Foods For Diabetes: ಆರೋಗ್ಯ ತಜ್ಞರ ಪ್ರಕಾರ, ಕೆಲವು ಆಹಾರಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು ಅವು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ. ಅವುಗಳನ್ನು ಡಯಾಬಿಟಿಸ್ ಸ್ನೇಹಿ ಆಹಾರಗಳು ಎಂದು ಕರೆಯಲಾಗುತ್ತದೆ.
Foods For Diabetes: ಪ್ರಸ್ತುತ ಭಾರತದಲ್ಲಿ ಅತಿ ಹೆಚ್ಚು ಮಂದಿ ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹಿ ರೋಗಿಗಳು ಅವರ ಆಹಾರ-ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಅತ್ಯಗತ್ಯ. ಆರೋಗ್ಯ ತಜ್ಞರ ಪ್ರಕಾರ, ಕೆಲವು ಆಹಾರಗಳಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇದ್ದು ಅವು ರಕ್ತದಲ್ಲಿನ ಗ್ಲೂಕೋಸ್ ಪ್ರಮಾಣವನ್ನು ಹೆಚ್ಚಿಸಲು ಅನುಮತಿಸುವುದಿಲ್ಲ. ಅವುಗಳನ್ನು ಡಯಾಬಿಟಿಸ್ ಸ್ನೇಹಿ ಆಹಾರಗಳು ಎಂದು ಕರೆಯಲಾಗುತ್ತದೆ. ಈ ಆಹಾರಗಳ ಸೇವನೆ ಮಧುಮೇಹ ರೋಗಿಗಳಿಗೆ ವರದಾನಕ್ಕಿಂತ ಕಡಿಮೆ ಇಲ್ಲ ಎಂತಲೂ ಹೇಳಲಾಗುತ್ತದೆ. ಆ ಆಹಾರಗಳು ಯಾವುವು ತಿಳಿಯೋಣ...
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಮ್ಮ ದಿನನಿತ್ಯದ ಆಹಾರದಲ್ಲಿ ಬೇಳೆ ಕಾಳುಗಳನ್ನು ಬಳಸುತ್ತೇವೆ. ಇವುಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿರುವುದು ಮಾತ್ರವಲ್ಲ, ಇವು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ -9 ಅತ್ಯುತ್ತಮ ಮೂಲಗಳಾಗಿವೆ. ಇದನ್ನು ಡಯಾಬಿಟಿಸ್ ರೋಗಿಗಳಿಗೆ ಉತ್ತಮ ಆಹಾರ ಎಂದು ಪರಿಗಣಿಸಲಾಗಿದೆ.
ವರ್ಷವಿಡೀ ಸುಲಭವಾಗಿ ಲಭ್ಯವಾಗುವ ತರಕಾರಿ ಎಂದರೆ ಅದು ಕ್ಯಾರೆಟ್. ಇದರಲ್ಲಿ ಪೊಟ್ಯಾಸಿಯಮ್, ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳು ಹೇರಳವಾಗಿ ಕಂಡು ಬರುತ್ತದೆ. ಇದು ರುಚಿಯಲ್ಲಿ ಸಿಹಿಯಾದರೂ ಕೂಡ ಬ್ಲಡ್ ಶುಗರ್ ಅನ್ನು ನಿಯಂತ್ರಿಸುವಲ್ಲಿ ಬಹಳ ಪರಿಣಾಮಕಾರಿ ಎಂದು ಹೇಳಲಾಗುತ್ತದೆ.
ಸೂಪರ್ ಫುಡ್ ಎಂದು ಕರೆಯಲ್ಪಡುವ ಹಾಲು ಒಂದು ಪರಿಪೂರ್ಣ ಆಹಾರ. ಇದು ಮೂಳೆಗಳ ಆರೋಗ್ಯಕ್ಕೆ ಮಾತ್ರವಲ್ಲ, ಮಧುಮೇಹಿಗಳಿಗೂ ಕೂಡ ಪ್ರಯೋಜನಕಾರಿ ಆಗಿದೆ. ಮಧುಮೇಹಿಗಳು ಕಡಿಮೆ ಕೊಬ್ಬಿನ ಹಾಲನ್ನು ಸಕ್ಕರೆ ಇಲ್ಲದೆ ಕುಡಿಯುವುದು ಪ್ರಯೋಜನಕಾರಿ ಆಗಿದೆ.
ಸಾಮಾನ್ಯವಾಗಿ ತೂಕ ಇಳಿಕೆ ಪ್ರಯತ್ನದಲ್ಲಿರುವವರು ಓಟ್ಸ್ ಸೇವಿಸುತ್ತಾರೆ. ಆದರೆ, ಇದು ಕಡಿಮೆ ಗ್ಲೈಸೆಮಿಕ್ ಸೂಚಿಯ ಆಹಾರವಾಗಿರುವುದರಿಂದ ಮಧುಮೇಹಿಗಳಿಗೂ ಇದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಸಾಮಾನ್ಯವಾಗಿ ಕಿಡ್ನಿ ಬೀನ್ಸ್ ಎಂದೇ ಪ್ರಸಿದ್ಧಿಯಾಗಿರುವ ರಾಜ್ಮಾ ಫೈಬರ್ ಮತ್ತು ಪ್ರೋಟೀನ್ನಲ್ಲಿ ಸಮೃದ್ಧವಾಗಿದೆ. ಮಾತ್ರವಲ್ಲ ಇದು ಕಡಿಮೆ ಜಿಐ ಅನ್ನು ಹೊಂದಿದೆ. ಹಾಗಾಗಿ, ಇದನ್ನು ಮಧುಮೇಹಿಗಳಿಗೆ ಅತ್ಯುತ್ತಮ ಆಹಾರಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.