಗಳಿಂದ ಮನೆಯ ಎಲ್ಲೆಡೆ ಮೂತ್ರವನ್ನು ಒಯ್ಯುತ್ತವೆ. ಹೀಗಾಗಿ ಕಾಯಿಲೆಗಳು ಹರಡುತ್ತವೆ. ಅದಕ್ಕಾಗಿಯೇ ಇಲಿಗಳನ್ನು ಮನೆಯಿಂದ ಓಡಿಸುವುದು ಅವಶ್ಯಕ. ಮನೆಯಲ್ಲಿರುವ ಇಲಿಗಳ ಕಾಟ ತಪ್ಪಿಸಲು ಜನರು ಮಾರುಕಟ್ಟೆಯಲ್ಲಿ ಸಿಗುವ ಇಲಿ ಔಷಧಿಗಳನ್ನು ಬಳಸುತ್ತಾರೆ. ಆದರೆ ಹಲವು ಬಾರಿ ಇಲಿಗಳು ಮನೆಯೊಳಗೆ ಸಾಯುತ್ತವೆ. ಅದರ ಜಾಲನ್ನು ಹುಡುಕುವುದರೊಳಗೆ ಮನೆಯೆಲ್ಲಾ ದುರ್ವಾಸನೆ ಉಂಟಾಗುತ್ತದೆ. ನೀವೂ ಕೂಡ ನಿಮ್ಮ ಮನೆಯಲ್ಲಿರುವ ಇಲಿಗಳನ್ನು ಓಡಿಸಲು ಬಯಸಿದರೆ ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳ ಬದಲಿಗೆ ಮನೆಮದ್ದುಗಳನ್ನು ಬಳಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

  

1 /5

ಇಲಿಗಳನ್ನು ಓಡಿಸಲು ಪರಿಹಾರಗಳು (Remedies To Get Rid Of Rats) : ಕೆಂಪು ಮೆಣಸಿನಕಾಯಿ ಮನೆಯಿಂದ ಇಲಿಗಳನ್ನು ಓಡಿಸಲು ಬಹಳ ಪರಿಣಾಮಕಾರಿಯಾಗಿದೆ. ಏಕೆಂದರೆ ಕೆಂಪು ಮೆಣಸಿನಕಾಯಿ ಇಲಿಗಳಿಗೆ ಉಸಿರಾಟದ ತೊಂದರೆ ಉಂಟುಮಾಡುತ್ತದೆ. ಇಲಿಗಳನ್ನು ಮನೆಯಿಂದ ಓಡಿಸಲು ಇಲಿಗಳು ಹೆಚ್ಚಾಗಿ ಓಡಾಡುವ ಜಾಗಗಳಲ್ಲಿ ಕೆಂಪು ಮೆಣಸಿನಕಾಯಿಗಳನ್ನು ಇರಿಸಿ, ಈ ಕಾರಣದಿಂದಾಗಿ ಇಲಿಗಳು ನಿಮ್ಮ ಮನೆಯಿಂದ ಹೊರಹೋಗುತ್ತವೆ. (ಫೋಟೋ ಕ್ರೆಡಿಟ್ಸ್ - ರಾಯಿಟರ್ಸ್)

2 /5

ಅಡುಗೆಯಲ್ಲಿ ಮಸಾಲೆ ಪದಾರ್ಥವಾಗಿ ಬಳಸುವ ಬೇ ಎಲೆ ಕೂಡ ಹೆಚ್ಚು ಪ್ರಯೋಜನಕಾರಿಯಾಗಿದೆ. ಅದರ ಸಹಾಯದಿಂದ ಇಲಿಗಳು ಸಹ ಓಡಿಹೋಗುತ್ತವೆ. ವಾಸ್ತವವಾಗಿ ಬೇ ಎಲೆಗಳ ಪರಿಮಳವು ತುಂಬಾ ಪ್ರಬಲವಾಗಿದೆ, ಇದು ಇಲಿಗಳಿಗೆ ಇಷ್ಟವಾಗುವುದಿಲ್ಲ  (Remedies To Get Rid Of Rats). ಇಲಿಗಳನ್ನು ಓಡಿಸಲು, ಅವು ಹೆಚ್ಚು ಬರುವ ಸ್ಥಳಗಳಲ್ಲಿ ಬೇ ಎಲೆಗಳನ್ನು ಇರಿಸಿ. (ಫೋಟೋ ಕ್ರೆಡಿಟ್ಸ್ - ರಾಯಿಟರ್ಸ್)

3 /5

ಇಲಿಗಳನ್ನು ಮನೆಯಿಂದ ಓಡಿಸಲು ನೀವು ಪುದೀನಾ ಎಣ್ಣೆಯನ್ನು ಸಹ ಬಳಸಬಹುದು. ಇದಕ್ಕಾಗಿ ಹತ್ತಿ ಉಣ್ಣೆಯನ್ನು ಪುದೀನ ಎಣ್ಣೆಯಲ್ಲಿ ನೆನೆಸಿ ನಿಮ್ಮ ಮನೆಯಲ್ಲಿ ಇಲಿಗಳು ಬಂದು ಹೋಗುತ್ತಿವ ಸ್ಥಳಗಳಲ್ಲಿ ಇರಿಸಿ. (ಫೋಟೋ ಕ್ರೆಡಿಟ್ಸ್ - ರಾಯಿಟರ್ಸ್) ಇದನ್ನೂ ಓದಿ- Bholenath In Dreams: ಕನಸಿನಲ್ಲಿ ಶಿವನ ಯಾವ ರೂಪವನ್ನು ಕಂಡರೆ ಏನು ಫಲ

4 /5

ಈರುಳ್ಳಿಯ ಸಹಾಯದಿಂದ ಮನೆಯಿಂದ ಇಲಿಗಳನ್ನು ಓಡಿಸಲು ನೈಸರ್ಗಿಕ ಮಾರ್ಗವಿದೆ. ವಾಸ್ತವವಾಗಿ ಇಲಿಗಳು ಈರುಳ್ಳಿಯ ವಾಸನೆಯನ್ನು ಇಷ್ಟಪಡುವುದಿಲ್ಲ. ಈರುಳ್ಳಿ ತುಂಡುಗಳನ್ನು ಇಲಿಯ ಬಿಲದ ಮುಂದೆ, ಮನೆಯಲ್ಲಿ ಇಲಿಗಳು ಓಡಾಡುವ ಸ್ಥಳಗಳಲ್ಲಿ ಇರಿಸಿ. (ಫೋಟೋ ಕ್ರೆಡಿಟ್ಸ್- ಪಿಟಿಐ) ಇದನ್ನೂ ಓದಿ- Poisonous Mangoes: ನೀವೂ ಸಹ ಕೆಮಿಕಲ್ಸ್ ಪೂರಿತ ವಿಷಕಾರಿ ಮಾವಿನ ಹಣ್ಣನ್ನು ತಿನ್ನುತ್ತಿದ್ದೀರಾ? ಅದನ್ನು ಸುಲಭವಾಗಿ ಗುರುತಿಸಿ

5 /5

ಇಲಿಗಳಿಗೆ ಮಾನವನ ಕೂದಲು ಕಾಣಿಸುವುದಿಲ್ಲ ಎಂದು ಹೇಳಲಾಗುತ್ತದೆ. ಅವು ಕೂದಲನ್ನು ನುಂಗುತ್ತವೆ. ನಿಮ್ಮ ಕೂದಲನ್ನು ಇಲಿಯ ಬಿಲದ ಹತ್ತಿರ ಇರಿಸಿ. ಇಲಿಗಳನ್ನು ಓಡಿಸಲು ಇದು ಸುಲಭವಾದ ಮಾರ್ಗವಾಗಿದೆ. (ಫೋಟೋ ಕ್ರೆಡಿಟ್ಸ್- ಪಿಟಿಐ)