ಮಾರ್ಚ್ ತಿಂಗಳಿನಲ್ಲಿ ನಿರ್ಮಾಣಗೊಳ್ಳುತ್ತಿದೆ ಲಕ್ಷ್ಮಿ ನಾರಾಯಣ ಯೋಗ, 3 ರಾಶಿಗಳ ಜನರಿಗೆ ಭಾರಿ ಧನಲಾಭ!

Budh - Shukra Yuti In Aries: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳಿನಲ್ಲಿ ಮೇಷ ರಾಶಿಯಲ್ಲಿ ಬುಧ ಮತ್ತು ಶುಕ್ರರ ಯುತಿ ನೆರವೇರಲಿದ್ದು, ಇದರಿಂದ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳಲಿದೆ. ಈ ಯೋಗ ಎಲ್ಲಾ ದ್ವಾದಶ ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜನರಿಗೆ ಇದು ಅತ್ಯಂತ  ಶುಭ ಫಲಪ್ರದ ಸಾಬೀತಾಗಲಿದೆ.
 

Lakshmi Narayana Yoga In Aries: ಜ್ಯೋತಿಷ್ಯ ಶಾಸ್ತ್ರದಲ್ಲಿ, ರಾಶಿಗಳು ಪರಿವರ್ತನೆಯನ್ನು ಮಾಡಿಕೊಳ್ಳುವ ಮೂಲಕ ವಿವಿಧ ಗ್ರಹಗಳು ಮೈತ್ರಿ ಮಾಡಿಕೊಳ್ಳುತ್ತವೆ. ಇದರ ಪರಿಣಾಮವು ಮಾನವ ಜೀವನ ಮತ್ತು ಭೂಮಿಯ ಮೇಲೆ ಕಂಡುಬರುತ್ತದೆ. ಸಂಪತ್ತು ಮತ್ತು ಸಮೃದ್ಧಿ ಕಾರಕ ಗ್ರಹ ಶುಕ್ರ ಮತ್ತು ವ್ಯಾಪಾರ ಮತ್ತು ಬುದ್ಧಿವಂತಿಕೆಯನ್ನು ಕಾರಕ ಗ್ರಹ ಬುಧದ ಸಂಯೋಜನೆಯು ಮಾರ್ಚ್‌ ತಿಂಗಳಿನಲ್ಲಿ ರೂಪುಗೊಳ್ಳಲಿದೆ. ಇದರಿಂದ ಲಕ್ಷ್ಮೀ ನಾರಾಯಣ ಯೋಗ ಸೃಷ್ಟಿಯಾಗಲಿದೆ. ಈ ಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳೀಯರ ಮೇಲೆ ಕಂಡುಬರಲಿದೆ. ಅದರಲ್ಲಿಯೂ ವಿಶೇಷವಾಗಿ 3 ರಾಶಿಗಳ ಜನರಿಗೆ ಈ ಯೋಗವು ಮಂಗಳಕರ ಮತ್ತು ಫಲಪ್ರದವೆಂದು ಸಾಬೀತಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Holi 2023 ಹಬ್ಬದ ಬಳಿಕ ಈ ರಾಶಿಗಳ ಜನರಿಗೆ ಧನಹಾನಿಯ ಯೋಗ! ಕಾರಣ ಇಲ್ಲಿದೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /3

ಮಿಥುನ ರಾಶಿ - ನೀವು ಲಕ್ಷ್ಮೀ ನಾರಾಯಣ ಯೋಗದಿಂದ ಅಪಾರ ಆರ್ಥಿಕ ಲಾಭವನ್ನು ಪಡೆಯಬಹುದು. ಏಕೆಂದರೆ ನಿಮ್ಮ ರಾಶಿಯಿಂದ ಏಕಾದಶ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಇದನ್ನು ಆದಾಯ ಮತ್ತು ಲಾಭದ ಸ್ಥಾನ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಉತ್ತಮ ಏರಿಕೆ ಕಂಡುಬರಬಹುದು. ಇದರೊಂದಿಗೆ, ಹಳೆಯ ಹೂಡಿಕೆಗಳಿಂದ ಲಾಭದ ಸಾಧ್ಯತೆಗಳಿವೆ. ದೀರ್ಘಕಾಲ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದವರಿಗೆ ಸಮಯ ಅನುಕೂಲಕರವಾಗಿದೆ. ನೀವು ವ್ಯಾಪಾರದಲ್ಲಿ ಹೂಡಿಕೆ ಮಾಡಬಹುದು ಎಂದರ್ಥ. ಷೇರು ಮಾರುಕಟ್ಟೆ, ಬೆಟ್ಟಿಂಗ್ ಮತ್ತು ಲಾಟರಿಯಲ್ಲಿ ಹಣವನ್ನು ಹೂಡಿಕೆ ಮಾಡುವ ಮೂಲಕ ನೀವು ಲಾಭ ಗಳಿಸಬಹುದು.  

2 /3

ಸಿಂಹ ರಾಶಿ - ಲಕ್ಷ್ಮೀ ನಾರಾಯಣ ಯೋಗವು ನಿಮ್ಮ ಪಾಲಿಗೆ ಅತ್ಯಂತ ಮಂಗಳಕರ ಮತ್ತು ಫಲಪ್ರದವಾಗಿದೆ ಎಂದು ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಯಿಂದ ನವಮ ಭಾವದಲ್ಲಿ ಈ ಯೋಗವು ರೂಪುಗೊಳ್ಳಲಿದೆ. ಹೀಗಾಗಿ ನೀವು ಈ ಅವಧಿಯಲ್ಲಿ ಸಾಕಷ್ಟು ಅದೃಷ್ಟದ ಬೆಂಬಲವನ್ನು ಪಡೆಯಬಹುದು. ಅಲ್ಲದೆ, ಸ್ಥಗಿತಗೊಂಡಿರುವ ನಿಮ್ಮ ಕಾಮಗಾರಿಗಳನ್ನು ಈ ಅವಧಿಯಲ್ಲಿ ನೀವು ಪೂರ್ಣಗೊಳಿಸಬಹುದು. ಮತ್ತೊಂದೆಡೆ, ದೀರ್ಘಕಾಲದಿಂದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವವ ತೊಂದರೆಗಳು ಸಹ ಶೀಘ್ರದಲ್ಲೇ ಮುಕ್ತಾಯವಾಗಲಿವೆ. ಅಲ್ಲದೆ, ಈ ಅವಧಿಯಲ್ಲಿ ನೀವು ಯಾವುದೇ ಮಂಗಳ ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು. ಮತ್ತೊಂದೆಡೆ, ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ವಿದ್ಯಾರ್ಥಿಗಳು, ತಮ್ಮ ಆಸೆಯನ್ನು ಈ ಅವಧಿಯಲ್ಲಿ ಈಡೇರಿಸಿಕೊಳ್ಳಬಹುದು.  

3 /3

ಕರ್ಕ ರಾಶಿ - ಲಕ್ಷ್ಮೀ ನಾರಾಯಣ ರಾಜಯೋಗದ ರಚನೆಯಿಂದ, ಕರ್ಕ ರಾಶಿಗಳ ಜನರ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಏಕೆಂದರೆ ಈ ಯೋಗವು ನಿಮ್ಮ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಕೆಲಸ-ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಅಲ್ಲದೆ, ಕೆಲಸ ಹುಡುಕುತ್ತಿರುವವರಿಗೂ ಕೆಲಸ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಇದರೊಂದಿಗೆ, ವ್ಯಾಪಾರಕ್ಕೆ ಸಂಬಂಧಿಸಿದ ಜನರು ಸಹ ಇದರಿಂದ ಲಾಭವನ್ನು ಪಡೆಯುತ್ತಾರೆ. ಮತ್ತೊಂದೆಡೆ, ದೀರ್ಘಕಾಲ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದವರಿಗೆ, ಸಮಯ ಅನುಕೂಲಕರವಾಗಿದೆ. ಉದ್ಯೋಗಸ್ಥರು ಈ ಸಮಯದಲ್ಲಿ ಬಡ್ತಿ ಮತ್ತು ಇನ್ಕ್ರಿಮೆಂಟ್ ಅನ್ನು ಸಹ ಪಡೆಯಬಹುದು. ಆರ್ಥಿಕ ಮುಂಭಾಗದಲ್ಲಿ ಲಾಭದ ಬಲವಾದ ಸಾಧ್ಯತೆಗಳಿವೆ. ಅಲ್ಲದೆ, ಈ ಸಮಯದಲ್ಲಿ ನಿಮ್ಮ ತಂದೆಯೊಂದಿಗಿನ ಸಂಬಂಧವು ಉತ್ತಮವಾಗಿರುತ್ತದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಎರಡೂವರೆ ವರ್ಷಗಳ ಕಾಟ ನಡೆಯುತ್ತಿದೆ, ಇದರಿಂದಾಗಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸ್ವಲ್ಪ ನಿರಾಶೆಗೊಳ್ಳಬಹುದು. ಇದರೊಂದಿಗೆ ಆರೋಗ್ಯವೂ ಮೃದುವಾಗಿರಬಹುದು. (ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)