Budh Vakri 2023: ಧನು ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ಸಂಕಷ್ಟ

Mercury Retrograde in Sagittarius: ಗ್ರಹಗಳ ರಾಜಕುಮಾರ ಬುಧ ಇನ್ನೂ ಕೆಲವೇ ದಿನಗಳಲ್ಲಿ ಧನು ರಾಶಿಯಲ್ಲಿ ತನ್ನ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲಾಗುತ್ತದೆ. ಮಾತ್ರವಲ್ಲ, ಬುಧನನ್ನು ಬುದ್ಧಿವಂತಿಕೆ, ಜ್ಞಾನ, ತರ್ಕ, ಸಂವಹನ ಕೌಶಲ್ಯಗಳ ಅಂಶ ಎಂತಲೂ ಹೇಳಲಾಗುತ್ತದೆ. 

2 /8

ಬುಧ ಸಂಚಾರ ಬದಲಾವಣೆ : ಬುಧನು ಡಿಸೆಂಬರ್ 13 ರಂದು ಮಧ್ಯಾಹ್ನ 12:01 ಕ್ಕೆ ಧನು ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಡಿಸೆಂಬರ್ 28 ರವರೆಗೂ ಇದೇ ಸ್ಥಿತಿಯಲ್ಲಿರುತ್ತಾನೆ. 

3 /8

ಬುಧ ವಕ್ರಿ ಪ್ರಭಾವ: ಬುಧನ ಈ ವಕ್ರ ನಡೆಯ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವು 4 ರಾಶಿಯವರಿಗೆ ತುಂಬಾ ಭಾರವಾಗಿರುತ್ತದೆ. 

4 /8

ಬುಧ ಹಿಮ್ಮುಖ ಚಲನೆಯ ಅಶುಭ ಪರಿಣಾಮ : ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಅಶುಭ ಪರಿಣಾಮಗಳನ್ನು ಬೀರುವ ಬುಧ ಸ್ನೇಹ ಸಂಬಂಧದಲ್ಲಿ ಮಾತ್ರವಲ್ಲದೆ ಉದ್ಯೋಗ ಕ್ಷೇತ್ರದಲ್ಲೂ ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ.  ಆ ರಾಶಿಗಳೆಂದರೆ... 

5 /8

ಮೇಷ ರಾಶಿ: ಬುಧನ ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ಸಂವಹನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ, ನೀವು ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಮಾತು, ಪದಗಳ ಆಯ್ಕೆ ಬಗ್ಗೆ ತುಂಬಾ ಜಾಗರೂಕಾರಾಗಿರಿ. 

6 /8

ಮಿಥುನ ರಾಶಿ: ವಕ್ರಿ ಬುಧನು ಮಿಥುನ ರಾಶಿಯವರ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಸೃಷ್ಟಿಸಲಿದ್ದಾನೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ವಿವಾದಗಳು ಅಥವಾ ತಪ್ಪುಗ್ರಹಿಕೆಗಳು ಹೆಚ್ಚಾಗಬಹುದು.   

7 /8

ಕರ್ಕಾಟಕ ರಾಶಿ: ಬುಧನ ಹಿಮ್ಮುಖ ನಡೆಯ ಅಶುಭ ಪರಿಣಾಮಗಳು ಕರ್ಕಾಟಕ ರಾಶಿಯವರ ಮೇಲೂ ಸಹ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಅನೇಕ ಏರಿಳಿತಗಳು ಇರಬಹುದು. ನಿಮ್ಮ ಒರಟು ಮಾತುಗಳಿಂದಾಗಿ ನೀವು ಕೆಲವು ವಿವಾದಗಳಲ್ಲಿ ಸಿಲುಕಿಕೊಳ್ಳಬಹುದು.  

8 /8

ಧನು ರಾಶಿ: ಸ್ವ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆಯಿಂದಾಗಿ ಧನು ರಾಶಿಯ ಜನರ ಖ್ಯಾತಿಗೆ ಧಕ್ಕೆ ಬರುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ನಿಮ್ಮ ಕೆಲಸದಲ್ಲಿ ಹಲವು ರೀತಿಯ ಅಡೆತಡೆಗಳು ಎದುರಾಗಬಹುದು. ಈ ಸಮಯದಲ್ಲಿ ಯಾವುದೇ ವೃತ್ತಿ ಸಂಬಂಧಿತ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.