Coronavirus Impact: ತುರ್ತು ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಬಿದ್ದರೆ, ಈ ರೀತಿ ಹಣದ ವ್ಯವಸ್ಥೆ ಮಾಡಿ

Emergency Loan In Corona Time: ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಜನರ ಮುಂದೆ ಹೊಸ ಸವಾಲುಗಳನ್ನೇ ತಂದಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮಗೆ ತುರ್ತು ಹಣಕಾಸಿನ ಅಗತ್ಯ ಬಿದ್ದರೆ ಏನು ಮಾಡಬೇಕು ಎಂಬುದನ್ನು ತಿಳಿಯಲಿ ಈ ಲೇಖನ ಓದಿ.

ನವದೆಹಲಿ: Emergency Loan In Corona Time - ದೇಶಾದ್ಯಂತ ಕೊರೊನಾ ವೈರಸ್ ನ ಎರಡನೇ ಅಲೆ ಜನರ ಮುಂದೆ ಹೊಸ ಸವಾಳುಗಳನ್ನೇ ತಂದಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ಒಂದು ವೇಳೆ ನಿಮಗೆ ತುರ್ತು ಹಣಕಾಸಿನ ಅಗತ್ಯ ಬಿದ್ದರೆ ನೀವೇನು ಮಾಡುವಿರಿ? ಕಳೆದ ವರ್ಷ ಕೊರೊನಾ  ಮಹಾಮಾರಿಯ ಸಂದರ್ಭದಲ್ಲಿ ಜನರು ತಮ್ಮ ಉಳಿತಾಯ ಖಾತೆಯಲ್ಲಿದ್ದ ಹಣವನ್ನು ಬಳಸಿ ತಮ್ಮ ಅಗತ್ಯತೆಗಳನ್ನು ಪೂರೈಸಿಕೊಂಡಿದ್ದರು. ಹೀಗಾಗಿ ತಜ್ಞರು ಒಂದು Contingency Fund ಸಿದ್ಧಪಡಿಸಲು ಸಲಹೆ ನೀಡುತ್ತಾರೆ. ಇದು ನಿಮ್ಮ ವೇತನದ ಸುಮಾರು 6 ಪಟ್ಟು ಇರಬೇಕು. 

 

ಇದನ್ನೂ ಓದಿ-  FD Account: ಈ ಬ್ಯಾಂಕಿನ ಖಾತೆದಾರರು ಮನೆಯಲ್ಲೇ ಕುಳಿತು ಎಫ್‌ಡಿ ಖಾತೆ ತೆರೆಯಲು ಇಲ್ಲಿದೆ ಸುಲಭ ಮಾರ್ಗ

 

ತುರ್ತು ಪರಿಸ್ಥಿತಿಯಲ್ಲಿ ಹೆದರಬೇಡಿ, ಈ ರೀತಿ ತುರ್ತು ಸಾಲ ಪಡೆಯಿರಿ - ತೊಂದರೆಗಳು ನಿಮ್ಮ ಮನೆಯ ಕಾಲಿಂಗ್ ಬೆಲ್ ಬಾರಿಸಿ ಬರುವುದಿಲ್ಲ. ಮೆಡಿಕಲ್ ಎಮರ್ಜೆನ್ಸಿ ನಿಮ್ಮ ಉಳಿತಾಯದ ಎಲ್ಲ ಹಣವನ್ನು ಖಾಲಿ ಮಾಡಿ ಬಿಡುತ್ತವೆ. ಹಾಗಂತ  ನಿಮ್ಮನ್ನು ಹೆದರಿಸಬೇಕು ಎಂಬುದು ನಮ್ಮ ಉದ್ದೇಶವಲ್ಲ. ಭವಿಷ್ಯದ ಸವಾಲುಗಳಿಗೆ ಮೊದಲೇ ಸಿದ್ಧವಾಗಿ ಎಂಬುದಾಗಿದೆ. ಹೀಗಾಗಿ ತುರ್ತು ಪರಿಸ್ಥಿತಿಯಲ್ಲಿ ಯಾವ ರೀತಿ ಹಣವನ್ನು ಸಿದ್ಧಪಡಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

 

ಇದನ್ನೂ ಓದಿ- 15 ವರ್ಷಗಳ PPF ಅವಧಿ ಕಡಿಮೆಗೊಳಿಸಲು ಸರ್ಕಾರಕ್ಕೆ ಸಲಹೆ, EPF ‌ಗೆ ಸಮಾನ ಬಡ್ಡಿ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

1. ಸ್ಥಿರ ಠೇವಣಿ ಮೇಲೆ ಸಾಲ - ಒಂದು ವೇಳೆ ನೀವು ಕೂಡ ಸ್ಥಿರ ಠೇವಣಿ ಖಾತೆಯಲ್ಲಿ ಹಣವನ್ನು ಹೂಡಿಕೆ ಮಾಡಿದ್ದರೆ. ಅದನ್ನು ನೀವು ಅಡವಿಟ್ಟು ಅದರ ಮಳೆ ಸಾಲ ಪಡೆಯಬಹುದು. ನೀವು ಠೇವಣಿ ಇರಿಸಿರುವ ಹಣದ ಶೇ.90 ರಿಂದ ಶೇ.95 ರಷ್ಟು ಸಾಲವನ್ನು ಪಡೆಯಬಹುದು. ಆಕಸ್ಮಿಕ ಬಂದೊದಗುವ ಹಣಕಾಸಿನ ಮುಗ್ಗಟ್ಟನ್ನು ನಿವಾರಿಸುವ ಇದೊಂದು ಉತ್ತಮ ಮಾರ್ಗವಾಗಿದೆ. ಇದರಲ್ಲಿ ನೀವು ನಿಮ್ಮ FD ಮುರಿಯುವ ಅವಶ್ಯಕತೆ ಬೀಳುವುದಿಲ್ಲ. ಇದರಲ್ಲ್ಲಿ ಮಾರ್ಜಿನ್ ಅಮೌಂಟ್ ಕೂಡ ತುಂಬಾ ಕಡಿಮೆಯಾಗಿರುತ್ತದೆ. ಸಾಮಾನ್ಯವಾಗಿ ಈ ರೀತಿಯ ಸಾಲದ ಮೇಲೆ ಬ್ಯಾಂಕ್ ಗಳು FD ಬಡ್ಡಿದರಕ್ಕಿಂತ ಶೇ.2 ರಷ್ಟು ಹೆಚ್ಚು ಬಡ್ಡಿ ಮಾತ್ರ ಪಡೆಯುತ್ತವೆ.

2 /4

2. ಷೇರು ಹಾಗೂ ಮ್ಯೂಚವಲ್ ಫಂಡ್ ಗಳ ಮೇಲೆ ಸಾಲ - ಒಂದು ವೇಳೆ ನೀವು ಷೇರು ಅಥವಾ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿದ್ದರೆ, ಇದಕ್ಕಾಗಿ ಮ್ಯೂಚವಲ್ ಫಂಡ್ ಮಾರಾಟ ಮಾಡುವ ಅವಶ್ಯಕತೆ ಇಲ್ಲ. ಸಾಮಾನ್ಯವಾಗಿ ಷೇರು ಹಾಗೂ ಮ್ಯೂಚವಲ್ ಫಂಡ್ ಗಳ ಒಟ್ಟು ಮೊತ್ತದ ಶೇ.50 ರಷ್ಟು ಹಣವನ್ನು ನೀವು ಸಾಲದ ರೂಪದಲ್ಲಿ ಪಡೆಯಬಹುದು. ಉದಾಹರಣೆಗೆ ಒಂದು ವೇಳೆ ನೀವು ಮ್ಯೂಚವಲ್ ಫಂಡ್ ನಲ್ಲಿ 10 ಲಕ್ಷ ಹಣ ಹೂಡಿಕೆ ಮಾಡಿದ್ದರೆ, ರೂ 5 ಲಕ್ಷದವರೆಗೆ ನೀವು ಸಾಲವನ್ನು ಸುಲಭವಾಗಿ ಪಡೆಯಬಹುದು. ಆದರೆ, ಬಡ್ಡಿ ಮಾತ್ರ ಪರ್ಸನಲ್ ಲೋನ್ ರೀತಿಯಲ್ಲೇ ಇರಲಿದೆ.

3 /4

3. ಪ್ರಿ ಅಪ್ರೂವ್ದ್ ಲೋನ್ - ಒಂದು ವೇಳೆ ನೀವು ವೇತನ ಪಡೆಯುವ ನೌಕರರಾಗಿದ್ದು ಮತ್ತು ನೀವು ಒಂದಿರುವ ಖಾತೆ ಸ್ಯಾಲರಿ ಅಕೌಂಟ್ ಆಗಿದ್ದರೆ. ಆ ಖಾತೆಯ ಮೇಲೆ ನಿಮಗೆ ಪ್ರಿಅಪ್ರೂವ್ದ್ ಲೋನ್ ಸಿಗುತ್ತದೆ. ಬೇಕಾದರೆ ತುರ್ತು ಪರಿಸ್ಥಿತಿ ನೀವು ಇದರ ಲಾಭವನ್ನು ಪಡೆಯಬಹುದು. ಬ್ಯಾಂಕ್ ಗಳು ಇಂತಹ ಸಾಲಗಳ ಮೇಲೆ ಕಡಿಮೆ ಬಡ್ಡಿ ಪಡೆಯುತ್ತವೆ. ಇದಲ್ಲದೆ ಸಾಲದ ಪ್ರಾಸೆಸಿಂಗ್ ಕೂಡ ಬೇಗನೆ ಮುಗಿಯುತ್ತದೆ. ಏಕೆಂದರೆ ಬ್ಯಾಂಕ್ ಗಳಿಗೆ ನಿಮ್ಮ ಉಳಿತಾಯ ಇತಿಹಾಸ, ಸಾಲದ ಇತಿಹಾಸ ಎಲ್ಲವೂ ಮೊದಲೇ ತಿಳಿದಿರುತ್ತದೆ. ಹೀಗಾಗಿ ಈ ರೀತಿಯ ಸಾಲಕ್ಕೆ ದಾಖಲೆಗಳ ಅಗತ್ಯ ಕೂಡ ಕಡಿಮೆ ಬೀಳುತ್ತದೆ ಮತ್ತು ಕೂಡಲೇ ಹಣ ನಿಮ್ಮ ಖಾತೆಗೆ ವರ್ಗಾವಣೆಯಾಗುತ್ತದೆ.

4 /4

4. ಗೋಲ್ಡ್ ಲೋನ್ - ಒಂದು ವೇಳೆ ನಿಮ್ಮ ಮನೆಯಲ್ಲಿ ಚಿನ್ನದ ಆಭರಣಗಳಿದ್ದರೆ, ಅವುಗಳನ್ನು ಅಡವಿಟ್ಟು ನೀವು ಸಾಲ ಪಡೆಯಬಹುದು. ಇದು ಅತ್ಯಂತ ವೇಗವಾಗಿ ಸಾಲ ಪಡೆಯುವ ಮಾರ್ಗವಾಗಿದೆ. ಇಂತಹ ಸಾಲದ ಮೇಲಿನ ಬಡ್ಡಿ ಕೂಡ ಪರ್ಸನಲ್ ಲೋನ್ ಗಿಂತ ಕಡಿಮೆಯಾಗಿರುತ್ತದೆ. ಏಕೆಂದರೆ ಇದು ಸೆಕ್ಯೂರ್ಡ್ ಸಾಲದ ಶ್ರೇಣಿಗೆ ಸೇರುತ್ತದೆ. ಇದರಲ್ಲಿ ಪ್ರೀಪೇಮೆಂಟ್ ಗಾಗಿ ಫ್ಲೆಕ್ಸಿಬಲ್ ಆಪ್ಶನ್ ಕೂಡ ಬ್ಯಾಂಕ್ ಗಳು ಒದಗಿಸುತ್ತವೆ.