ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮುನ್ನ ಈ 5 ಪ್ರಮುಖ ವಿಷಯಗಳು ತಿಳಿದಿರಲಿ

ಮ್ಯೂಚುವಲ್ ಫಂಡ್‌ಗಳಲ್ಲಿ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಮುಖ್ಯ. ಹೀಗಾಗಿ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಆರಂಭಿಕ ಹೂಡಿಕೆದಾರರು  ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಬೇಕು . 

Mutual Fund Investment : ಮ್ಯೂಚುವಲ್ ಫಂಡ್ ಹೂಡಿಕೆದಾರರ ನೆಚ್ಚಿನ ಆಯ್ಕೆಯಾಗಿದೆ. ಆದರೆ ಸಾಮಾನ್ಯವಾಗಿ ಮೊದಲ ಬಾರಿಗೆ ಹೂಡಿಕೆ ಮಾಡುವವರು ಇದರಲ್ಲಿ ಹೇಗೆ ಹೂಡಿಕೆ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಸರಿಯಾದ ಯೋಜನೆಯನ್ನು ಆಯ್ಕೆ ಮಾಡುವುದು ಮುಖ್ಯ. ಹೀಗಾಗಿ ಇದರಲ್ಲಿ ಹೂಡಿಕೆ ಮಾಡುವ ಮುನ್ನ ಆರಂಭಿಕ ಹೂಡಿಕೆದಾರರು  ಕೆಲವು ವಿಶೇಷ ವಿಷಯಗಳನ್ನು ತಿಳಿದುಕೊಳ್ಳಬೇಕು. 

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

1 /5

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಮೊದಲು, ನಿಮ್ಮ ರಿಸ್ಕ್ ಕೆಪ್ಯಾಸಿಟಿ ಮತ್ತು ರಿಟರ್ನ್ ಗೋಲ್ಸ್ ಗಳನ್ನು ವಿಶ್ಲೇಷಿಸಬೇಕು. ಅಂದರೆ, ಮುಂದಿನ 10 ವರ್ಷಗಳವರೆಗೆ ನಿರ್ದಿಷ್ಟ ಮೊತ್ತದ ಗುರಿಯನ್ನು ಹೊಂದಿದ್ದರೆ  ರಿಸ್ಕ್ ತೆಗೆದುಕೊಳ್ಳಬಹುದು. ನಿಮ್ಮ ಉದ್ದೇಶಗಳನ್ನು ಪೂರೈಸುವ ಯೋಜನೆಯನ್ನು ಆರಿಸಿಕೊಳ್ಳಬೇಕು. ಇದರ ಹೊರತಾಗಿ,  ರಿಸ್ಕ್  ಮತ್ತು ಹಣಕಾಸಿನ ಗುರಿಗಳನ್ನು ಸಾಧಿಸುವ ಆಧಾರದ ಮೇಲೆ ಮ್ಯೂಚುವಲ್ ಫಂಡ್ ಯೋಜನೆಗಳಲ್ಲಿ ಎಷ್ಟು ಹೂಡಿಕೆ ಅಗತ್ಯವಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ.

2 /5

ಎಲ್ಲಾ ಹೂಡಿಕೆಯನ್ನು ಒಂದೇ ಕಡೆ ಮಾಡುವುದಕ್ಕಿಂತ, ವಿಭಿನ್ನ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ಇದಕ್ಕಾಗಿ, ಹೂಡಿಕೆದಾರರು ಹೂಡಿಕೆಯನ್ನು ಹಂಚಿಕೆ ಹೇಗೆ ಮಾಡಬೇಕೆನ್ನುವುದನ್ನು ಅರ್ಥಮಾಡಿಕೊಳ್ಳಬೇಕು. 

3 /5

ಹೂಡಿಕೆದಾರರು ಅನೇಕ ಮ್ಯೂಚುಯಲ್ ಫಂಡ್ ಯೋಜನೆ ಆಯ್ಕೆಗಳನ್ನು ಪಡೆಯುತ್ತಾರೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಯೋಜನೆಯನ್ನು ಆಯ್ಕೆ ಮಾಡಬಹುದು. ಯಾವುದೇ ಮ್ಯೂಚುಯಲ್ ಫಂಡ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು, ಅದರ ಹಿಂದಿನ ಕಾರ್ಯಕ್ಷಮತೆ, ನಿರ್ವಹಣೆ ದಕ್ಷತೆ ಮತ್ತು ವೆಚ್ಚದ ಅನುಪಾತದಂತಹ ಕೆಲವು ವಿಷಯಗಳನ್ನು ಪರಿಶೀಲಿಸಬಹುದು. 

4 /5

ದೀರ್ಘಾವಧಿಯವರೆಗೆ ಹೂಡಿಕೆ ಮಾಡುವಾಗ  SIP ಮೂಲಕ ಈಕ್ವಿಟಿ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು. SIP ಎಂದರೆ ವ್ಯವಸ್ಥಿತ ಹೂಡಿಕೆ ಯೋಜನೆ. ಇದರ ಸಹಾಯದಿಂದ ಮಾರುಕಟ್ಟೆಯ ಏರಿಳಿತದ ನಡುವೆ ಉತ್ತಮ ಆದಾಯವನ್ನು ಪಡೆಯಬಹುದು.    

5 /5

ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಾಗ, ನಿಮ್ಮ ಪೋರ್ಟ್‌ಫೋಲಿಯೊವನ್ನು ಪರಿಶೀಲಿಸುತ್ತಿರಬೇಕು. ಇದರೊಂದಿಗೆ, ನಿಮ್ಮ ಗುರಿಯ ಪ್ರಕಾರ ಯಾವ ಹೂಡಿಕೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬಹುದು.