ಅವನಿಂದಾಗಿ ಆರತಿ ಕೆರಿಯರ್ ಹಾಳಾಯ್ತು, ಖಿನ್ನತೆಗೆ ಒಳಗಾದರು..! ನಟಿ ಸಾವಿನ ಕುರಿತು ನಿರ್ಮಾಪಕನ ಶಾಕಿಂಗ್ ಹೇಳಿಕೆ

Aarathi Agarwal : ಆರತಿ ಅಗರ್ವಾಲ್ ಅನಿರೀಕ್ಷಿತ ಸಾವು ಅವರ ಅಭಿಮಾನಿಗಳನ್ನು ದುಃಖಕ್ಕೆ ದೂಡಿತ್ತು. ಆಕೆಯ ಸಾವಿಗೆ ಪರೋಕ್ಷವಾಗಿ ಕೆಲವರು ಕಾರಣ ಎಂಬ ವಾದ ಇಂದಿಗೂ ಇದೆ. ಇದೀಗ ಈ ಕುರಿತು ಹಿರಿಯ ನಿರ್ಮಾಪಕರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. 

1 /6

ಕೆಲವು ಯುವತಿಯರು ಇಂಡಸ್ಟ್ರಿಗೆ ಕಾಲಿಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡುತ್ತಾರೆ. ಅಂತಹವರಲ್ಲಿ ಆರತಿ ಅಗರ್ವಾಲ್ ಕೂಡ ಒಬ್ಬರು. ಆರತಿ ಅವರು ಪಾಗಲ್ ಪನ್ ಹಿಂದಿ ಚಲನಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಿರ್ದೇಶಕ ಕೆ ವಿಜಯ ಭಾಸ್ಕರ್ ಈಕೆಯನ್ನ ಟಾಲಿವುಡ್‌ಗೆ ಪರಿಚಯ ಮಾಡಿಸಿದರು. ವೆಂಕಟೇಶ್ ಎದುರು ನಾಕು ನುವು ನಾಚಾವು ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಎದಿರು ನಟಿ ಕಾಣಿಸಿಕೊಂಡರು.   

2 /6

ಮೊದಲ ಸಿನಿಮಾ ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ಈ ಸುಂದರಿಗೆ ಆಫರ್‌ಗಳು ಸಾಲುಗಟ್ಟಿ ನಿಂತವು. ನಂತರ ಅಲ್ಲರಿ ರಾಮುಡು ಮತ್ತು ಇಂದ್ರ ಚಿತ್ರಗಳಲ್ಲಿ ನಟಿಸಿದರು. ಈ ಎರಡೂ ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾದವು. ಇಂದ್ರ ಇಂಡಸ್ಟ್ರಿ ಹಿಟ್ ಸಿನಿಮಾ ಆಗಿ ಹೊರಹೊಮ್ಮಿತು. ತದನಂತರ ಮಹೇಶ್ ಬಾಬು, ಪ್ರಭಾಸ್, ಬಾಲಕೃಷ್ಣ, ನಾಗಾರ್ಜುನ ಸೇರಿದಂತೆ ಮುಂತಾದ ತಾರೆಯರ ಜೊತೆ ನಟಿಸಿ ಸೈ ಎನಿಸಿಕೊಂಡರು.  

3 /6

ಆರತಿ ಅಗರ್ವಾಲ್ ನಟ ತರುಣ್ ಜೊತೆಗೆ ʼನುವು ಲೇಕ ನೇನು ಲೇನುʼ ಮತ್ತು ʼಸೊಗ್ಗಾಡುʼ ಚಿತ್ರಗಳಲ್ಲಿ ನಟಿಸಿದ್ದಾರೆ. ಇಬ್ಬರ ನಡುವೆ ಸಂಬಂಧ ಇತ್ತು ಎಂಬ ಮಾತಿದೆ. ಅಲ್ಲದೆ, ಇಬ್ಬರು ಮದುವೆಯಾಗಲು ಬಯಸಿದ್ದರು. ಇವರ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ, ಆರತಿ ಅಗರ್ವಾಲ್ ಜೊತೆಗಿನ ಸಂಬಂಧದ ವರದಿಗಳನ್ನು ತರುಣ್ ಪೋಷಕರು ನಿರಾಕರಿಸಿದ್ದಾರೆ.   

4 /6

ಸಧ್ಯ ಆರತಿ ಅಗರ್ವಾಲ್ ವೃತ್ತಿ ಬದುಕನ್ನು ಹಾಳು ಮಾಡಿದ್ದು ಆಕೆಯ ತಂದೆ ಎಂದು ನಿರ್ಮಾಪಕ ಚಂಟಿ ಅಡ್ಡಾಳ ಹೇಳಿಕೆ ನೀಡಿರುವುದು ಚರ್ಚೆಗೆ ಕಾರಣವಾಗಿದೆ. ಅಲ್ಲರಿ ರಾಮಡು ಸಿನಿಮಾದಲ್ಲಿ ಎನ್‌ಟಿಆರ್ ಗೆ ಜೋಡಿಯಾಗಿ ಚಾರ್ಮಿ ನಟಿಸಬೇಕಿತ್ತು. ಆದರೆ ನಾವು ಆರ್ತಿ ಅಗರ್ವಾಲ್ ಅವರನ್ನು ತೆಗೆದುಕೊಂಡೆವು. ನಮ್ಮ ಬ್ಯಾನರ್ ನಲ್ಲಿ ಆದಿವಾಸಿ ರಾಮುಡು ಎಂಬ ಸಿನಿಮಾ ಕೂಡ ಮಾಡಿದ್ದೇವೆ. ಆರತಿ ಅಗರ್ವಾಲ್ ಸೆಟ್‌ಗಳಲ್ಲಿ ತುಂಬಾ ಚುರುಕಾಗಿದ್ದರು. ಅವರ ತಂದೆ ಬಂದಾಗ ಮೌನವಾಗುತ್ತಾರೆ. ಆರತಿ ಅಗರ್ವಾಲ್ ಮೇಲೆ ಆಕೆಯ ತಂದೆಯ ಪ್ರಭಾವ ಅಪಾರವಾಗಿತ್ತು.   

5 /6

ಚಿತ್ರಗಳ ಆಯ್ಕೆಯ ಜೊತೆಗೆ ಅವರ ವೃತ್ತಿಜೀವನದ ಬಗ್ಗೆ ಅವರ ತಂದೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆರತಿ ಅಗರ್ವಾಲ್ ತನ್ನ ತಂದೆಯ ಒತ್ತಡದಿಂದ ಖಿನ್ನತೆಗೆ ಒಳಗಾಗಿದ್ದಳು ಎಂದು ಚಂಟಿ ಅಡ್ಡಾಳ ಅವರು ನೀಡಿರುವ ಹೇಳಿಕೆಗಳುಸ ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿವೆ.   

6 /6

2010 ರ ನಂತರ ತೂಕ ಹೆಚ್ಚಳದಿಂದಾಗಿ ಆರತಿ ಅವರ ಸಿನಿ ಜೀವನ ಹಾಳಾಯಿತು. 2011 ರ ನಂತರ ನಾಲ್ಕು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲಿ ನಟಿಸಲಿಲ್ಲ.  ಆರತಿ ಅಗರ್ವಾಲ್ 2007 ರಲ್ಲಿ ವಿವಾಹವಾಗಿ, 2009 ರಲ್ಲಿ ವಿಚ್ಛೇದನ ಪಡೆದರು. 2015 ರಲ್ಲಿ ನಿಧನರಾದರು. ತೂಕ ಇಳಿಸಿಕೊಳ್ಳಲು ಲಿಪೊಸಕ್ಷನ್ ಮಾಡಿದ್ದರಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಹೇಳಲಾಗಿದೆ.