Plastic Water: ಪ್ಲಾಸ್ಟಿಕ್ ಬಾಟಲ್‌ ನೀರು ಕುಡಿದ್ರೆ ಗಂಡಸ್ತನಕ್ಕೆ ಕುತ್ತು..!

Plastic Water Side Effecʼs: ಬಹುತೇಕರು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್‌ ಅವಲಂಬಿಸಿದ್ದಾರೆ. ಆದರೆ ಹೀಗೆ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯುವುದಿರಂದ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವುಂಟಾಗುತ್ತಿದೆ. ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಯುಂಟಾಗಲಿದ್ದು, ಇದರಿಂದ ಪರಿಸರಕ್ಕೂ ಧಕ್ಕೆಯುಂಟಾಗಲಿದೆ.

Plastic Water Can: ನೀವೂ ಸಹ ಪ್ಲಾಸ್ಟಿಕ್ ಬಾಟಲ್‌ ಮತ್ತು ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟಿರುವ ನೀರು ಕುಡಿಯುತ್ತೀರಾ? ಪ್ಲಾಸ್ಟಿಕ್ ಬಾಟಲ್‌ ನೀರು ಕುಡಿಯುವವರಿಗೆ ಇಲ್ಲಿದೆ ಶಾಕಿಂಗ್‌ ಸುದ್ದಿ. ಇದರ ಬಗ್ಗೆ ಬೆಚ್ಚಿ ಬೀಳುವ ಸತ್ಯವೊಂದು ಬಹಿರಂಗವಾಗಿದೆ. ಪ್ಲಾಸ್ಟಿಕ್ ಬಾಟಲ್‌ ಮತ್ತು ಕ್ಯಾನ್‌ಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಬಳಸುವುದರಿಂದ ಅಡ್ಡ ಪರಿಣಾಮಗಳ ಅಪಾಯವಿದೆ. ಹೌದು, ಇಂದು ಗ್ರಾಮದಿಂದ ಹಿಡಿದು ನಗರದಲ್ಲಿ ವಾಸಿಸುವ ಜನರು ಕುಡಿಯುವ ನೀರಿಗಾಗಿ 20 ಲೀಟರ್ ನೀರಿನ ಕ್ಯಾನ್‌ಗಳನ್ನು ಅವಲಂಬಿಸಿದ್ದಾರೆ. ಬಹುತೇಕರು ನೀರು ಕುಡಿಯಲು ಪ್ಲಾಸ್ಟಿಕ್ ಬಾಟಲ್‌ ಅವಲಂಬಿಸಿದ್ದಾರೆ. ಆದರೆ ಹೀಗೆ ಪ್ಲಾಸ್ಟಿಕ್ ಬಾಟಲ್‌ನಲ್ಲಿ ನೀರು ಕುಡಿಯುವುದಿರಂದ ನಮ್ಮ ಆರೋಗ್ಯದ ಮೇಲೆ ದೊಡ್ಡ ಪರಿಣಾಮವುಂಟಾಗುತ್ತಿದೆ. ದೀರ್ಘಾವಧಿಯಲ್ಲಿ ಆರೋಗ್ಯಕ್ಕೆ ಹಾನಿಯುಂಟಾಗಲಿದ್ದು, ಇದರಿಂದ ಪರಿಸರಕ್ಕೂ ಧಕ್ಕೆಯುಂಟಾಗಲಿದೆ. ಪ್ಲಾಸ್ಟಿಕ್ ಬಾಟಲ್‌ ನೀರು ಕುಡಿಯುವುದರಿಂದ ಯಾವೆಲ್ಲಾ ತೊಂದರೆ ಮತ್ತು ಆರೋಗ್ಯ ಸಮಸ್ಯೆಗಳು ಬರಬಹುದು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ಶತಮಾನಗಳಿಂದ ಪ್ಲಾಸ್ಟಿಕ್ ಬಳಕೆಯಲ್ಲಿದ್ದು, ಪರಿಸರಕ್ಕೆ ಹಾನಿಕಾರಕವಾಗಿದೆ. ನೀರು ಸಂಗ್ರಹಕ್ಕೆ ಬಳಸುವ ಪ್ಲಾಸ್ಟಿಕ್ ಬಾಟಲ್‌, ಕ್ಯಾನ್‌ಗಳನ್ನು ಬಳಸಿ ಬಿಸಾಡಲಾಗುತ್ತದೆ. ಹೀಗೆ ಬಿಸಾಡಿದ ಈ ಪ್ಲಾಸ್ಟಿಕ್ ಪರಸರದಲ್ಲಿ ಸೇರಿ ಪರಿಸರ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡುತ್ತದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಈ ಪ್ಲಾಸ್ಟಿಕ್, ವನ್ಯಜೀವಿಗಳು ಮತ್ತು ನೈಸರ್ಗಿಕ ಸಮತೋಲನಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ.

2 /5

ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳಲ್ಲಿ ದೀರ್ಘಕಾಲ ಸಂಗ್ರಹಿಸಿಟ್ಟ ನೀರನ್ನು ಬಳಸುವುದರಿಂದ ಕೆಲವು ಹಾನಿಕಾರಕ ಅಡ್ಡಪರಿಣಾಮ ಉಂಟಾಗುತ್ತದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳಿಂದ ಮಾನವನ ಆರೋಗ್ಯದ ಮೇಲೆ ದೊಡ್ಡ ಅಪಾಯವಿದೆ. ನೀರಿನಿಂದ ರಾಸಾಯನಿಕಗಳು ದೇಹವನ್ನು ಪ್ರವೇಶಿಸುತ್ತವೆ. ನೀರಿನ ಕ್ಯಾನ್‌ಗಳು ಮೇಲೆ ದೀರ್ಘಕಾಲದವರೆಗೆ ಸೂರ್ಯನ ಕಿರಣಗಳು ಬಿದ್ದಾಗ ನೀರಿನೊಂದಿಗೆ ರಾಸಾಯನಿಕಗಳು ಬೆರೆಯುತ್ತವೆ. ಈ ನೀರು ಸೇವಿಸಿದಾಗ ನಮ್ಮ ಆರೋಗ್ಯಕ್ಕೆ ಹದಗೆಡುತ್ತದೆ. 

3 /5

ಪ್ಲಾಸ್ಟಿಕ್ ನೀರಿನ ಕ್ಯಾನ್‌ಗಳನ್ನು ಬಳಸುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಮುಖ್ಯವಾಗಿ ಜೀರ್ಣಕಾರಿ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿ ಸುತ್ತದೆ. ಪ್ಲಾಸ್ಟಿಕ್ ವಾಟರ್ ಬಾಟಲ್‌ ಮತ್ತು ಕ್ಯಾನ್‌ಗಳ ನೀರು ಕುಡಿಯುವುದರಿಂದ ದೇಹದ ರೋಗನಿರೋಧಕ ಶಕ್ತಿಗೆ ಅಡ್ಡಿಪಡಿಸುತ್ತದೆ. ಪ್ಲಾಸ್ಟಿಕ್‌ನಿಂದ ಬಿಡುಗಡೆಯಾಗುವ ರಾಸಾಯನಿಕಗಳು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತವೆ.

4 /5

ಪ್ಲಾಸ್ಟಿಕ್ ವಾಟರ್ ಬಾಟಲ್‌ ನೀರು ಕುಡಿಯುವುದರಿಂದ ಮಾರಕ ಕ್ಯಾನ್ಸರ್‌ ಕಾಯಿಲೆ ಅಪಾಯ ಬರುವ ಸಾಧ್ಯತೆ ಇರುತ್ತದೆ. ಪ್ಲ್ಯಾಸ್ಟಿಕ್‌ ಬಾಟಲ್‌ ಮತ್ತು ಕ್ಯಾನ್‌ಗಳು ಸೂರ್ಯನ ಶಾಖಕ್ಕೆ ಒಡ್ಡಿಕೊಳ್ಳು ತ್ತವೆ ಮತ್ತು ಡೈ-ಆಕ್ಸಿನ್ ಅನ್ನು ಬಿಡುಗಡೆ ಮಾಡುತ್ತವೆ. ಈ ಹಾನಿಕಾರಕ ವಿಷವನ್ನು ಸೇವಿಸಿದರೆ ಸ್ತನ ಕ್ಯಾನ್ಸರ್ ಅಪಾಯ ಬರುವ ಸಾಧ್ಯತೆ ಇರುತ್ತದೆ.  ಇದಲ್ಲದೆ ಲಿವರ್ ಕ್ಯಾನ್ಸರ್ ಮತ್ತು ಪುರುಷರ ವೀರ್ಯಾಣುಗಳ ಸಂಖ್ಯೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇರುತ್ತದೆ. 

5 /5

ಪ್ಲಾಸ್ಟಿಕ್ ವಾಟರ್ ಕ್ಯಾನ್‌ಗಳು ಬಿಸ್ಫೆನಾಲ್ ಎ (BPA)ಯನ್ನು ಉತ್ಪಾದಿಸುತ್ತವೆ. ಇದು ಈಸ್ಟ್ರೊಜೆನ್ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಮಧುಮೇಹ, ಸ್ಥೂಲಕಾಯತೆ, ಫಲವತ್ತತೆ ಸಮಸ್ಯೆಗಳು, ಪ್ರೌಢಾವಸ್ಥೆಯ ಯುವತಿಯರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಹೀಗಾಗಿಯೇ ಪ್ಲಾಸ್ಟಿಕ್ ಕ್ಯಾನ್‌ ಮತ್ತು ಬಾಟಲ್‌ಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವುದನ್ನು ಆದಷ್ಟು ತಪ್ಪಿಸಬೇಕು.