ದಿಯಾ ಮಿರ್ಜಾ ಮದುವೆಯ ಅಪೂರ್ವ ಕ್ಷಣಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾದಾಗ…

ದಿಯಾ ಮಿರ್ಜಾ ವಿವಾಹದ ಪೋಟೊಗಳು ಹೊರ ಬಿದ್ದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ನವದೆಹಲಿ : ದಿಯಾ ಮಿರ್ಜಾ ವೈಭವ್ ರೇಖಿ ವಿವಾಹ ಇತ್ತೀಚೆಗೆ ನೆರವೇರಿತು. ದಿಯಾ ಕೆಂಪು ಸೀರೆ ಉಟ್ಟು, ಲೈಟ್ ಮೇಕ್ ಅಪ್ ಮಾಡಿಕೊಂಡಿದ್ದರು. ಸಿಂಪಲ್ ಆಗಿದ್ದರೂ ಆಕರ್ಷಕವಾಗಿ ಕಾಣುತ್ತಿದ್ದರು. ವಿವಾಹ ಸಮಾರಂಭದ ನಂತರ ಪತಿ ವೈಭವ್ ಜೊತೆ ಹೊರ ಬಂದ ದಿಯಾ ಅಭಿಮಾನಿಗಳೀಗೆ ಸಿಹಿ ಹಂಚಿದರು. ಇದೀಗ ದಿಯಾ ಮಿರ್ಜಾ ವೈಭವ್ ರೇಖಿ ವಿವಾಹ ಫೋಟೋಗಳು ಹೊರ ಬಂದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ದಿಯಾ ಮಿರ್ಜಾ ಮದುವೆ ಪ್ರಮಾಣಪತ್ರಕ್ಕೆ ಸಹಿ ಹಾಕುವ ಫೋಟೋ ಹೊರಬಿದ್ದಿದೆ. ಪೋಟೋದಲ್ಲಿ ದಿಯಾ ಮತ್ತು ವೈಭವ್ ಇಬ್ಬರೂ  ಮ್ಯಾರೇಜ್ ಸರ್ಟಿಫೀಕೇಟ್ ಮೇಲೆ ಸಹಿ ಹಾಕುತ್ತಿದ್ದಾರೆ.   

2 /6

ದಿಯಾ ವಧುವಿನ ಉಡುಪಿನಲ್ಲಿ ಅದ್ಭುತವಾಗಿ ಕಂಗೊಳಿಸುತ್ತಾರೆ. ವಧುವಿನ  ಗೆಟಪ್ ನಲ್ಲಿ ದಿಯಾ ಬಹಳ ಸುಂದರವಾಗಿ ಕಾಣಿಸುತ್ತಿದ್ದರು.

3 /6

ದಿಯಾ ಮಿರ್ಜಾ ಕೆಂಪು ಸೀರೆಯನ್ನು ಉಟ್ಟಿದ್ದರು. ಇದರೊಂದಿಗೆ, ದಿಯಾ ಕೆಂಪು ಶಾಲನ್ನು ತಲೆಯ ಮೇಲೆ ಹಾಕಿಕೊಂಡಿದ್ದರು. ಕೆಂಪು ಸೀರೆಯಲ್ಲಿ ಮಿರಮಿರ ಮಿಂಚುತ್ತಿದ್ದ ದಿಯಾ ಇದರೊಂದಿಗೆ ಕಾಂಟ್ರಾಸ್ಟ್ ಆಭರಣಗಳನ್ನು ತೊಟ್ಟಿದ್ದರು.

4 /6

ದಿಯಾ ತನ್ನ ಮದುವೆಯಲ್ಲಿ ಕೆಲವೇ ಕೆಲವು ಆಭರಣಗಳನ್ನು ತೊಟ್ಟಿದ್ದರು. ಆದರೂ ದಿಯಾ ಮೆರಗಿನಲ್ಲಿ ಕಿಂಚಿತ್ತೂ ಕೊರತೆಯಿರಲಿಲ್ಲ.   

5 /6

ವಿವಾಹ ಶಾಸ್ತ್ರದ ನಂತರ ಹೊರ ಬಂದ ದಿಯಾ ಅಭಿಮಾನಿಗಳಿಗೆ, ಸಿಹಿ ಹಂಚಿ ಸಂಭ್ರಮಪಟ್ಟರು. ದಿಯಾ ಸಂತೋಷ ಸಂಭ್ರಮ ಅವರ ನಗುವಿನಲ್ಲಿ ಎದ್ದು ಕಾಣುತ್ತಿತ್ತು. 

6 /6

ದಿಯಾ ತನ್ನ ಪತಿ ವೈಭವ್ ಜೊತೆ  ಪರಿಪೂರ್ಣವಾಗಿ ಕಾಣಿಸುತ್ತಾರೆ. ವೈಭವ್ ಬಿಳಿ ಶೆರ್ವಾನಿಯೊಂದಿಗೆ ಕ್ರೀಮ್ ಕಲರ್ ಪೇಟ ತೊಟ್ಟಿದ್ದು, ಸುಂದರವಾಗಿ ಕಾಣಿಸುತ್ತಿದ್ದರು.