ಈ ಐದು ತಪ್ಪುಗಳಿಂದಲೇ ದೇಹ ತೂಕ ಹೆಚ್ಚಾಗುವುದು

ತಜ್ಞರ ಪ್ರಕಾರ, ಸ್ಥೂಲಕಾಯತೆ ಹೆಚ್ಚಾಗಲು ದೊಡ್ಡ ಕಾರಣವೆಂದರೆ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ. 

ಬೆಂಗಳೂರು : ಸ್ಥೂಲಕಾಯತೆಯು ಪ್ರಪಂಚದಾದ್ಯಂತ ಜನರನ್ನು ಚಿಂತೆಗೀಡುಮಾಡುವ ಸಮಸ್ಯೆಯಾಗಿದೆ. ಸ್ಥೂಲಕಾಯತೆಯನ್ನು ಭವಿಷ್ಯದ ಸಾಂಕ್ರಾಮಿಕ ರೋಗವಾಗಿಯೂ ನೋಡಲಾಗುತ್ತಿದೆ. ತಜ್ಞರ ಪ್ರಕಾರ, ಸ್ಥೂಲಕಾಯತೆ ಹೆಚ್ಚಾಗಲು ದೊಡ್ಡ ಕಾರಣವೆಂದರೆ ಅನಾರೋಗ್ಯಕರ ಜೀವನಶೈಲಿ ಮತ್ತು ಆಹಾರ ಪದ್ಧತಿ. ಕೆಲವೊಮ್ಮೆ ಕೆಲವು ಕಾಯಿಲೆಗಳಿಂದಾಗಿ ಕೂಡಾ , ಜನರು ತಮ್ಮ ತೂಕವನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ತಜ್ಞರ ಪ್ರಕಾರ, ಕಚೇರಿಯಲ್ಲಿ ಕೆಲಸ ಮಾಡುವ ಜನರಲ್ಲಿ ಕೆಲವು ತಪ್ಪುಗಳು ಸಾಮಾನ್ಯವಾಗಿದೆ. ಇದು ಅವರ ತೂಕ ಹೆಚ್ಚಾಗಲು ಕಾರಣವಾಗಬಹುದು. ಸಾಮಾನ್ಯವಾಗಿ ಜನರು ಈ ಅಭ್ಯಾಸಗಳನ್ನು ಕೇವಲವಾಗಿ ಪರಿಗಣಿಸುತ್ತಾರೆ , ಮಾತ್ರವಲ್ಲ  ಪುನರಾವರ್ತಿಸುತ್ತಾರೆ. ಅದು ಅವರ ಆರೋಗ್ಯದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ಅವರು ಭಾವಿಸುತ್ತಾರೆ. ಆದರೆ ಈ ಅಜಾಗರೂಕತೆ ನಿಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿ ಪರಿಗಣಿಸಬಹುದು. 

2 /5

ಮಧ್ಯಾಹ್ನದ ಊಟಕ್ಕೆ ನಿಗದಿತ ಸಮಯ ನಿಗದಿ ಮಾಡದೇ ಕೆಲವೊಮ್ಮೆ 12 ಗಂಟೆಗೆ ಮತ್ತು ಕೆಲವೊಮ್ಮೆ 4 ಗಂಟೆಗೆ ಊಟಕ್ಕೆ ಹೊರಡುವ ಅಭ್ಯಾಸ ಕಚೇರಿಗೆ ಹೋಗುವವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೆಲವರು ಕೆಲಸ ಹೆಚ್ಚಾದಾಗ ಮಧ್ಯಾಹ್ನದ ಊಟವನ್ನು ಸಹ ತಿನ್ನುವುದಿಲ್ಲ. ಆದರೆ, ಆಹಾರ ಮತ್ತು ಪಾನೀಯಕ್ಕೆ ಸಂಬಂಧಿಸಿದ ಈ ಅಜಾಗರೂಕತೆಯು ಅವರ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ತಡವಾಗಿ ಊಟವನ್ನು ತೆಗೆದುಕೊಳ್ಳುವ ಅಭ್ಯಾಸದಿಂದಾಗಿ, ದೇಹದ ಚಯಾಪಚಯ ಹದಗೆಡುತ್ತದೆ ಮತ್ತು ಈ ಕಾರಣದಿಂದಾಗಿ, ತೂಕ ಹೆಚ್ಚಾಗಲು ಪ್ರಾರಂಭಿಸುತ್ತದೆ.

3 /5

ಜನರು ಅತಿಯಾದ ಕೆಲಸದಿಂದ ಅಥವಾ ಅವಸರದಿಂದಾಗಿ ಆಹಾರವನ್ನು ಜಗಿಯದೆ ವೇಗವಾಗಿ ತಿನ್ನುತ್ತಾರೆ. ಹೀಗೆ ಬೇಗ ಬೇಗ ಊಟ ಮಾಡುವ ಅಭ್ಯಾಸದಿಂದ ಹೊಟ್ಟೆ ತುಂಬಬಹುದು. ಆದರೆ ಆಹಾರ ಜೀರ್ಣವಾಗಲು ತುಂಬಾ ಕಷ್ಟವಾಗುತ್ತದೆ. ಪರಿಣಾಮವಾಗಿ, ಕ್ರಮೇಣ ದೇಹದಲ್ಲಿ ಕೊಬ್ಬಿನ ಪ್ರಮಾಣವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಬೊಜ್ಜು ಹೆಚ್ಚಾಗಲು ಪ್ರಾರಂಭಿಸುತ್ತದೆ. 

4 /5

ಅನೇಕ ಜನರು ಕೆಲಸ ಮಾಡುವಾಗ ಏನನ್ನಾದರೂ ತಿನ್ನುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ಅಭ್ಯಾಸವನ್ನು ಬಿಂಜ್ ಈಟಿಂಗ್ ಎಂದು ಕರೆಯಲಾಗುತ್ತದೆ. ಅಂತಹವರು ಕುಕೀಸ್, ಚಿಪ್ಸ್ ಮತ್ತು ಕರಿದ ಪದಾರ್ಥಗಳನ್ನು ತಿನ್ನುತ್ತಲೇ ಇರುತ್ತಾರೆ. ಅದೇ ರೀತಿ ಕಚೇರಿಯಲ್ಲಿದ್ದಾಗ ಟೀ, ಕಾಫಿ ಕುಡಿಯುವ ಅಭ್ಯಾಸವೂ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಈ ಅಭ್ಯಾಸಗಳಿಂದಾಗಿ, ದೇಹದಲ್ಲಿನ ಕೊಲೆಸ್ಟ್ರಾಲ್, ರಕ್ತದಲ್ಲಿನ ಸಕ್ಕರೆಯ ಮಟ್ಟ ಮತ್ತು ಕೊಬ್ಬಿನ ಅಂಶವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಇವೆಲ್ಲವೂ ಬೊಜ್ಜಿಗೆ ಕಾರಣವಾಗುತ್ತದೆ.

5 /5

ಬೆಳಗ್ಗೆ ಎದ್ದ ತಕ್ಷಣ ಕಚೇರಿಯತ್ತ ಓಡುವ ಜನ ರಾತ್ರಿ ಸೂರ್ಯ ಮುಳುಗಿದ ನಂತರ ಕಚೇರಿಯಿಂದ ಹೊರಡುತ್ತಾರೆ. ಈ ಎಲ್ಲದರಿಂದ, ಸೂರ್ಯನ ಬೆಳಕು ಜನರ ದೇಹದ ಮೇಲೆ ಬೀಳುವುದಿಲ್ಲ ಮತ್ತು ಇದು ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸೂರ್ಯನ ಬೆಳಕು ವಿಟಮಿನ್ ಡಿ ಯ ಮುಖ್ಯ ಮೂಲವಾಗಿದೆ ಮತ್ತು ಸೂರ್ಯನ ಬೆಳಕಿನ ಕೊರತೆಯಿಂದಾಗಿ ದೇಹದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಎರಡರ ಕೊರತೆ ಕಾಣಿಸಿಕೊಳ್ಳುತ್ತದೆ. ಇದು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಇದರೊಂದಿಗೆ ಜನರಲ್ಲಿ ಬೊಜ್ಜು ಹೆಚ್ಚಾಗತೊಡಗುತ್ತದೆ.