BSNL ವ್ಯಾಪಾರಿಗಳು ಮತ್ತು DSAಗಳಿಗೂ ನೀಡುತ್ತಿದೆ ಲೈಫ್ ಟೈಂ ಕೊಡುಗೆ

BSNL ತನ್ನ ಗ್ರಾಹಕರು ಮಾತ್ರವಲ್ಲ, ಬಿಎಸ್ಎನ್ ಎಲ್ ಜೊತೆ ವ್ಯವಹಾರ ನಡೆಸುವವರಿಗೂ  ಉತ್ತಮ ಕೊಡುಗೆಗಳನ್ನು ನೀಡಲು ಆರಂಭಿಸಿದೆ.... 

BSNL : ಸರ್ಕಾರಿ ಟೆಲಿಕಾಂ ಕಂಪನಿ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಕೊಡುಗೆಗಳ ಮೇಲೆ ಕೊಡುಗೆಗಳನ್ನುನೀಡುತ್ತಲೇ ಬರುತ್ತಿದೆ. ಇದೀಗ ಕಂಪನಿಯು ಗ್ರಾಹಕರು ಮಾತ್ರವಲ್ಲ, ಬಿಎಸ್ಎನ್ ಎಲ್ ಜೊತೆ ವ್ಯವಹಾರ ನಡೆಸುವವರಿಗೂ  ಉತ್ತಮ ಕೊಡುಗೆಗಳನ್ನು ನೀಡಲು ಆರಂಭಿಸಿದೆ. . ಬಿಎಸ್ಎನ್ಎಲ್ ಚಿಲ್ಲರೆ ವ್ಯಾಪಾರಿಗಳು ಮತ್ತು ಡೈರೆಕ್ಟ್ ಸೆಲ್ಲಿಂಗ್ ಏಜೆಂಟ್ ಗಳನ್ನು (DSA) ಆಕರ್ಷಿಸುವ ಹೊಸ ಯೋಜನೆಯನ್ನು ತಂದಿದೆ. ಈ ಯೋಜನೆಯಿಂದ ಸಿಗುವ ಪ್ರಯೋಜನಗಳ ಬಗೆಗಿನ ಮಾಹಿತಿ ಇಲ್ಲಿದೆ..

1 /5

ಟೆಕ್ ಸೈಟ್ ಕೇರಳ ಟೆಲಿಕಾಂ  ಪ್ರಕಾರ, ಬಿಎಸ್ಎನ್ಎಲ್  (BSNL) ತನ್ನ ಚಿಲ್ಲರೆ ವ್ಯಾಪಾರಿಗಳು ಮತ್ತು ಡಿಎಸ್ಎಗಳ (DSA) ಪ್ರಿಪೇಯ್ಡ್ ಸಂಪರ್ಕಗಳಿಗೆ ಲೈಫ್ ಟೈಂ ವಾಲಿಡಿಟಿ ನೀಡಲು ನಿರ್ಧರಿಸಿದೆ.

2 /5

ಚಿಲ್ಲರೆ ವ್ಯಾಪಾರಿಗಳು ಮತ್ತು ಡಿಎಸ್ಎಗಳ ಸಿ-ಟಾಪ್ ಅಪ್ ಪ್ರಿಪೇಯ್ಡ್ ಸಂಪರ್ಕದ ಸಿಂಧುತ್ವವು ಜೀವಿತಾವಧಿವರೆಗೆ ಇರುತ್ತದೆ. ಅಂದರೆ ಇವರ ಬಳಿಯಿರುವ  ನಂಬರ್ ಅನ್ನು ಕಂಪನಿ  ಬೇರೆ ಯಾರಿಗೂ ನೀಡುವುದಿಲ್ಲ.   

3 /5

 ಚಿಲ್ಲರೆ ವ್ಯಾಪಾರಿಗಳು ಮತ್ತು ಡಿಎಸ್‌ಎಗಳ ನಂಬರಿಗೆ ಬಿಎಸ್ಎನ್ ಎಲ್  ಲೈಫ್ ಟೈಂ ವ್ಯಾಲಿಡಿಟಿ ನೀಡುತ್ತದೆ. ಆದರೆ ಫೋನಿನ ಸಂಪರ್ಕವನ್ನು ಬಳಸಲು 90ದಿನಗಳಲ್ಲಿ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ.

4 /5

ಚಿಲ್ಲರೆ ವ್ಯಾಪಾರಿಗಳು ಮತ್ತು ಡಿಎಸ್ಎಗಳು ಅಂದರೆ ಇವರ ಮೂಲಕ ಗ್ರಾಹಕರು ತಮ್ಮ ರೀಚಾರ್ಜ್ (Recharge) ಮಾಡಿಸಿಕೊಳ್ಳುತ್ತಾರೆ. ಅಲ್ಲದೆ ಬಿಎಸ್ಎನ್ ಎಲ್ ಗೆ ಸಂಬಂಧಿಸಿದ ಬಿಲ್ ಗಳನ್ನು ಇವರ ಮೂಲಕ ಪಾವತಿಸಬಹುದು.  ಚಿಲ್ಲರೆ ವ್ಯಾಪಾರಿಗಳು ಮತ್ತು ಡಿಎಸ್‌ಎಗಳು ಹೊಸ ಸಂಪರ್ಕಗಳನ್ನು ಸಹ ಮಾರಾಟ ಮಾಡಬಹುದು.

5 /5

ಈ ಯೋಜನೆ ಜನವರಿ 18ರಿಂದಲೇ ಜಾರಿಗೆ ಬಂದಿದೆ. BSNL ಜೊತೆ ವ್ಯಾಪಾರ ನಡೆಸುವ ವ್ಯಾಪಾರಿಗಳು ಮತ್ತು DSAಇದರ ಲಾಭವನ್ನು ಪಡೆಯಬಹುದಾಗಿದೆ.