ಚಾಣಕ್ಯ ನೀತಿ: ಜೀವನ ಸಂಗಾತಿಯ ಈ ಗುಣ ವ್ಯಕ್ತಿಯನ್ನು ಯಶಸ್ವಿಗೊಳಿಸುತ್ತವೆ, ಮನೆ ಸ್ವರ್ಗವಾಗುತ್ತದೆ

Chanakya Niti for Life Partner: ಉತ್ತಮ ದಾಂಪತ್ಯ ಜೀವನಕ್ಕೆ ಉತ್ತಮ ಜೀವನ ಸಂಗಾತಿ ಹೊಂದುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿಯು ಮನೆ ಮತ್ತು ಯಾವುದೇ ವ್ಯಕ್ತಿಯ ಜೀವನವನ್ನು ಸ್ವರ್ಗವಾಗಿಸಬಹುದು.

ಜೀವನ ಸಂಗಾತಿಗೆ ಚಾಣಕ್ಯ ನೀತಿ: ಉತ್ತಮ ದಾಂಪತ್ಯ ಜೀವನಕ್ಕೆ ಉತ್ತಮ ಜೀವನ ಸಂಗಾತಿ ಹೊಂದುವುದು ಬಹಳ ಮುಖ್ಯ. ಉತ್ತಮ ಜೀವನ ಸಂಗಾತಿಯು ಮನೆ ಮತ್ತು ಯಾವುದೇ ವ್ಯಕ್ತಿಯ ಜೀವನವನ್ನು ಸ್ವರ್ಗವಾಗಿಸಬಹುದು. ಮತ್ತೊಂದೆಡೆ ನೀವು ಜೀವನ ಸಂಗಾತಿಯನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡರೆ ಜೀವನವು ನರಕವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮದುವೆಗೆ ಜೀವನ ಸಂಗಾತಿ ಆಯ್ಕೆ ಮಾಡಲು ಹೋದಾಗ ಖಂಡಿತವಾಗಿಯೂ ಕೆಲವು ಗುಣಗಳನ್ನು ನೋಡಬೇಕು. ಆಚಾರ್ಯ ಚಾಣಕ್ಯರು ಈ ಗುಣಗಳ ಬಗ್ಗೆ ವಿವರವಾಗಿ ವಿವರಿಸಿದ್ದಾರೆ. ಜೀವನ ಸಂಗಾತಿ ಆಯ್ಕೆ ಮಾಡುವ ಮೊದಲು ಅವರನ್ನು ಕೆಲವು ವಿಷಯಗಳ ಬಗ್ಗೆ ಪರೀಕ್ಷಿಸಬೇಕಂತೆ. ಇದು ನಿಮ್ಮ ಮುಂದಿನ ಜೀವನಕ್ಕೆ ಸಹಾಯ ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಚಾರ್ಯ ಚಾಣಕ್ಯರು ಹೇಳುವಂತೆ ತಾಳ್ಮೆ ಇದ್ದವರು ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸುತ್ತಾರೆ. ಬಿಕ್ಕಟ್ಟಿನ ಸಮಯದಲ್ಲಿ, ಅವರು ಕುಟುಂಬವನ್ನು ರಕ್ಷಿಸುತ್ತಾರೆ. ಹೀಗಾಗಿ ಮದುವೆಗೂ ಮೊದಲು ನಿಮ್ಮ ಜೀವನ ಸಂಗಾತಿಯಲ್ಲಿ ಈ ಗುಣ ಪರಿಶೀಲಿಸುವುದು ಅವಶ್ಯಕ.

2 /5

ಕೋಪವು ವ್ಯಕ್ತಿಯ ಜೀವನವನ್ನು ನಾಶಪಡಿಸುತ್ತದೆ. ಇದರಿಂದ ಅನೇಕ ಕುಟುಂಬಗಳು ನಾಶವಾಗಿವೆ. ವ್ಯಕ್ತಿ ಇದನ್ನು ಅರಿತುಕೊಳ್ಳುವ ಹೊತ್ತಿಗೆ ಅದು ತುಂಬಾ ತಡವಾಗಿರುತ್ತದೆ. ಕೋಪಗೊಂಡ ವ್ಯಕ್ತಿಯು ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನೇ ಮರೆತುಬಿಡುತ್ತಾನೆ.

3 /5

ಯಾವುದೇ ವೈವಾಹಿಕ ಜೀವನಕ್ಕೆ ಸಿಹಿ ಮಾತು ಅಥವಾ ಸಂವಹನ ಬಹಳ ಮುಖ್ಯ. ಇಬ್ಬರನ್ನು ಒಟ್ಟಿಗೆ ಇಡಲು ಇದು ತುಂಬಾ ಸಹಕಾರಿ. ಇಂತಹ ಪರಿಸ್ಥಿತಿಯಲ್ಲಿ ಉತ್ತಮ ಜೀವನ ಸಂಗಾತಿ ಆಯ್ಕೆ ಮಾಡುವುದು ಅವಶ್ಯಕ. ಚೆನ್ನಾಗಿ ಮಾತನಾಡುವ ಕಲೆ ಹೊಂದಿರುವ ಸಂಗಾತಿ ಆಯ್ಕೆ ನಿಮ್ಮ ಭವಿಷ್ಯದ ಜೀವನಕ್ಕೆ ಉತ್ತಮ.   

4 /5

ಜೀವನ ಸಂಗಾತಿ ಉತ್ತಮ ನಡವಳಿಕೆ ಹೊಂದಿರುವುದು ಬಹಳ ಮುಖ್ಯ. ಜೀವನ ಸಂಗಾತಿಯನ್ನು ಆರಿಸಿಕೊಂಡಾಗಲೆಲ್ಲಾ ಸೌಂದರ್ಯದ ಬದಲು ಸಂಸ್ಕೃತಿಗೆ ಪ್ರಾಮುಖ್ಯತೆ ನೀಡಿ. ಸುಸಂಸ್ಕೃತ ಮಹಿಳೆ ಮನೆಯನ್ನು ಸ್ವರ್ಗವನ್ನಾಗಿ ಮಾಡುತ್ತಾಳೆ.

5 /5

ಯಾವುದೇ ಒತ್ತಡದಿಂದ ಮದುವೆಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳಬೇಡಿ. ಒತ್ತಡದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಯಾವಾಗಲೂ ತಪ್ಪಾಗುತ್ತದೆ. ಅದು ಇಡೀ ಜೀವನಕ್ಕೆ ತೊಂದರೆ ನೀಡುತ್ತದೆ.   ಹೀಗಾಗಿ ಎಚ್ಚರಿಕೆಯಿಂದ ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಬೇಕು. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)