D. Roopa: ಸಿಂಧೂರಿ ವಿರುದ್ಧ ಸಿಡಿದೆದ್ದ ಬಳಿಕ ವಿದೇಶಕ್ಕೆ ಹಾರಿದ್ರಾ ಐಪಿಎಸ್ ಅಧಿಕಾರಿ ಡಿ. ರೂಪಾ? ಫೋಟೋ ನೋಡಿ

D. Roopa Recent Photos: ಇತ್ತೀಚೆಗೆಯಷ್ಟೇ ಕರ್ನಾಟಕದಲ್ಲಿ ಭಾರೀ ಸದ್ದು ಮಾಡಿದ್ದ ಐಪಿಎಸ್ ಅಧಿಕಾರಿ ಡಿ. ರೂಪಾ ವಿದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ತಮ್ಮ ಪತಿಯ ಜೊತೆ ಕಳೆದಿರುವ ಸುಂದರ ಕ್ಷಣಗಳ ಫೋಟೋವನ್ನು ಡಿ. ರೂಪ ಫೇಸ್ಬುಕ್’ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

1 /8

ಡಿ. ರೂಪಾ ಅವರು ಕೇವಲ ಅಧಿಕಾರಿಯಲ್ಲ, ಸಿಂಗರ್ ಕೂಡ ಹೌದು. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ‘ಬಯಲಾಟದ ಭೀಮಣ್ಣ’ ಎಂಬ ಕನ್ನಡ ಚಲನಚಿತ್ರದಲ್ಲಿ ಹಿನ್ನೆಲೆ ಗಾಯನ ಕೂಡ ಮಾಡಿದ್ದಾರೆ.

2 /8

ಸದ್ಯ ಪತಿ ಮುನಿಶ್ ಮೌದ್ಗಿಲ್ ಜೊತೆ ಅಮೆರಿಕಾಗೆ ಪ್ರವಾಸ ಬೆಳಸಿದ ಡಿ. ರೂಪಾ, ಮೈಕ್ರೋಸಾಫ್ಟ್ ಕಂಪನಿಗೆ ಕೂಡ ಭೇಟಿ ನೀಡಿದ್ದಾರೆ.

3 /8

ಈ ಬಳಿಕ ನದಿ ಕಿನಾರೆಯಲ್ಲಿ ಮುದ್ದಾದ ಫೋಟೋಗಳನ್ನು ದಂಪತಿ ಕ್ಲಿಕ್ಕಿಸಿಕೊಂಡಿದ್ದಾರೆ.

4 /8

ಮುನಿಶ್ ಮೌದ್ಗಿಲ್ ಅವರನ್ನು 2003 ರಲ್ಲಿ ಡಿ. ರೂಪಾ ವಿವಾಹವಾದರು. ಮುನಿಶ್ ಮೌದ್ಗಿಲ್ ಅವರು IIT ಬಾಂಬೆಯ ಹಳೆಯ ವಿದ್ಯಾರ್ಥಿ. ಈ ದಂಪತಿಗೆ ಅನಘಾ ಮೌದ್ಗಿಲ್ ಮತ್ತು ರುಶಿಲ್ ಮೌದ್ಗಿಲ್ ಎಂಬ ಇಬ್ಬರು ಮಕ್ಕಳಿದ್ದಾರೆ.

5 /8

ಪದವಿ ಶಿಕ್ಷಣವನ್ನು ಕರ್ನಾಟಕ ಕುವೆಂಪು ವಿಶ್ವವಿದ್ಯಾನಿಲಯದಿಂದ ಚಿನ್ನದ ಪದಕದೊಂದಿಗೆ ಪೂರ್ಣಗೊಳಿಸಿದ ಡಿ. ರೂಪಾ, ಬಳಿಕ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.

6 /8

ರೂಪಾ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಾರಂಗತರಾಗಿದ್ದಾರೆ. ಅಷ್ಟೇ ಅಲ್ಲದೆ ಭರತನಾಟ್ಯ ನೃತ್ಯಗಾರ್ತಿಯೂ ಹೌದು.

7 /8

2018 ರ ಅಂತರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರಿಗೆ ಸ್ಫೂರ್ತಿ ನೀಡಲು ಸಂಗೀತ ವೀಡಿಯೊವನ್ನು ಕೂಡ ಬಿಡುಗಡೆ ಮಾಡಿದ್ದರು.

8 /8

ಕಡಲ ಕಿನಾರೆಯಲ್ಲಿ ಜೋಡಿ ತೆಗೆಸಿಕೊಂಡ ಫೋಟೋಗಳನ್ನು ನೀವು ನೋಡಿ.