Blood Sugar control tips : ಈ ಎಲೆ ಒಣಗಿದ ಮೇಲೆ ಹೀಗೆ ಬಳಸಿದರೆ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲ ಎಂದೂ ಹೆಚ್ಚಾಗುವುದಿಲ್ಲ !

Home Remedies For Diabetes:  ಮಧುಮೇಹದಲ್ಲಿ ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬಾರದೇ ಹೆಚ್ಚಾಗುತ್ತಾ ಹೋಗುತ್ತದೆ.  ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಕೆಲವು ಮನೆಮದ್ದುಗಳನ್ನು ಬಳಸಬಹುದು.

Home Remedies For Diabetes : ಹಿಂದೆ ಮಧುಮೇಹ ಎಂದರೆ ಅದು ವಯಸ್ಸಾದ ಮೇಲೆ ಕಾನಿಸಿಕೊಳ್ಳುವ ರೋಗ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಚಿಕ್ಕ ಚಿಕ್ಕ ಮಕ್ಕಳನ್ನು ಕೂಡಾ ಈ ರೋಗ ಬಾಧಿಸುತ್ತಿದೆ. ಅತಿಯಾದಾ ಸಿಹಿ ಸೇವನೆ ಮಾತ್ರ ಇದಕ್ಕೆ ಕಾರಣವಲ್ಲ. ಮಧುಮೇಹಕ್ಕೆ ಬೇರೆ ಬೇರೆ ಕಾರಣಗಳಿವೆ. ಅದರಲ್ಲಿ ಮುಖ್ಯವಾದದ್ದು ಜೀವನಶೈಲಿ ಮತ್ತು ಸರಿಯಾದ ಆಹಾರ ಪದ್ಧತಿ ಅನುಸರಿಸದೆ ಇರುವುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಮಧುಮೇಹದಲ್ಲಿ ರೋಗಿಯ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬಾರದೇ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾದಾಗ ರಕ್ತದಲ್ಲಿನ ಸಕ್ಕರೆ ಮತ್ತ ಅಥವಾ ಬ್ಲಡ್ ಶುಗರ್ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. 

2 /5

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣಕ್ಕೆ ತರಲು ಕೆಲವು ಮನೆಮದ್ದುಗಳನ್ನು ಬಳಸಬಹುದು. ಅಂತಹ  ಮನೆಮದ್ದುಗಳಲ್ಲಿ ಒಂದು ಪಲಾವ್ ಎಲೆ ಅಥವಾ ಬೆ ಲೀಫ್. ಈ ಒಣಗಿದ ಎಲೆ ಮಧುಮೇಹ ನಿಯಂತ್ರಣದಲ್ಲಿ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. 

3 /5

ಈ ಎಲೆಯಲ್ಲಿ ಪಾಲಿಫಿನಾಲ್ ಎನ್ನುವ ಅಂಶ ಕಂಡು ಬರುತ್ತದೆ. ಇದು ರಕ್ತದ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲ  ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನು ಕೂಡಾ ಸಮತೋಲನಗೊಳಿಸುತ್ತದೆ. ಇದರ ನಿಯಮಿತ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.  

4 /5

ಮಧುಮೇಹವನ್ನು ನಿಯಂತ್ರಿಸಲು,  ಪಲಾವ್ ಎಲೆಯ ನೀರನ್ನು ಸೇವಿಸಬೇಕು.  ಬಾಣಲೆಯಲ್ಲಿ ಒಂದು ಲೋಟ ನೀರನ್ನು ಹಾಕಿ ಬಿಸಿ ಮಾಡಿ. ಈಗ 2-3 ಈ ಎಲೆಗಳನ್ನು ಸೇರಿಸಿ ಮತ್ತು ಸುಮಾರು 5 ನಿಮಿಷಗಳ ಕಾಲ ಕುದಿಸಿ. ನಂತರ, ಫಿಲ್ಟರ್ ಮಾಡಿ ಉಗುರುಬೆಚ್ಚಗಿರುವಾಗಲೇ ಈ ನೀರನ್ನು ಕುಡಿಯಿರಿ. 

5 /5

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)