ನಿಮ್ಮ ಹಳೆ ಫೋನನ್ನು ಮಾರುವ ಅಥವಾ ಎಕ್ಸ್ ಚೇಂಜ್ ಮಾಡುವ ಮುನ್ನ ವಿಚಾರ ತಿಳಿದಿರಲಿ

ಸ್ಮಾರ್ಟ್ ಫೋನ್  ಮಾರಾಟ ಮಾಡುವ ಮೊದಲು ನಿಮ್ಮ ಫೋನಿನಲ್ಲಿರುವ ಡಾಟಾವನ್ನು ಬ್ಯಾಕ್ ಅಪ್ ಮಾಡಿಟ್ಟುಕೊಳ್ಳಿ. 
 

ನವದೆಹಲಿ : ಹೊಸ ಸ್ಮಾರ್ಟ್‌ಫೋನ್ ಖರೀದಿಸುವಾಗ, ಹಳೆ ಫೋನನ್ನು ಎಕ್ಸ ಚೇಂಜ್ ಮಾಡುತ್ತೇವೆ ಅಥವಾ ಅಂಗಡಿಯವರಿಗೆ ಮಾರಿ ಬಿಡುತ್ತೇವೆ. ಪೋನ್ ಮಾರಾಟ ಮಾಡುವ ಮೊದಲು ಸ್ಮಾರ್ಟ್ ಫೋನಿನಲ್ಲಿರುವ ಡೇಟಾವನ್ನು ಡಿಲೀಟ್ ಮಾಡುತ್ತೇವೆ, ಫ್ಯಾಕ್ಟರಿ ಸೆಟ್ ಮಾಡಿಬಿಡುತ್ತೇವೆ. ಹೀಗೆ ಮಾಡಿದರೆ ಸೇಫ್  ಎಂದು ಈ ರೀತಿ ಮಾಡುತ್ತೇವೆ. ಆದರೆ ಇಷ್ಟೇ ಮಾಡಿದರೆ ಸಾಕಾಗುವುದಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಡೇಟಾ ಸೋರಿಕೆ ಮತ್ತು ಹ್ಯಾಕಿಂಗ್ ಘಟನೆಗಳು ಗಮನಾರ್ಹವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಫೋನ್ ಮಾರಾಟ ಮಾಡುವಾಗ ಕೆಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಸ್ಮಾರ್ಟ್ ಫೋನ್  ಮಾರಾಟ ಮಾಡುವ ಮೊದಲು ನಿಮ್ಮ ಫೋನಿನಲ್ಲಿರುವ ಡಾಟಾವನ್ನು ಬ್ಯಾಕ್ ಅಪ್ ಮಾಡಿಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ನಿಮ್ಮ ಡಾಟಾ ಲೀಕ್ ಆಗುವುದಿಲ್ಲ. ಬ್ಯಾಕ್ ಅಪ್ ಮಾಡಿಕೊಳ್ಳಲು ಸೆಟ್ಟಿಂಗ್ ಗೆ ಹೋಗಬೇಕು. ಅಲ್ಲಿ ಬ್ಯಾಕ್ ಅಪ್ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಹೀಗೆ ಮಾಡುವುದರಿಂದ ಲ್ಲಾ ಫೋಟೋ, ವಿಡಿಯೋ, ಡಾಕ್ಯಮೆಂಟ್, ಗೂಗಲ್ ಡ್ರೈವ್ ನಲ್ಲಿ ಸೇವ್ ಆಗುತ್ತದೆ.   

2 /5

.ಡಾಟಾವನ್ನು ಹೇಗೆ ಡಿಲೀಟ್ ಮಾಡಿದರೂ ಅದು ಫೋನಿನಲ್ಲಿ ಉಳಿದೇ ಇರುತ್ತದೆ. ಪೋನಿನಲ್ಲಿರುವ ಡಾಟಾವನ್ನು ಪರ್ಮನೆಂಟ್ ಆಗಿ ಡಿಲೀಟ್ ಮಾಡಬೇಕಾದರೆ, Sherid ಆಪ್ ಡೌನ್ ಲೊಡ್ ಮಾಡಿಕೊಳ್ಳಿ. ಇದಾದ ನಂತರ ಅಲ್ಗೊರಿದಮ್ ಸೆಲೆಕ್ಟ್ ಮಾಡಬೇಕು. ನಂತರ ನಿಮ್ಮ ಡಾಟಾವನ್ನು ಡಿಲೀಟ್ ಮಾಡಿಕೊಳ್ಳೀ.  

3 /5

Encrypt Device storage - ಇಲ್ಲಿ ಫೋನ್ ಅನ್ನು ರಿಸೆಟ್ ಮಾಡುವಾಗ, ಡಾಟಾ ಬೇರೆ ಫಾರ್ಮಾಟ್ ಗೆ ಚೇಂಜ್ ಆಗುತ್ತದೆ. ಆಂಟ್ರಾಯ್ಡ್ ಫೋನ್ ಅನ್ನು ರಿಸೆಟ್ ಮಾಡಿದ ನಂತರ ಅದರಲ್ಲಿರುವ ಡಾಟಾ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಅದಕ್ಕಾಗಿ ಮೊದಲು ನಿಮ್ಮ ಫೋನಿನಸ ಸೆಟ್ಟಿಂಗ್ ಗ್ ಹೋಗಿ. ಇಲ್ಲಿ ಸೆಕ್ಯುರಿಟಿ ಆಪ್ಶನ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಎನ್ಕ್ರಿಪ್ಟ್ ಪೋನ್ ಮೇಲೆ ಕ್ಲಿಕ್ ಮಾಡಿ. ಇಷ್ಟಾ ಮೇಲೆ ಫೋನ್ ಅನ್ನು ರಿಸೆಟ್ ಮಾಡಿಕೊಳ್ಳಬಹುದು. ಫೋನಿನಲ್ಲಿರುವ ಎಲ್ಲಾ ಡಾಟಾ ಡಿಲೀಟ್ ಆಗಿ ಬಿಡುತ್ತದೆ.  

4 /5

ನಿಮ್ಮ ಪೋನಿನ ಸೇವ್ಡ್ ಪಾಸ್ ವರ್ಡ್ ತೆಗೆದುಬಿಡಿ. ಇದಕ್ಕಾಗಿ ಬ್ರೌಸರ್ ಪ್ರೋಪೈಲ್ ಗೆ ಹೋಗಿ ಸೇವ್ ಪಾಸ್ವರ್ಡ್ ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ.

5 /5

ಬ್ಯಾಂಕಿಂಗ್ ನ ಎಷ್ಟು ಆಪ್ ಇದೆ ಎಲ್ಲವನ್ನೂ ಡಿಲೀಟ್ ಮಾಡಿ. ಅದರಲ್ಲಿ ಅಟೋಮ್ಯಾಟಿಕ್ ಪಾಸ್ವರ್ಡ್ ಸೇವ್ ಆಗಿದ್ದರೆ ಲ್ಯಾಪ್ ಟಾಪ್ ನಲ್ಲಿ ಅದನ್ನು ಚೇಂಜ್ ಮಾಡಿಕೊಳ್ಳಿ. ನಿಮ್ಮ ಜಿಮೇಲ್ ಅಕೌಂಟನ್ನು ಕೂಡಾ ಲಾಗ್ ಔಟ್ ಮಾಡಿಕೊ ಳ್ಳಿ.