PM Kisan : ರೈತರಿಗೆ 6,000 ಬದಲಿಗೆ 10,000 ರೂ. ! ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ

                         

PM Kisan : ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ. ಇದರ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸರ್ಕಾರ ರೈತರ ಮೇಲೆ ಸಂಪೂರ್ಣ ಗಮನ ಹರಿಸಿದೆ. 

1 /5

PM Kisan : ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021-22ರ ಹಣಕಾಸು ವರ್ಷದ ಬಜೆಟ್ ಮಂಡಿಸಲಿದ್ದಾರೆ. ಇದರ ಸಿದ್ಧತೆಗಳು ಅಂತಿಮ ಹಂತದಲ್ಲಿವೆ. ಈ ಬಾರಿ ಸರ್ಕಾರ ರೈತರ ಮೇಲೆ ಸಂಪೂರ್ಣ ಗಮನ ಹರಿಸಿದೆ. ಮೂರು ಕೃಷಿ ಕಾನೂನುಗಳಿಂದಾಗಿ (Farm Laws) ದೆಹಲಿಯ ಗಡಿಯಲ್ಲಿನ ರೈತ ಚಳವಳಿಯ ಮಧ್ಯೆ ಸರ್ಕಾರವು ಬಜೆಟ್‌ನಲ್ಲಿ (Budget 2021)  ರೈತರ ಹಿತದೃಷ್ಟಿಯಿಂದ ಹಲವಾರು ದೊಡ್ಡ ಘೋಷಣೆಗಳನ್ನು ಮಾಡಬಹುದು. ಇದರಲ್ಲಿ ಮುಖ್ಯವಾಗಿ ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ನೀಡುತ್ತಿರುವ ಆರ್ಥಿಕ ಸಹಾಯವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ.

2 /5

1. ಕಿಸಾನ್ ಸಮ್ಮನ್ ನಿಧಿ (Kisan Samman Nidhi) ಅಡಿಯಲ್ಲಿ ಕೇಂದ್ರ ಸರ್ಕಾರವು ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿಗಳ ಕಂತು ಹೆಚ್ಚಿಸಬಹುದು. ವಾಸ್ತವವಾಗಿ ವಾರ್ಷಿಕವಾಗಿ ರೈತರಿಗೆ ನೀಡುತ್ತಿರುವ ಈ ಸಹಾಯಧನವನ್ನು ಈ ಬಜೆಟ್‌ನಲ್ಲಿ ಹೆಚ್ಚಿಸಬೇಕು ಎಂದು ರೈತರು ಸರ್ಕಾರವನ್ನು ಒತ್ತಾಯಿಸಿದ್ದಾರೆ. 2019-20ರ ಹಣಕಾಸು ವರ್ಷದ ಬಜೆಟ್ ಅಂದಾಜು (BE) ಸುಮಾರು 1.51 ಲಕ್ಷ ಕೋಟಿ ರೂ. ಆಗಿದ್ದು, ಇದು ಮುಂದಿನ 2020-21ರ ಹಣಕಾಸು ವರ್ಷದಲ್ಲಿ ಸುಮಾರು 1.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2. ಇದಲ್ಲದೆ 2019-20ರಲ್ಲಿ ಸುಮಾರು 1.40 ಲಕ್ಷ ಕೋಟಿ ರೂ.ಗಳಿಗೆ ಹೋಲಿಸಿದರೆ 2020-21ರಲ್ಲಿ ಗ್ರಾಮೀಣಾಭಿವೃದ್ಧಿ ಹಂಚಿಕೆಯನ್ನು 1.44 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಪಿಎಂ ಕೃಷಿ ನೀರಾವರಿ ಯೋಜನೆಯಡಿ ಇದನ್ನು 2019-20ರಲ್ಲಿ 9682 ಕೋಟಿಯಿಂದ 2020-21ರಲ್ಲಿ 11,127 ಕೋಟಿ ರೂ.ಗೆ ಮತ್ತು ಪಿಎಂ ಬೆಳೆ ವಿಮಾ ಯೋಜನೆಯಡಿ 2019-20ರಲ್ಲಿ ಪಿಎಂ 14 ಸಾವಿರ ಕೋಟಿ ರೂ.ನಿಂದ ಹೆಚ್ಚಿಸಿ 2020-21ರಲ್ಲಿ 15,695 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

3 /5

ಕೃಷಿ ಕಾನೂನಿನ ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಮೆಚ್ಚಿಸುವ ಉದ್ದೇಶದಿಂದ ಮುಂಬರುವ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಪಿಎಂ ಕಿಸಾನ್ ಯೋಜನೆಯಲ್ಲಿ ನೀಡುತ್ತಿರುವ ಹಣವನ್ನು ಹೆಚ್ಚಿಸಲು ನಿರ್ಧಾರ ತೆಗೆದುಕೊಳ್ಳಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕಿಸಾನ್ ಸಮ್ಮನ್ ನಿಧಿಯ ಪ್ರಮಾಣವನ್ನು ಸರ್ಕಾರ 6 ಸಾವಿರದಿಂದ 10 ಸಾವಿರಕ್ಕೆ ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ - ಎಲ್ಲಾ ರೈತರಿಗೂ ಸಿಗಲ್ಲ PM Kisan ನಿಧಿಯ ಲಾಭ; ಕಾರಣ...!

4 /5

ಸರ್ಕಾರವು ರೈತರಿಗೆ ವರ್ಷಕ್ಕೆ 6,000 ರೂ. ನೀಡುತ್ತಿದೆ. ಅದನ್ನೂ ಮೂರು ಕಂತುಗಳಲ್ಲಿ 2000-2000 ರೂ. ನೀಡುತ್ತಿದೆ. ಅಂದರೆ, ಪಿಎಂ-ಕಿಸಾನ್ (PM Kisan) ಯೋಜನೆಯಡಿ ತಿಂಗಳಿಗೆ 500 ರೂಪಾಯಿಗಳು ಸಿಗುತ್ತವೆ, ಇದು ಸಾಕಷ್ಟು ಕಡಿಮೆ ಎಂದು ರೈತರು ಹೇಳುತ್ತಾರೆ. 1 ಬಿಗ್ಹಾದಲ್ಲಿ ಭತ್ತದ ಬೆಳೆ ತೆಗೆದುಕೊಳ್ಳಲು ಸುಮಾರು 3-3.5 ಸಾವಿರ ರೂ. ಮತ್ತು ಗೋಧಿ ಬೆಳೆ ತೆಗೆದುಕೊಳ್ಳಲು ಸುಮಾರು 2-2.5 ಸಾವಿರ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಭೂಮಿ ಹೊಂದಿರುವ ರೈತರಿಗೆ, ಆರು ಸಾವಿರ ರೂಪಾಯಿಗಳು ಬಹಳ ಕಡಿಮೆ ನೆರವು ನೀಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ವೆಚ್ಚವನ್ನು ಪೂರೈಸಲು ಮೊತ್ತವನ್ನು ಹೆಚ್ಚಿಸಬೇಕು ಎಂದು ಹಲವು ರೈತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ - PM Kisan: ಯಾವುದೇ ಕಾರಣದಿಂದ ರೈತರ ಖಾತೆಗೆ ರೂ.2000 ಬರದಿದ್ದರೆ ಚಿಂತೆ ಬಿಟ್ಟು ಈ ಕೆಲಸ ಮಾಡಿ..

5 /5

ಈ ಯೋಜನೆಯನ್ನು 1 ಡಿಸೆಂಬರ್ 2018 ರಂದು ಪ್ರಾರಂಭಿಸಲಾಯಿತು ಮತ್ತು ಇದರ ಅಡಿಯಲ್ಲಿ ಕೇಂದ್ರ ಸರ್ಕಾರವು ವರ್ಷಕ್ಕೆ ಮೂರು ಬಾರಿ ಎರಡು ಸಾವಿರ ರೂಪಾಯಿಗಳ ಕಂತಾಗಿ ರೈತರ ಖಾತೆಗೆ ವಾರ್ಷಿಕವಾಗಿ ಆರು ಸಾವಿರ ರೂಪಾಯಿಗಳನ್ನು ಕಳುಹಿಸುತ್ತದೆ. ಎಲ್ಲಾ ನೋಂದಾಯಿತ ರೈತರು ಈ ಯೋಜನೆಯ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯಡಿ, ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಅವಧಿಯಲ್ಲಿ ಹಣವನ್ನು ಖಾತೆಗೆ ಕಳುಹಿಸಲಾಗುತ್ತದೆ. ಪಿಎಂ-ಕಿಸಾನ್ ಸಮ್ಮನ್ ನಿಧಿ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ ಈ ಯೋಜನೆಯ 11.47 ಕೋಟಿ ಫಲಾನುಭವಿಗಳಿದ್ದಾರೆ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.