ಜಯಾ ಪ್ರೀತಿಗೆ ಬೌಲ್ಡ್‌ ಆದ ದೀಪಕ್‌ ಚಹಾರ್‌: ಕ್ರಿಕೆಟಿಗನ ಅದ್ಧೂರಿ ವಿವಾಹದ ಫೋಟೋಸ್‌ ಇಲ್ಲಿದೆ

ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ದೀಪಕ್ ಚಹಾರ್ ತಮ್ಮ ಸುದೀರ್ಘ ಕಾಲದ ಗೆಳತಿ ಜಯ ಭಾರದ್ವಾಜ್ ಅವರನ್ನು ವಿವಾಹವಾಗಿದ್ದಾರೆ. ಐಪಿಎಲ್ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ದೀಪಕ್‌ ಚಹಾರ್‌, ಜಯಾಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಇಡೀ ಸ್ಟೇಡಿಯಂ ಸಾಕ್ಷಿಯಂತೆ ನಿಂತಿತ್ತು. ಅಂದಿನಿಂದ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಇವರಿಬ್ಬರ ಮದುವೆಗಾಗಿ ಕಾಯುತ್ತಿದ್ದರು. 

1 /5

ದೀಪಕ್‌ ಚಹಾರ್ ಮತ್ತು ಜಯ ಭಾರದ್ವಾಜ್ ಜೂನ್‌ 1ರಂದು ಆಗ್ರಾದಲ್ಲಿ ವಿವಾಹವಾಗಿದ್ದಾರೆ. ಸುದೀರ್ಘ ಸಂಬಂಧಕ್ಕೆ ವಿವಾಹದ ಮುದ್ರೆ ನೀಡಿದ ಜೋಡಿ ಇದೀಗ ಎಲ್ಲೆಡೆ ಸುದ್ದಿಯಾಗಿದ್ದಾರೆ.  

2 /5

ಮದುವೆಯಲ್ಲಿ ಈ ಜೋಡಿ ತುಂಬಾ ಸುಂದರವಾಗಿ ಕಾಣುತ್ತಿತ್ತು. ಜಯಾ ಕೆನೆ ಬಣ್ಣದ ಲೆಹೆಂಗಾ ಧರಿಸಿದ್ದರೆ ದೀಪಕ್ ಕೂಡ ಅದೇ ಬಣ್ಣದ ಶೇರ್ವಾನಿ ಧರಿಸಿದ್ದಾರೆ.

3 /5

ಐಪಿಎಲ್ 2021 ರಲ್ಲಿ ಪಂಜಾಬ್ ಮತ್ತು ಸಿಎಸ್‌ಕೆ ನಡುವಿನ ಪಂದ್ಯದ ನಂತರ ದೀಪಕ್ ಚಹಾರ್ ಇಡೀ ಜಗತ್ತಿಗೆ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದರು. ಸ್ಟೇಡಿಯಂನಲ್ಲಿ ಪ್ರೀತಿ ವ್ಯಕ್ತಪಡಿಸಿದ ಚಹಾರ್‌ ಅಂದು ಎಲ್ಲರನ್ನು ಅಚ್ಚರಿಗೊಳಿಸಿದ್ದರು.  

4 /5

ದೀಪಕ್ ಚಹಾರ್ ಮತ್ತು ಜಯಾ ಸಂಬಂಧದ ಬಗ್ಗೆ ಚರ್ಚೆ ಬಹಳ ಸಮಯದಿಂದ ನಡೆಯುತ್ತಿತ್ತು. ಆದರೆ ಐಪಿಎಲ್ ಪಂದ್ಯದ ಸಮಯದಲ್ಲಿ ಈ ವಿಷಯ ದೃಢಪಟ್ಟಿತ್ತು. ಅಂದಿನಿಂದ ಇವರಿಬ್ಬರು ಯಾವಾಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದರು.  

5 /5

ಜಯಾ ಟಿವಿ ಸ್ಟಾರ್ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿ. ದೀಪಕ್ ಮತ್ತು ಜಯಾ ಸುಮಾರು ಒಂದು ವರ್ಷದ ಹಿಂದೆ ಮುಂಬೈನಲ್ಲಿ ಭೇಟಿಯಾಗಿದ್ದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿಗೆ ತಿರುಗಿತ್ತು. ಜಯ ಭಾರದ್ವಾಜ್ ತನ್ನ ತಾಯಿ ಮತ್ತು ಸಹೋದರನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಜಯಾ ಅವರ ತಾಯಿ ಹೋರ್ಡಿಂಗ್ ವಿನ್ಯಾಸ ವ್ಯವಹಾರವನ್ನು ನಿರ್ವಹಿಸುತ್ತಾರೆ. ಜಯಾ ಅವರ ಸಹೋದರ ನಟ ಮತ್ತು ಮಾಡೆಲ್ ಆಗಿದ್ದಾರೆ.