Megha Shetty: ಪಿಂಕ್‌ ಮಾರ್ಡನ್‌ ಡ್ರೆಸ್‌ನಲ್ಲಿ ಬಾರ್ಬಿಯಂತೆ ಮಿಂಚಿದ ಗ್ರಾಮಾಯಣ ಸುಂದರಿ!

Megha Shetty Latest Photoshoot: ಕನ್ನಡ ಕಿರುತೆರೆಯ ಜೊತೆ ಜೊತೆಯಲಿ ಸೀರಿಯಲ್‌ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಮೇಘಾ ಶೆಟ್ಟಿ, ಸದಾ ಸೋಷಿಯಲ್‌ ಮಿಡಿಯಾದಲ್ಲಿ ಆಕ್ಟೀವ್‌ ಆಗಿರುವರು, ಇತ್ತೀಚೆಗೆ ಮಾರ್ಡನ್‌ ಡ್ರೆಸ್‌ನಲ್ಲಿ ಹೊಸ ಫೋಟೋಶೂಟ್‌ ಮಾಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /9

ಕನ್ನಡದ ನಟಿ ಮೇಘಾ ಶೆಟ್ಟಿ ಟ್ರೆಡಿಷನಲ್ ವೇರ್‌ನಲ್ಲಿಯಾದರೂ ಇರಲಿ, ಅಥವಾ ಮಾಡರ್ನ್ ಲುಕ್ನಲ್ಲಿ ಆದರೂ ಇರಲಿ ನಟಿ  ತುಂಬಾ ಅತ್ಯದ್ಭುತವಾಗಿಯೇ ಕಾಣಿಸುತ್ತಾರೆ.

2 /9

ಸ್ಯಾಂಡಲ್‌ವುಡ್‌ ನಟಿ ಮೇಘಾ ಶೆಟ್ಟಿ ಹೊಸದಾಗಿ ಪಿಂಕ್ ಕಲರ್ ಡ್ರೆಸ್ ತೊಟ್ಟು ಫೋಟೋಶೂಟ್‌ ಮಾಡಿಸಿದ್ದಾರೆ. ಇದರಲ್ಲಿ ಈ ನಟಿ ಮಿರ ಮಿರನೆ ಮಿಂಚುತ್ತಿದ್ದಾರೆ. 

3 /9

ಚಂದನವನದ ನಟಿ ಮೇಘಾ ಶೆಟ್ಟಿ ಪಿಂಕ್‌ ಕಲರ್‌ ಸ್ಟೈಲಿಶ್ ಡ್ರೆಸ್‌ನಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುವಂತೆ ಕಾಣಿಸಿಕೊಂಡಿದ್ದಾರೆ.ಇದನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದಾರೆ.

4 /9

ನಟಿ ಮೇಘಾ ಶೆಟ್ಟಿ ಫೋಟೋಗಳಿಗೆ ಒಂದು ದಿನದಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಲೈಕ್ಸ್‌ ಬಂದಿದೆ. ಹಾಗೆಯೇ ಕಮೆಂಟ್‌ಗಳ ಸುರಿಮಳೆಯೇ ಆಗಿದೆ.  

5 /9

ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದು, ಆಗಾಗ ಫೋಟೋ ಶೂಟ್ ಮಾಡಿಸಿ ಫ್ಯಾನ್ಸ್‌ ಜೊತೆಗೆ ಹಂಚಿಕೊಳ್ಳುತ್ತಾರೆ. ಈ ಹಿಂದೆ ಟ್ರೆಡಿಷನಲ್ ಲುಕ್‌ನಲ್ಲಿ ಸೀರೆಯುಟ್ಟು ಸಾಂಪ್ರದಾಯಿಕ ಉಡುಗೆಯಲ್ಲಿ ಫೋಟೋಶೂಟ್ ಮಾಡಿಕೊಂಡಿದ್ದರು.

6 /9

ಕರಾವಳಿ ಬೆಡಗಿ ಮೇಘಾ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಸ್ಟೈಲಿಶ್ ಡ್ರೆಸ್ ತೊಟ್ಟು ಮಾಡರ್ನ್ ಲುಕ್‌ನಲ್ಲಿ ಮಿಂಚುತ್ತಿದ್ದು, ಇದನ್ನು ನೋಡಿದ ಅಭಿಮಾನಿಗಳು ಈಕೆಯ ಲುಕ್‌ಗೆ ಕಳೆದು ಹೋಗಿದ್ದರು.

7 /9

ಮೇಘಾ ಫೋಟೋಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ, ಕಮೆಂಟ್‌ ಬಾಕ್ಸ್‌ನಲ್ಲಿ ನೆಟ್ಟಿಗರು ಸೋ ಕ್ಯೂಟ್, ನೈಸ್, ನಿದ್ದೆ ಕದ್ದ ರಾಣಿ, ಕನಸಿನ ರಾಣಿ ಅಂತೆಲ್ಲಾ ನಾನಾ ರೀತಿಯಲ್ಲಿ ಕಾಮೆಂಟ್ ಹಾಕುತ್ತಾ ಖುಷಿ ಪಡುತ್ತಿದ್ದಾರೆ.

8 /9

ಮೇಘಾ ಶೆಟ್ಟಿ ಮೊದಲು ಜೊತೆ ಜೊತೆಯಲಿ ಧಾರಾವಾಹಿಯ ಅನು ಸಿರಿಮನೆ ಪಾತ್ರದ ಮೂಲಕ ಮನೆಮಾತಾದವರು, ಬಳಿಕ ಸಿನಿಮಾಗಳಲ್ಲೇ ಹೆಚ್ಚಾಗಿ ಆಫರ್ ಬರುತ್ತಿದ್ದ ಕಾರಣ ಮತ್ತೆ ಕಿರುತೆರೆಗೆ ಬರುವ ಸಾಹಸ ಮಾಡಲೇ ಇಲ್ಲ.

9 /9

ನಟಿ ಮೇಘಾ ಶೆಟ್ಟಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ತ್ರಿಬಲ್ ರೈಡಿಂಗ್' , ಡಾರ್ಲಿಂಗ್ ಕೃಷ್ಣ ಜೊತೆ 'ದಿಲ್ ಪಸಂದ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಂದ 'ಕೈವ' ಸಿನಿಮಾ ಮೂಲಕ ಕೂಡ ಈ ನಟಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಸದ್ಯ ಈ ನಟಿಯ ಕೈಯಲ್ಲಿ ಸದ್ಯ ವಿನಯ್ ರಾಜ್‌ಕುಮಾರ್ ಅಭಿನಯದ 'ಗ್ರಾಮಾಯಣ' ಸಿನಿಮಾ ಇದೆ.