Chanakya Niti: ಮದುವೆಗೆ ಮುನ್ನ ನಿಮ್ಮ ಜೀವನ ಸಂಗಾತಿಯನ್ನು ಈ ವಿಷಯಗಳ ಬಗ್ಗೆ ಪರೀಕ್ಷಿಸಿ!

Chanakya Niti About Life Partner: ಭಾರತದ ಪ್ರಮುಖ ರಾಜತಾಂತ್ರಿಕರೆಂದು ಪರಿಗಣಿಸಲ್ಪಟ್ಟಿರುವ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ.

ಜೀವನ ಸಂಗಾತಿಯ ಬಗ್ಗೆ ಚಾಣಕ್ಯ ನೀತಿ: ಜೀವನದಲ್ಲಿ ಉತ್ತಮ ಸಂಗಾತಿಯನ್ನು ಹೊಂದುವುದು ಬಹಳ ಮುಖ್ಯ. ಯಾವುದೇ ವ್ಯಕ್ತಿ ಸರಿಯಾದ ಜೀವನ ಸಂಗಾತಿಯ ಬೆಂಬಲ ಪಡೆದರೆ, ಆತನ ಪ್ರಗತಿಯ ಹಾದಿ ಉತ್ತಮವಾಗಿರುತ್ತದೆ. ಒಂದು ವೇಳೆ ನೀವು ಉತ್ತಮ ಜೀವನ ಸಂಗಾತಿಯನ್ನು ಆಯ್ಕೆ ಮಾಡದಿದ್ದರೆ ನಿಮ್ಮ ಜೀವನವು ನರಕಕ್ಕಿಂತ ಕೆಟ್ಟದಾಗಿರುತ್ತದೆ. ಭಾರತದ ಪ್ರಮುಖ ರಾಜತಾಂತ್ರಿಕರೆಂದು ಪರಿಗಣಿಸಲ್ಪಟ್ಟಿರುವ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಸಂತೋಷದ ದಾಂಪತ್ಯ ಜೀವನಕ್ಕೆ ಸಂಬಂಧಿಸಿದಂತೆ ಅನೇಕ ವಿಷಯಗಳ ಬಗ್ಗೆ ಹೇಳಿದ್ದಾರೆ. ಈ ಸಲಹೆಗಳನ್ನು ಪಾಲಿಸಿದರೆ ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆಚಾರ್ಯ ಚಾಣಕ್ಯರ ಪ್ರಕಾರ, ಉತ್ತಮ ದಾಂಪತ್ಯ ಜೀವನಕ್ಕೆ ಮದುವೆಗೆ ಮೊದಲು ಜೀವನ ಸಂಗಾತಿಯ ಬಗ್ಗೆ ಕೆಲವು ವಿಷಯಗಳನ್ನು ಮುಖ್ಯವಾಗಿ ತಿಳಿದುಕೊಳ್ಳಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G

Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಕೋಪವು ಯಾವುದೇ ಮನುಷ್ಯನನ್ನು ನಾಶಪಡಿಸುತ್ತದೆ. ಇದರಿಂದಾಗಿ ಮಿತ್ರರೂ ಶತ್ರುಗಳಾಗುತ್ತಾರೆ ಮತ್ತು ವ್ಯಕ್ತಿಯು ಯೋಚಿಸದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಕೋಪವು ವೈವಾಹಿಕ ಜೀವನವನ್ನು ನರಕವಾಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮದುವೆಗೂ ಮೊದಲು ನಿಮ್ಮ ಸಂಗಾತಿಯ ಕೋಪವನ್ನು ಪರೀಕ್ಷಿಸುವುದು ಅತ್ಯವಶ್ಯಕ.

2 /5

ಚಾಣಕ್ಯನ ನೀತಿ ಶಾಸ್ತ್ರದ ಪ್ರಕಾರ, ಯಾವುದೇ ಮನುಷ್ಯನಿಗೆ ತಾಳ್ಮೆ ಬಹಳ ಮುಖ್ಯ. ಇದು ಮನಷ್ಯನ ಉತ್ತಮ ಗುಣಗಳಲ್ಲಿ ಒಂದು. ತಾಳ್ಮೆ ಎಂಬುದು ವ್ಯಕ್ತಿಯ ಯಾವುದೇ ನಿರ್ಣಾಯಕ ಪರಿಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಜೀವನ ಸಂಗಾತಿಯನ್ನು ನೀವು ಆರಿಸಿಕೊಂಡಾಗ ಈ ಗುಣಕ್ಕೆ ವಿಶೇಷ ಗಮನ ಕೊಡಬೇಕು.

3 /5

ಚಾಣಕ್ಯ ನೀತಿಯ ಪ್ರಕಾರ, ನೀವು ಯಾರನ್ನಾದರೂ ಮದುವೆಯಾಗಲು ನಿರ್ಧರಿಸಿದಾಗ, ಮೊದಲು ಅವರ ಗುಣಗಳನ್ನು ನೋಡಿ, ಅವರ ಸೌಂದರ್ಯವನ್ನಲ್ಲ. ಚಾಣಕ್ಯರ ಪ್ರಕಾರ, ಯಾವುದೇ ವ್ಯಕ್ತಿಯ ಸೌಂದರ್ಯವು ಜೀವನಕ್ಕೆ ಮುಖ್ಯವಾಗುವುದಿಲ್ಲ, ಉತ್ತಮ ಗುಣಗಳು ಇಲ್ಲದಿದ್ದರೆ ವ್ಯಕ್ತಿಯ ಸೌಂದರ್ಯ ಉಪಯೋಗಕ್ಕೆ ಬರುವುದಿಲ್ಲವಂತೆ.  

4 /5

ಆಚಾರ್ಯ ಚಾಣಕ್ಯ ಹೇಳುವಂತೆ ಮಾನವನಿಗೆ ಧಾರ್ಮಿಕತೆ ಬಹಳ ಮುಖ್ಯ. ಧಾರ್ಮಿಕ ವ್ಯಕ್ತಿಯು ಸಂಯಮದಿಂದ ಕೂಡಿರುತ್ತಾನೆ ಮತ್ತು ತನ್ನ ಜೀವನ ಸಂಗಾತಿಯ ಕಡೆಗೆ ನಂಬಿಗಸ್ತನಾಗಿರುತ್ತಾನೆ. ಹೀಗಾಗಿ ಮದುವೆಗೆ ಮೊದಲು ನಿಮ್ಮ ಜೀವನ ಸಂಗಾತಿ ಎಷ್ಟು ಧಾರ್ಮಿಕ ಮನಸ್ಥಿತಿ ಹೊಂದಿದ್ದಾರೆಂದು ಪರೀಕ್ಷಿಸುವುದು ಮುಖ್ಯ.

5 /5

ಆಚಾರ್ಯ ಚಾಣಕ್ಯರ ಪ್ರಕಾರ, ನೀವು ಮಹಿಳೆಯನ್ನು ಮದುವೆಯಾಗಲು ಯೋಚಿಸಿದಾಗ, ಆಕೆಯ ಗುಣಗಳನ್ನು ಪರೀಕ್ಷಿಸಬೇಕು. ಮಹಿಳೆ ಸದ್ಗುಣಿಯಾಗಿರುವುದು ಬಹಳ ಮುಖ್ಯ. ಸೌಂದರ್ಯವು ಯಾವಾಗಲೂ ನಿಮ್ಮೊಂದಿಗೆ ಇರುವುದಿಲ್ಲ, ಆದರೆ ಸದ್ಗುಣಶೀಲ ಮಹಿಳೆ ಪ್ರತಿಕೂಲ ಸಂದರ್ಭಗಳಲ್ಲಿಯೂ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ. (ಗಮನಿಸಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. Zee Kannada News ಇದನ್ನು ದೃಢಪಡಿಸುವುದಿಲ್ಲ.)