BSNL ನೀಡುತ್ತಿದೆ ಭರ್ಜರಿ Offer, ಈ ಗ್ರಾಹಕರಿಗೆ ಸಿಗಲಿದೆ ಎಲ್ಲಾ ಪ್ಲಾನ್ ಗಳಲ್ಲಿ ಶೇ. 10 ರಷ್ಟು ರಿಯಾಯಿತಿ

ಸರಕಾರಿ ವಲಯದ ದೂರಸಂಪರ್ಕ ಕಂಪನಿ ಬಿಎಸ್ ಎನ್ ಎಲ್ BSNL ಎಲ್ಲಾ ಗ್ರಾಹಕರನ್ನೂ ಸೆಳೆಯಲು ಮಾಸ್ಟರ್ ಪ್ಲಾನ್ ರೂಪಿಸಿದೆ. 

BSNL Special Offer Plans : ಸರಕಾರಿ ವಲಯದ ದೂರಸಂಪರ್ಕ ಕಂಪನಿ ಬಿಎಸ್ ಎನ್ ಎಲ್ BSNL ಎಲ್ಲಾ ಗ್ರಾಹಕರನ್ನೂ ಸೆಳೆಯಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಈ ಹಿನ್ನೆಲೆಯಲ್ಲಿಯೇ ಬಿಎಸ್ ಎನ್ ಎಲ್ ತನ್ನ  ಗ್ರಾಹಕರಿಗೆ ವಿಶೇಷ ಸ್ಕೀಮ್ ತಂದಿದೆ.  ಈ ಸ್ಕೀಮ್ ಅನ್ವಯ  ಎಲ್ಲಾ ಲ್ಯಾಂಡ್ ಲೈನ್,  ಪೋಸ್ಟ್ ಪೇಡ್, ಪ್ರೀಪೇಡ್ ಮತ್ತು ಬ್ರಾಡ್ ಬ್ಯಾಂಡ್ ಸಂಪರ್ಕಗಳಲ್ಲಿ ಶೇ. 10 ರಷ್ಟು ಡಿಸ್ಕೌಂಟ್ ಸಿಗಲಿದೆ. 

1 /5

ಟೆಕ್ ಸೈಟ್ keralatelecom ಪ್ರಕಾರ ಬಿಎಸ್ ಎನ್ ಎಲ್  ಸರ್ಕಾರಿ ನೌಕರರಿಗಾಗಿಯೇ ಬಹುಬೇಗ ಹೊಸ ಸ್ಕೀಮ್  ಘೋಷಣೆ ಮಾಡಲಿದೆ.  ಸರ್ಕಾರಿ ನೌಕರರಿಗೆ ಬಿಎಸ್ಎನ್ ಎಲ್ ನ (BSNL) ಎಲ್ಲಾ ಸೇವೆಗಳಲ್ಲಿ ಡಿಸ್ಕೌಂಟ್ ಸಿಗಲಿದೆ.   

2 /5

ಲಭ್ಯ ಮಾಹಿತಿ ಪ್ರಕಾರ ಬಿಎಸ್ ಎನ್ ಎಲ್ ಎಲ್ಲಾ ಸರ್ಕಾರಿ ನೌಕರರಿಗೆ ಲ್ಯಾಂಡ್ ಲೈನ್, ಬ್ರಾಂಡ್ ಬ್ಯಾಂಡ್ ಮತ್ತು ಫೈಬರ್ ಲೈನ್ ಗಳಲ್ಲಿ ರಿಯಾಯಿತಿ ನೀಡಲಿದೆ.   

3 /5

ಈ ಸ್ಕೀಮ್ ಲಾಭ ಕೇವಲ ಹಾಲಿ ನೌಕರರಿಗೆಅಷ್ಟೇ ಅಲ್ಲ, ನಿವೃತ್ತರಾದವರಿಗೂ ಇದರ ಲಾಭ ಸಿಗಲಿದೆ ಎಂದು ಬಿಎಸ್ ಎನ್  ಎಲ್ ಹೇಳಿದೆ.   

4 /5

ಬರುವ ಫೆಬ್ರವರಿ 1 ರಂದು ಬಿಎಸ್ ಎನ್ ಎಲ್ ತನ್ನ ಹೊಸ ಆಫರ್ ಬಿಡುಗಡೆ ಮಾಡಲಿದೆ ಎಂದು ಹೇಳಲಾಗಿದೆ. 

5 /5

ನಿಮಗೆ ಗೊತ್ತಿರಲಿ, ಬಿಎಸ್ ಎನ್ ಎಲ್ ಈಗಲೂ ಕೂಡಾ ಸರ್ಕಾರಿ ನೌಕರರಿಗೆ ಲ್ಯಾಂಡ್ ಲೈನ್, ಮೊಬೈಲ್ ಮತ್ತು ಬ್ರಾಂಡ್ ಬ್ಯಾಂಡ್ ಸೇವೆಯಲ್ಲಿ ಶೇ. 5 ರಷ್ಟು ರಿಯಾಯಿತಿ ನೀಡುತ್ತಿದೆ.