ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಗೆ ಮತ್ತೊಂದು ಸಂಕಷ್ಟ!

Varthur Santhosh: ಬಿಗ್‌ಬಾಸ್‌ ಸ್ಪರ್ಧಿ, ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್‌ಗೆ ಹುಲಿ ಉಗುರು ಪೆಂಡೆಂಟ್ ಬಳಿಕ ಮತ್ತೊಂದು ಸಂಕಷ್ಟ ಎದುರಾಗಿದ್ದು, ವರ್ತೂರು ಠಾಣೆಯಲ್ಲಿ ಎನ್​ಸಿಆರ್​ ದಾಖಲಾಗಿದ್ದು, ​ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಹಾಗಾದ್ರೆ ಏನಿದು ಪ್ರಕರಣ? 

1 /5

ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಬಿಗ್‌ಬಾಸ್‌ನಿಂದ ದೊಡ್ಡ ಖ್ಯಾತಿ ಗಳಿಸಿದರು.. ದೊಡ್ಮಣೆಯಲ್ಲಿದ್ದಾಗಲೇ ಇವರ ವಿರುದ್ಧ ಹುಲಿ ಉಗುರು ಪೆಂಡೆಂಟ್ ಬಳಕೆ ನಿಷೇಧ ಕೇಸ್‌ ದಾಖಲಾಗಿತ್ತು.. ಇದೀಗ ಇವರಿಗೆ ಮತ್ತೊಂದು ಸಂಕಷ್ಟ ಬಂದೊದಗಿದೆ..  

2 /5

ಹೌದು ವರ್ತೂರು ಸಂತೋಷ್ ಅವರಿಂದ  ಪ್ರಾಣಿಗಳ ಸಾಗಾಣಿಕೆ ನಿಯಮ ಉಲ್ಲಂಘನೆ..? ಮಾಡಲಾಗಿದೆ ಎಂದು ವರ್ತೂರು ಠಾಣೆಯಲ್ಲಿ ಎನ್​ಸಿಆರ್​ ದಾಖಲಾಗಿದ್ದು, ​ಸದ್ಯ ಒಂದು ಸುತ್ತಿನ ವಿಚಾರಣೆ ಎದುರಿಸಿದ್ದಾರೆ ಎನ್ನಲಾಗಿದೆ.. ಏನಿದು ನಿಯಮ ಉಲ್ಲಂಘಣೆ? ಅಂತೀರಾ ಇಲ್ಲಿದೆ ಉತ್ತರ   

3 /5

 ಹಳ್ಳಿಕಾರ್ ರೇಸ್ ಗೆ ವರ್ತೂರಿಂದ ಸಿದ್ಧತೆಯಾಗುತ್ತಿದೆ,, ಈ ವೇಳೆ ಹಳ್ಳಿಕಾರ್ ಹಸುಗಳ ಸಾಗಾಣಿಕೆ ವೇಳೆ ರೂಲ್ಸ್ ಬ್ರೇಕ್ ಮಾಡಲಾಗಿದೆ.. ಒಂದೇ ಟ್ರಕ್ ನಲ್ಲಿ ಬರೋಬ್ಬರಿ 9 ಹೋರಿಗಳ ಸಾಗಾಟ, ಜೊತೆಗೆ ಲಗೇಜ್ ನ್ನ ಕೂಡ ಇಟ್ಟು ಸಾಗಾಟ ಆರೋಪ ಕೇಳಿಬಂದಿದೆ..  

4 /5

ಇದು ಪ್ರಾಣಿ ಹಿಂಸೆ, ಪ್ರಾಣಿಗಳ ಸಾಗಾಟ ನಿಯಮ ಬ್ರೇಕ್ ಆಗಿದೆ ಎಂದು SPCA ANIMAL WELFARE OFFICER ಹರೀಶ್ ದೂರು ನೀಡಿದ್ದಾರೆ..  

5 /5

ಇನ್ನು ವರ್ತೂರು ಸಂತೋಷ್ ಈಗಾಗಲೇ ವಿಚಾರಣೆಗೆ ಹಾಜಾರಾಗಿ ಮಾಹಿತಿ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದ್ದು, ಎನ್​ಸಿಆರ್​ ಮಾಡಿ ಪ್ರಕರಣ ಮುಚ್ಚೋದು ಬೇಡ.. FIR ಮಾಡ್ಬೇಕೆಂದು ಕೋರ್ಟ್​​ ಮೆಟ್ಟಿಲೇರಲು ಹರೀಶ್ ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ.. ಈ ಸಂಬಂಧಪಟ್ಟಂತೆ ಒಂದು ವೇಳೆ ಎಫ್ ಐ ಆರ್ ದಾಖಲಾದ್ರೆ ವರ್ತೂರು ಸಂತೋಷ್ ಗೆ ಸಂಕಷ್ಟ ಫಿಕ್ಸ್.. ಎಂದು ಹೇಳಲಾಗುತ್ತಿದೆ.