ಬೆಳಗಿನ ಜಾವ ಈ ಪಾನೀಯ ಸಾಕು.. ದೇಹದಲ್ಲಿರುವ ಕೊಲೆಸ್ಟ್ರಾಲ್ ಮಂಜುಗಡ್ಡೆಯಂತೆ ಕರಗುತ್ತದೆ!

Cholesterol Control Tips: ಚಳಿಗಾಲದಲ್ಲಿ ಇದನ್ನು ಚಹಾದಂತೆ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳನ್ನು ತಡೆಯುತ್ತದೆ. ಅಲ್ಲದೇ ಈ ಪಾನೀಯವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಹೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಕರಗುತ್ತದೆ.

1 /6

ಪ್ರತಿಯೊಂದು ಆರೋಗ್ಯ ಸಮಸ್ಯೆಗೂ ಆಯುರ್ವೇದದಲ್ಲಿ ಪರಿಹಾರವಿದೆ. ಅಧಿಕ ಕೊಬ್ಬು ಮತ್ತು ತೂಕದಿಂದ ಬಳಲುತ್ತಿರುವವರು ವ್ಯಾಯಾಮದ ಜೊತೆಗೆ ಈ ಆಮ್ಲಾ ಟೀಯನ್ನು ಕುಡಿಯುವುದರಿಂದ ತ್ವರಿತವಾಗಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಆಯುರ್ವೇದ ಹೇಳುತ್ತದೆ. ಅಲ್ಲದೆ, ಚಳಿಗಾಲದಲ್ಲಿ ಇದನ್ನು ಚಹಾದಂತೆ ಕುಡಿಯುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಶೀತ ಮತ್ತು ಕೆಮ್ಮಿನಂತಹ ಸಮಸ್ಯೆಗಳು ಬರುವುದಿಲ್ಲ..   

2 /6

ಹೆಚ್ಚು ಕಾಫಿ ಮತ್ತು ಟೀ ಕುಡಿಯುವುದರಿಂದ ದೇಹದಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಅಲ್ಲದೇ ಈ ಕೆಫಿನ್‌ ಮಾನವನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೇ ಇದು ಮಧುಮೇಹದಂತಹ ಕಾಯಿಲೆಗಳ ಅಪಾಯಯನ್ನು ಹೆಚ್ಚಿಸುತ್ತದೆ.. ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಎರಡ್ಮೂರು ಗಂಟೆಗೊಮ್ಮೆ ಟೀ ಕುಡಿಯುವ ಅಭ್ಯಾಸವಿರುವವರು ನಿತ್ಯದ ಟೀ ಬಿಟ್ಟು ಆಮ್ಲಾ ಟೀ ಕುಡಿಯಬಹುದು.   

3 /6

ಆಮ್ಲಾ ಟೀ ತ್ವರಿತವಾಗಿ ತೂಕ ಕಳೆದುಕೊಳ್ಳು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಇದು ಕೂದಲು, ಕಣ್ಣು ಮತ್ತು ಚರ್ಮಕ್ಕೆ ಒಳ್ಳೆಯದು. ಅಲ್ಲದೇ ಇದರ ಪ್ರತಿನಿತ್ಯದ ಸೇವನೆ ನಿಮ್ಮನ್ನು ಸ್ಲಿಮ್‌ಆಗಿ ಕಾಣುವಂತೆ ಮಾಡುತ್ತದೆ..   

4 /6

ಆಮ್ಲಾ ಟೀ ಮಾಡುವುದು ಹೇಗೆ? : ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಕುದಿಸಿ. ಕುದಿಯುವ ನೀರಿಗೆ ಸ್ವಲ್ಪ ಶುಂಠಿ ಮತ್ತು 4-5 ತುಳಸಿ ಎಲೆಗಳನ್ನು ಸೇರಿಸಿ. ನಂತರ 1 ಚಮಚ ಆಮ್ಲಾ ಪುಡಿಯನ್ನು ನೀರಿನಲ್ಲಿ ಹಾಕಿ ಕುದಿಸಿ.. ಸಿಹಿ ರುಚಿಗೆ ಬೆಲ್ಲ, ಜೇನುತುಪ್ಪ ಸೇರಿಸಿ ಕುಡಿಯಿರಿ..  

5 /6

ಆಮ್ಲಾ ಟೀ ಕುಡಿಯುವುದರಿಂದ ಆಗುವ ಪ್ರಯೋಜನಗಳು: ಈ ಟೀಯನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಬಲಗೊಳ್ಳುತ್ತದೆ. ಇದು ಮಲಬದ್ಧತೆ ಮತ್ತು ಅಜೀರ್ಣದಂತಹ ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಆಮ್ಲಾ ಟೀ ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.   

6 /6

(ಸೂಚನೆ : ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee Kannada News ಅದನ್ನು ಅನುಮೋದಿಸುವುದಿಲ್ಲ.)