Death Indications - ಸಾವಿಗೂ ಮುನ್ನ ಸಿಗುತ್ತವೆ ಈ 6 ಸಂಕೇತಗಳು, ಶರೀರದಲ್ಲಿಯೂ ಕೂಡ ಬದಲಾವಣೆಗಳಾಗುತ್ತವೆ

Death Indications - ಸಾವು (Death) ಕೊನೆಯ ಸತ್ಯ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೂ ಕೂಡ ಸಾವಿಗೆ ಎಲ್ಲರು ಭಯ ಪಡುತ್ತಾರೆ ಹಾಗೂ ಸಾವಿನ ಕುರಿತು ಆದಷ್ಟು ಹೆಚ್ಚು ಸಂಗತಿಗಳನ್ನು ಅರಿಯಲು ಉತ್ಸುಕರಾಗಿರುತ್ತಾರೆ.

Death Indications - ಸಾವು (Death) ಕೊನೆಯ ಸತ್ಯ ಎಂಬ ಸಂಗತಿ ಎಲ್ಲರಿಗೂ ತಿಳಿದಿದೆ. ಆದರೂ ಕೂಡ ಸಾವಿಗೆ ಎಲ್ಲರು ಭಯ ಪಡುತ್ತಾರೆ ಹಾಗೂ ಸಾವಿನ ಕುರಿತು ಆದಷ್ಟು ಹೆಚ್ಚು ಸಂಗತಿಗಳನ್ನು ಅರಿಯಲು ಉತ್ಸುಕರಾಗಿರುತ್ತಾರೆ. ಸಾವಿನ ಸಂದರ್ಭದಲ್ಲಿ ಯಾವ ಅನುಭವ ಉಂಟಾಗುತ್ತದೆ ಮತ್ತು ಸಾವಿನ ನಂತರ ಜೀವನ (Life After death) ಹೇಗಿರುತ್ತದೆ ಈ ಕುರಿತು ಹಲವು ಸಂಶೋಧನೆಗಳು (Research On Death) ನಡೆದಿದ್ದು, ಹಲವರು ಈ ಕುರಿತು ಅಂದಾಜುಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಬನ್ನಿ ಸಾವಿಗೂ ಮುನ್ನ ಯಾವ ಯಾವ ಸಂಕೇತಗಳು (Death Indications) ಸಿಗುತ್ತವೆ ಮತ್ತು ಕೆಲವೇ ಸಮಯದಲ್ಲಿ ಸಾವು ಸಂಭವಿಸಲಿದೆ ಎಂಬುದು ತಿಳಿಯುತ್ತದೆ ನೋಡೋಣ ಬನ್ನಿ. ಸಾವಿನ ಈ ಸಂಕೇತಗಳ ಉಲ್ಲೇಖ ಶಿವ ಪುರಾಣದಲ್ಲಿಯೂ (Shiva Puran) ಮಾಡಲಾಗಿದೆ.

 

ಇದನ್ನೂ ಓದಿ-Post Office Schemes: ಅಂಚೆ ಕಚೇರಿಯ ಜಬರ್ದಸ್ತ್ ಯೋಜನೆಗಳು, ಯಾವ ಯೋಜನೆಯಲ್ಲಿ ಎಷ್ಟು ಅವಧಿಯಲ್ಲಿ ಹಣ ಡಬಲ್ ! ಇಲ್ಲಿದೆ ವಿವರ

 

(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಮಾಹಿತಿ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಯಾವುದೇ ಮಾಹಿತಿಯನ್ನು ಅನುಸರಿಸುವ ಮುನ್ನ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)

1 /6

1. ಪ್ರತಿಬಿಂಬ ಕಾಣಿಸದಿರುವುದು - ಶಿವಪುರಾಣದ ಪ್ರಕಾರ ವ್ಯಕ್ತಿಯ ಸಾವು ಹತ್ತಿರ ಬಂದಾಗ ಅವನಿಗೆ ತನ್ನ ಪ್ರತಿಬಿಂಬ ಕಾಣಿಸುವುದಿಲ್ಲ ಎನ್ನಲಾಗಿದೆ. ಅವನಿಗೆ ನೀರು , ಕನ್ನಡಿ ಯಾವುದರಲ್ಲೂ ಕೂಡ ಆತನ ಪ್ರತಿಬಿಂಬ ಕಾಣಿಸುವುದಿಲ್ಲ .

2 /6

2. ಶರೀರದಲ್ಲಾಗುತ್ತವೆ ಬದಲಾವಣೆ - ವ್ಯಕ್ತಿಯ ನಾಲಿಗೆ, ಮೂಗು, ಬಾಯಿ, ಕಿವಿ ಕೆಲಸ ಮಾಡುವುದನ್ನು ನಿಲ್ಲಿಸಿದರೆ ಶೀಘ್ರವೇ ಸಾವು ಸಂಭವಿಸಲಿದೆ ಎಂಬುದರ ಸಂಕೇತವದು. ಶರೀರ ಬಿಳಿ ಬಣ್ಣಕ್ಕೆ ತಿರುಗುವುದು ಹಾಗೂ ನೀಲಿ ಬಣ್ಣಕ್ಕೆ ತಿರುಗುವುದು ಕೂಡ ಸಾವಿನ ಸಂಕೇತ.

3 /6

3. ಸೂರ್ಯ ಕಪ್ಪಾಗಿ ಕಾಣಿಸುವುದು - ವ್ಯಕ್ತಿಗೆ ಸೂರ್ಯ ಹಾಗೂ ಚಂದ್ರರು ಕಪ್ಪಾಗಿ ಕಾಣಿಸಲು ಆರಂಭಿಸಿದರೆ ಹಾಗೂ ಹೊಳೆಯುವ, ಕೆಂಪು, ಕಪ್ಪು ಬಣ್ಣದ ಆವೃತ್ತಿ ಕಾಣಿಸಿಕೊಳ್ಳಲು ಆರಂಭಿಸಿದರೆ ಕೆಲವೇ ಸಮಯದಲ್ಲಿ ಆತನ ಮೃತ್ಯು ಸಂಭವಿಸಲಿದೆ ಎಂಬುದರ ಸಂಕೇತವದು.

4 /6

4. ಬೆಂಕಿಯ ಜ್ವಾಲೆ ಕಾಣಿಸದಿರುವುದು - ಒಂದು ವೇಳೆ ವ್ಯಕ್ತಿಗೆ ಎಲ್ಲವೂ ಕಾಣಿಸಿಕೊಳ್ಳುತ್ತಿದ್ದು, ಬೆಂಕಿಯಿಂದ ಪ್ರಜ್ವಲಿಸುವ ಜ್ವಾಲೆ ಕಾಣಿಸಿಕೊಳ್ಳದಿದ್ದರೆ. ಆತನ ಸಾವು ಸಮೀಪಿಸಿದೆ ಎಂಬುದರ ಸಂಕೇತ.

5 /6

5. ಪಾರಿವಾಳ ತಲೆಯ ಮೇಲೆ ಕುಳಿತುಕೊಳ್ಳುವುದು - ವ್ಯಕ್ತಿಯ ಮೇಲೆ ಗಿಡುಗ, ಪಾರಿವಾಳ ಅಥವಾ ಕಾಗೆ ಬಂದು ಕೂರುವುದು ಆ ವ್ಯಕ್ತಿಯ ಆಯಸ್ಸು ಕಡಿಮೆಯಾಗಿರುವ ಸಂಕೇತ. ಇನ್ನೊಂದೆಡೆ ನೀಲಿ ಬಣ್ಣದ ನೊಣಗಳು ವ್ಯಕ್ತಿಯನ್ನು ಆವರಿಸಿದರೆ ಆತನ ಸಾವು ಸಂಭವಿಸಿದೆ ಎಂದರ್ಥ.

6 /6

6. ಸೌರ ಮಂಡಲ - ವ್ಯಕ್ತಿಯ ಸಾವು ಹತ್ತಿರವಾದಾಗ ಆತನಿಗೆ ಸೌರಮಂಡಲದಲ್ಲಿ ಧ್ರುವ ನಕ್ಷತ್ರ ಸೇರಿದಂತೆ ಯಾವುದೇ ಇತರ ನಕ್ಷತ್ರ ಕಾಣಿಸುವುದಿಲ್ಲ. ರಾತ್ರಿಯ ಹೊತ್ತಿನಲ್ಲಿ ಆಕಾಶದಲ್ಲಿ ಕಾಮನಬಿಲ್ಲು ಹಾಗೂ ದಿನದ ಅವಧಿಯಲ್ಲಿ ಉಲ್ಕಾಪಾತ ಕಾಣಿಸಲಾರಂಭಿಸುತ್ತವೆ.