DA ಬಗ್ಗೆ ಸರ್ಕಾರದ ಸ್ಪಷ್ಟ ನಿರ್ಧಾರ!ತುಟ್ಟಿಭತ್ಯೆ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಬಹುದೊಡ್ಡ ನಿರಾಸೆ


ತುಟ್ಟಿಭತ್ಯೆ ಹೆಚ್ಚಳಕಾಗಿ ಕಾಯುತ್ತಿರುವ ಸರ್ಕಾರಿ ನೌಕರರಿಗೆ ಸರ್ಕಾರ ಶಾಕ್ ನೀಡಿದೆ. ತುಟ್ಟಿಭತ್ಯೆ ಬಗ್ಗೆ ತನ್ನ ಸ್ಪಷ್ಟ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಿದೆ.  

7th Pay Commission :ಜೂನ್ 2024 ಗಾಗಿ AICPI ಸೂಚ್ಯಂಕ ಸಂಖ್ಯೆಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ.ಇದರ ಬೆನ್ನಲ್ಲೇ ತುಟ್ಟಿಭತ್ಯೆ ಹೆಚ್ಚಳ ಎಷ್ಟಾಗಬಹುದು ಎನ್ನುವ ಒಂದು ಸ್ಪಷ್ಟ ಮಾಹಿತಿ ಸಿಕ್ಕ ಹಾಗೆ ಆಗಿದೆ.ಇದರ ಮಧ್ಯೆ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಅಪ್ಡೇಟ್ ಬಂದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

7 ನೇ ವೇತನ ಆಯೋಗದ ಪ್ರಕಾರ,ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ವರ್ಷದಲ್ಲಿ ಎರಡು ಬಾರಿ ತುಟ್ಟಿಭತ್ಯೆ ಹೆಚ್ಚಾಗುತ್ತದೆ.ಹಣದುಬ್ಬರದ ಆಧಾರದ ಮೇಲೆ ಈ ಹೆಚ್ಚಳವನ್ನು ಘೋಷಿಸಲಾಗುತ್ತದೆ.   

2 /8

ಇದೀಗ ನೌಕರರು ಜುಲೈ ತಿಂಗಳಿನಲ್ಲಿ ಘೋಷಿಸಬೇಕಾದ ತುಟ್ಟಿಭತ್ಯೆಯ ನಿರೀಕ್ಷೆಯಲ್ಲಿದ್ದಾರೆ. ಸಾಮಾನ್ಯವಾಗಿ ಈ ಘೋಷಣೆಯನ್ನು ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ಆರಂಭದಲ್ಲಿ ಘೋಷಿಸಲಾಗುತ್ತದೆ.   

3 /8

ಒಂದು ಲೆಕ್ಕಾಚಾರದ ಪ್ರಕಾರ ಈ ಬಾರಿ ವರ್ಷದ ಎರಡನೇ ತುಟ್ಟಿಭತ್ಯೆ ಪರಿಷ್ಕರಣೆಯಲ್ಲಿ 3% ಡಿಎ ಏರಿಕೆಯಾಗುವ ನಿರೀಕ್ಷೆ ನೌಕರರದ್ದು.ಹೀಗಾದಾಗ ತುಟ್ಟಿ ಭತ್ಯೆ ಮತ್ತು ತುಟ್ಟಿಪರಿಹಾರ  ಶೇ.53ಕ್ಕೆ ಏರಲಿದೆ ಎನ್ನುವುದು ಸದ್ಯದ ಲೆಕ್ಕಾಚಾರ.    

4 /8

ಈ ಮಧ್ಯೆ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಅಪ್ಡೇಟ್ ಬಂದಿದೆ.ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಡೆಹಿಡಿಯಲಾಗಿರುವ ೧೮ ತಿಂಗಳ ತುಟ್ಟಿಭತ್ಯೆ ಬಗ್ಗೆ.ಈ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂದು ನೌಕರರು ಕಾತರದಿಂದ ಕಾಯುತ್ತಿದ್ದಾರೆ.   

5 /8

ಆದರೆ ಈ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಿದೆ.ಬಾಕಿ ಉಳಿಸಿಕೊಂಡಿರುವ ೧೮ ತಿಂಗಳ ತುಟ್ಟಿಭತ್ಯೆಯನ್ನು ನೌಕರರಿಗೆ ನೀಡುವ ಬಗ್ಗೆ ಸರ್ಕಾರ ಪರಿಗಣನೆಗೆ ತೆಗೆದುಕೊಳ್ಳುತ್ತದೆಯೇ ಎನ್ನುವ ಪ್ರಶ್ನೆಗೆ ಸರ್ಕಾರ ಸದನದಲ್ಲಿಯೇ ಸ್ಪಷ್ಟವಾಗಿ ಇಲ್ಲ ಎಂದು ಹೇಳಿದೆ.   

6 /8

ಕರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಡೆಹಿಡಿಯಲಾಗಿದ್ದ ತುಟ್ಟಿಭತ್ಯೆ ಮೊತ್ತವನ್ನು ಬಿಡುಗಡೆ ಮಾಡುವುದು ಯಾಕೆ ಸಾಧ್ಯ ಇಲ್ಲ ಎನ್ನುವುದನ್ನು ಕೂಡಾ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ವಿವರವಾಗಿ ಹೇಳಿದ್ದಾರೆ. 

7 /8

ಅಂದರೆ ಬಾಕಿ ಇರುವ ಡಿಎ ಪಡೆಯುವುದು ಸಾಧ್ಯವೇ ಇಲ್ಲ ಎನ್ನುವುದು ಸ್ಪಷ್ಟ. ಸರ್ಕಾರದ   ನಿರ್ಧಾರ ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ನಿರಾಸೆ ತಂದಿದೆ.ಇದಕ್ಕಾಗಿ ನೌಕರರ ಸಂಘಗಳು ಬಹಳ ದಿನಗಳಿಂದ ಹೋರಾಟ ನಡೆಸುತ್ತಿರುವುದು ಗಮನಾರ್ಹ.

8 /8

ಸೂಚನೆ :ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದರಿಂದ ರಿಯಾಯಿತಿ ಹೆಚ್ಚಳದ ಗ್ಯಾರಂಟಿ ನೀಡಲಾಗುವುದಿಲ್ಲ.ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಪ್ರವೇಶಿಸಲು ಶಿಫಾರಸು ಮಾಡಲಾಗಿದೆ.