Dhanshakti Rajyog 2024: ಧನಶಕ್ತಿ ರಾಜಯೋಗದಿಂದ ಫೆಬ್ರವರಿಯಲ್ಲಿ ಈ ರಾಶಿಯ ಜನರ ಬಾಳೇ ಬಂಗಾರ

Dhanshakti Rajyog 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಸಂಯೋಜನೆಗೊಂಡಾಗ ಶುಭ-ಅಶುಭ ಯೋಗಗಳು ರೂಪುಗೊಳ್ಳುತ್ತವೆ ಎಂದು ಹೇಳಲಾಗುತ್ತದೆ. ಇದೀಗ, ಶೀಘ್ರದಲ್ಲೇ ಮಂಗಳ ಶುಕ್ರರ ಯುತಿಯಿಂದ ಶುಭಕರ ಧನಶಕ್ತಿ ರಾಜಯೋಗ ನಿರ್ಮಾಣವಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ವೈದಿಕ ಜ್ಯೋತಿಷ್ಯದ ಪ್ರಕಾರ, ಎಲ್ಲಾ ಗ್ರಹಗಳು ನಿಗದಿತ ಸಮಯದಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತವೆ. ಗ್ರಹಗಳ ರಾಶಿ ಬದಲಾವಣೆಯೊಂದಿಗೆ ಶುಭ-ಅಶುಭ ಯೋಗಗಳು ಕೂಡ ರೂಪುಗೊಳ್ಳುತ್ತವೆ. ಫೆಬ್ರವರಿ ತಿಂಗಳಿನಲ್ಲಿಯೂ ಕೆಲವು ಗ್ರಹಗಳು ರಾಶಿ ಬದಲಾವಣೆ ಮಾಡಲಿವೆ. 

2 /8

ಮಂಗಳ ರಾಶಿ ಪರಿವರ್ತನೆ:  05 ಫೆಬ್ರವರಿ 2024ರಂದು ಗ್ರಹಗಳ ಕಮಾಂಡರ್ ಎಂದು ಕರೆಯಲಾಗುವ ಮಂಗಳ ಗ್ರಹವು ರಾಶಿ ಪರಿವರ್ತನೆ ಹೊಂದಿ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. 

3 /8

ಶುಕ್ರ ಸಂಕ್ರಮಣ:  ಇದಾದ ಒಂದೇ ವಾರದಲ್ಲಿ ಎಂದರೆ 12 ಫೆಬ್ರವರಿ 2024ರಂದು ಐಷಾರಾಮಿ ಜೀವನದ ಅಂಶ ಎಂದು ಪರಿಗಣಿಸಲಾಗಿರುವ ಶುಕ್ರನು ಕೂಡ ಮಕರ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

4 /8

ಮಂಗಳ ಶುಕ್ರ ಯುತಿ:  ಮಕರ ರಾಶಿಯಲ್ಲಿ ಮಂಗಳ-ಶುಕ್ರ ಯುತಿಯಿಂದಾಗಿ ಶುಭಕರ 'ಧನಶಕ್ತಿ ರಾಜಯೋಗ' ನಿರ್ಮಾಣವಾಗುತ್ತಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಅತ್ಯಂತ ಮಂಗಳಕರ ರಾಶಿಗಳಲ್ಲಿ ಒಂದು ಎಂದು ಹೇಳಲಾಗುತ್ತದೆ. 

5 /8

ಧನಶಕ್ತಿ ರಾಜಯೋಗ ಪ್ರಭಾವ: ಧನಶಕ್ತಿ ರಾಜಯೋಗದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ ಮೂರು ರಾಶಿಯವರಿಗೆ ಇದನ್ನು ಬಂಗಾರದಂತ ಸಮಯ ಎಂದು ಬಣ್ಣಿಸಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

6 /8

ಮೇಷ ರಾಶಿ:  ಧನಶಕ್ತಿ ರಾಜಯೋಗವು ಮೇಷ ರಾಶಿಯವರಿಗೆ ಫಲಪ್ರಧವಾಗಿದೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ಉದ್ಯೋಗ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಲಿದ್ದಾರೆ. ಆದಾಯದ ಹೊಸ ಮೂಲಗಳು ಹೆಚ್ಚಾಗಲಿದೆ. ಪೂರ್ವಿಕರ ಆಸ್ತಿಯಿಂದಲೂ ಲಾಭವಾಗಲಿದೆ. 

7 /8

ವೃಷಭ ರಾಶಿ:  ವೃಷಭ ರಾಶಿಯವರಿಗೆ ಧನಶಕ್ತಿ ರಾಜಯೋಗವು ಅದೃಷ್ಟದ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನಿಮ್ಮ ಯೋಜಿತ ಕಾರ್ಯಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ಸ್ವಂತ ಬಿಸಿನೆಸ್ ಮಾಡುವವರು ಕೆಲವು ಉತ್ತಮ ಸುದ್ದಿಗಳನ್ನು ಪಡೆಯಬಹುದು.  ದೂರ ಪ್ರಯಾಣ ಲಾಭದಾಯವಾಗಿರಲಿದೆ. 

8 /8

ಧನು ರಾಶಿ:  ಧನ ಶಕ್ತಿ ರಾಜಯೋಗವು ಧನು ರಾಶಿಯವರ ಬದುಕಿನಲ್ಲಿಯೂ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ನಿಮಗೆ ನಿಮ್ಮ ಮಾತೇ ಬಂಡವಾಳವಾಗಿದ್ದು ಇದರಿಂದಾಗಿ ಇದ್ದಕ್ಕಿದ್ದಂತೆ ಹಣವನ್ನು ಗಳಿಸಬಹುದು. ಆದಾಯ ಹೆಚ್ಚುವುದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯನ್ನು ಕಾಣಬಹುದು. ವೃತ್ತಿ ರಂಗದಲ್ಲಿಯೂ ಸಕಾರಾತ್ಮಕ ಫಲಗಳನ್ನು ಅನುಭವಿಸುವಿರಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.