ದೃಷ್ಟಿ ಮಂದವಾಗುತ್ತಿದ್ದರೆ ತಕ್ಷಣ ಈ ಆಹಾರಗಳನ್ನು ಸೇವಿಸಲು ಆರಂಭಿಸಿ.!

ಗ್ಯಾಜೆಟ್‌ಗಳ ಅತಿಯಾದ ಬಳಕೆಯಿಂದಾಗಿ, ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಜನರ ದೃಷ್ಟಿ ಮಸುಕಾಗತೊಡಗಿದೆ. ಇದಲ್ಲದೇ ಇಂದಿನ ಜನರ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಕಣ್ಣ ದೃಷ್ಟಿ ಮಂಜಾಗುತ್ತವೆ.  ದಿನದಿಂದ ದಿನಕ್ಕೆ ಕನ್ನಡಕ ಧರಿಸುವವರ ಸಂಖ್ಯೆ ಹೆಚ್ಚುತ್ತಿದೆ. 

ಬೆಂಗಳೂರು : ಗ್ಯಾಜೆಟ್‌ಗಳ ಅತಿಯಾದ ಬಳಕೆಯಿಂದಾಗಿ, ದೃಷ್ಟಿಯ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ಜನರ ದೃಷ್ಟಿ ಮಸುಕಾಗತೊಡಗಿದೆ. ಇದಲ್ಲದೇ ಇಂದಿನ ಜನರ ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಕಣ್ಣ ದೃಷ್ಟಿ ಮಂಜಾಗುತ್ತವೆ.  ದಿನದಿಂದ ದಿನಕ್ಕೆ ಕನ್ನಡಕ ಧರಿಸುವವರ ಸಂಖ್ಯೆ ಹೆಚ್ಚುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕ್ಯಾರೆಟ್ ನಲ್ಲಿ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು ಕಣ್ಣುಗಳಿಗೆ ಪ್ರಯೋಜನಕಾರಿ. ಕ್ಯಾರೆಟ್ ತಿನ್ನುವುದರಿಂದ ದೃಷ್ಟಿ ಬಲಗೊಳ್ಳುತ್ತದೆ. ನೀವು ಪ್ರತಿದಿನ ಕ್ಯಾರೆಟ್ ಜ್ಯೂಸ್ ಕುಡಿಯುತ್ತಿದ್ದರೆ, ದೃಷ್ಟಿ ಮಂದವಾಗುವುದನ್ನು ಸರಿಪಡಿಸಿಕೊಳ್ಳಬಹುದು. 

2 /5

ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ನೆಲ್ಲಿಕಾಯಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಪ್ರತಿದಿನ ನೆಲ್ಲಿಕಾಯಿ ಸೇವಿಸುವುದರಿಂದ ದೃಷ್ಟಿ ಬಲಗೊಳ್ಳುತ್ತದೆ. ನೆಲ್ಲಿಕಾಯಿ ಪುಡಿ ಅಥವಾ ಜ್ಯೂಸ್ ಸೇವನೆಯು ದೃಷ್ಟಿ ಹೆಚ್ಚಿಸಲು ಪ್ರಯೋಜನಕಾರಿ.   

3 /5

ಪಾಲಕ್ ಸೊಪ್ಪು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಎ ಇದರಲ್ಲಿ ಹೇರಳವಾಗಿ ಇರುತ್ತದೆ. ಇದಲ್ಲದೆ, ಪಾಲಕ್ ಸೊಪ್ಪಿನಲ್ಲಿ ಲುಟೀನ್ ಕಂಡುಬರುತ್ತದೆ. ಇದು ದೃಷ್ಟಿ ಹೆಚ್ಚಿಸುವ ಕೆಲಸ ಮಾಡುತ್ತದೆ. 

4 /5

ಡ್ರೈಫ್ರೂಟ್ಸ್ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ದುರ್ಬಲ ದೃಷ್ಟಿಯನ್ನು ಹೆಚ್ಚಿಸಲು, ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಪ್ರತಿದಿನ ತಿನ್ನಬೇಕು. 

5 /5

ಬಾದಾಮಿ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್ ಗಳು ಹೇರಳವಾಗಿದ್ದು, ದೃಷ್ಟಿ ಹೆಚ್ಚಿಸುವ ಕೆಲಸ ಮಾಡುತ್ತದೆ. ನಿಮ್ಮ ದೃಷ್ಟಿ ಮಸುಕಾಗಿದ್ದರೆ, ನೆನೆಸಿದ ಬಾದಾಮಿ ತಿನ್ನಿರಿ.