Coronavaccine : ಕೊವಾಕ್ಸಿನೋ.. ಕೋವಿಶೀಲ್ಡೋ... ನಿಮಗೆ ಯಾವಾಗ ಸಿಗಲಿದೆ ಲಸಿಕೆ ?

ಕರೋನಾ ಲಸಿಕೆ ಅಭಿಯಾನ ದೇಶದಲ್ಲಿ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ  ಲಸಿಕೆ ನೀಡಲಾಗುತ್ತಿದೆ.

CoronaVaccinationDrive : ಕರೋನಾ ಲಸಿಕೆ ಅಭಿಯಾನ ದೇಶದಲ್ಲಿ ಪ್ರಾರಂಭಿಸಲಾಗಿದೆ. ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ  ಲಸಿಕೆ ನೀಡಲಾಗುತ್ತಿದೆ. ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳು ಪರಿಣಾಮಕಾರಿಯಾಗಿವೆ ಎಂದು ಆರೋಗ್ಯ ಇಲಾಖೆ ಈಗಾಗಲೇ ತಿಳಿಸಿದೆ.  ಈ ಮಧ್ಯೆ, ಲಸಿಕೆ ಹಾಕಿಸಿಕೊಳ್ಳುವವವರ  ಪಟ್ಟಿಯಲ್ಲಿ ತಮ್ಮ ಸರದಿ ಯಾವಾಗ ಬರಲಿದೆ   ಎಂದು ಪ್ರತಿಯೊಬ್ಬರೂ ಕಾತುರರಾಗಿದ್ದಾರೆ. ನಿಮ್ಮ ಮನಸ್ಸಿನಲ್ಲೂ ಇದೇ ಪ್ರಶ್ನೆ ಇದ್ದರೆ, ಅದಕ್ಕೆ ಉತ್ತರ ಇಲ್ಲಿದೆ..

1 /5

ಮೂರು ಹಂತಗಳಲ್ಲಿ  ಲಸಿಕೆ ನೀಡುವ ಕಾರ್ಯ ನಡೆಯಲಿದೆ. . ಮೊದಲ ಹಂತದಲ್ಲಿ ಎಲ್ಲಾ ಕರೋನಾ ಯೋಧರಿಗೆ ಲಸಿಕೆ ನೀಡಲಾಗುವುದು. ಎರಡನೇ ಹಂತದಲ್ಲಿ, ತುರ್ತು ಸೇವೆಗಳಲ್ಲಿ ತೊಡಗಿರುವವರಿಗೆ ನೀಡಲಾಗುತ್ತದೆ. ಇದರ ನಂತರ, ಮೂರನೇ ಹಂತದಲ್ಲಿ, ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ  ಲಸಿಕೆ ನೀಡಲಾಗುವುದು.

2 /5

ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಮಾರ್ಚ್ ಅಂತ್ಯದಲ್ಲಿ Co WIN App ಆರಂಭವಾಗಲಿದೆ.  ಈ ಆ್ಯಪ್ ಮೂಲಕ ಜನರು ವ್ಯಾಕ್ಸಿನೇಷನ್ಗಾಗಿ ತಮ್ಮ ಹೆಸರು ನೋಂದಾಯಿಸಬೇಕಾಗುತ್ತದೆ. ಅಂದರೆ, ಲಸಿಕೆ ಹಾಕಿಸಿಕೊಳ್ಳುವ  ನಿಮ್ಮ ಸರದಿ ಏಪ್ರಿಲ್ ನಂತರವೇ ಬರಲಿದೆ.  ಪ್ರಸ್ತುತ, ಕೋವಿನ್ ಅಪ್ಲಿಕೇಶನ್‌ನಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರ ಡೇಟಾವನ್ನು ಅಪ್‌ಲೋಡ್ ಮಾಡುವ ಕೆಲಸ ನಡೆಯುತ್ತಿದೆ.   

3 /5

Co-WIN ಅಪ್ಲಿಕೇಶನ್ ಪ್ರಾರಂಭಿಸಿದ ನಂತರ, ಸಾಮಾನ್ಯ ಜನರು ತಮ್ಮ ನೋಂದಣಿಯನ್ನು  ಆನ್‌ಲೈನ್‌ನಲ್ಲಿ ಮಾಡಬೇಕಾಗುತ್ತದೆ. ನಂತರ, ನೋಂದಣಿಯಾದವರ  ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ.  ನಂತರ ವ್ಯಾಕ್ಸಿನೆಷನ್ ಹಾಕಿಸುವ ವಿವರಗಳ ಬಗ್ಗೆ ಸಂದೇಶಗಳನ್ನು ಕಳುಹಿಸಲಾಗುತ್ತದೆ. ಇದರೊಂದಿಗೆ ಕ್ಯೂಆರ್ ಕೋಡ್ ಕೂಡಾ ಲಭ್ಯವಿರುತ್ತದೆ.  ಈ ಮೂಲಕ ಲಸಿಕೆ ಪಡೆಯಲು ಜನರಿಗೆ ಇ-ಪ್ರಮಾಣಪತ್ರ ಸಿಗುತ್ತದೆ.  

4 /5

 ಇಲ್ಲಿ ನೆನಪಿಡಬೇಕಾದ  ವಿಷಯವೆಂದರೆ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ  ಲಸಿಕೆಯನ್ನು ನೀಡುವುದಿಲ್ಲ.  ಇದಲ್ಲದೆ, ಗರ್ಭಿಣಿಯರು ಮತ್ತು ಅನಾರೋಗ್ಯ ಪೀಡಿತರಿಗೆ ಲಸಿಕೆ ನೀಡಲಾಗುವುದಿಲ್ಲ.

5 /5

ಈಗಾಗಲೇ ಕರೋನಾ ಸೋಂಕಿಗೆ ತುತ್ತಾಗಿ ಗುಣಮುಖರಾದರು ಕೂಡಾ ಲಸಿಕೆ ಪಡೆಯಬಹುದು. 50 ವರ್ಷ ಮೇಲ್ಪಟ್ಟವರು ಮತ್ತು ಕೆಲವು ಕಾಯಿಲೆಯಿಂದ ಬಳಲುತ್ತಿರುವ ಜನರು ಲಸಿಕೆ ಹಾಕಿಸಿಕೊಳ್ಳಬಹುದೇ ಇಲ್ಲವೇ ಎಂಬ ಮಾಹಿತಿಗಾಗಿ, ದೆಹಲಿ ಏಮ್ಸ್ ನಿರ್ದೇಶಕ ಡಾ.ರಣದೀಪ್ ಗುಲೇರಿಯಾ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ.  ಈ ಸಮಿತಿ ಈಗಾಗಲೇ ವರದಿಯನ್ನು  ನೀತಿ ಆಯೋಗದ   ಸದಸ್ಯ ಡಾ.ವಿ.ಕೆ.ಪಾಲ್ ಅವರಿಗೆ ಸಲ್ಲಿಸಿದೆ. ಯಾವ ರೋಗಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯಬಹುದು ಮತ್ತು ಯಾವ ಕಾಯಿಲೆಗಳಿಂದ ಬಳಲುತ್ತಿರುವವರು ಲಸಿಕೆ ಪಡೆಯುವಂತಿಲ್ಲ ಎನ್ನುವುದನ್ನು  ವರದಿಯಲ್ಲಿ ತಿಳಿಸಲಾಗಿದೆ.  ಈ ವರದಿಯನ್ನು ಶೀಘ್ರದಲ್ಲೇ ಸಾರ್ವಜನಿಕರಿಗೆ ಬಿಡುಗಡೆಗೊಳಿಸಲಾಗುವುದು.