ಬೀದಿಯಲ್ಲಿ ಬಿಟ್ಟು ಹೋದ ಮಗು ಸಾಕಲು ಮುಂದಾಗಿದ್ರಂತೆ ಪ್ರಿಯಾಂಕಾ ಚೋಪ್ರಾ!

Priyanka Chopra: ಪ್ರಿಯಾಂಕಾ ಚೋಪ್ರಾ ಒಮ್ಮೆ ಬೀದಿಯಲ್ಲಿ ಬಿಟ್ಟು ಹೋದ ಹೆಣ್ಣು ಮಗುವನ್ನು ಸಾಕಲು ಬಯಸಿದ್ದರಂತೆ. ಆದರೆ ಅವರ ತಾಯಿ ಡಾ.ಮಧು ಚೋಪ್ರಾ ಇದಕ್ಕೆ ಅಡ್ಡಿಪಡಿಸಿದರಂತೆ. 

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಈ ವರ್ಷದ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಮೊದಲ ಮಗುವನ್ನು ಪಡೆದುಕೊಂಡರು. ಹೆಣ್ಣು ಮಗುವಿನ ತಂದೆ-ತಾಯುಯಾದ ಸಂತೋಷವನ್ನು ಇಬ್ಬರೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 

1 /5

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಈ ವರ್ಷದ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ತಮ್ಮ ಮೊದಲ ಮಗುವನ್ನು ಪಡೆದುಕೊಂಡರು. ಹೆಣ್ಣು ಮಗುವಿನ ತಂದೆ-ತಾಯುಯಾದ ಸಂತೋಷವನ್ನು ಇಬ್ಬರೂ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. 

2 /5

ಪ್ರಿಯಾಂಕಾ ಚೋಪ್ರಾಗೆ ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ. ಇದೇ ಕಾರಣಕ್ಕಾಗಿ ಅವರೊಮ್ಮೆ ಬೀದಿಯಲ್ಲಿ ಬಿಟ್ಟು ಹೋದ ಮಗು ಸಾಕಲು ಮುಂದಾಗಿದ್ದರಂತೆ. ತನ್ನ ಆತ್ಮಚರಿತ್ರೆ ‘ಅನ್‌ಫಿನಿಶ್ಡ್’ನಲ್ಲಿ ಈ ಘಟನೆಯನ್ನು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. ತಾವು ದಾರಿಯಲ್ಲಿ ಸಿಕ್ಕಿದ್ದ ಹೆಣ್ಣು ಮಗುವೊಂದನ್ನು ಸಾಕಲು ಆಸೆ ಪಟ್ಟಾಗ ಅದಕ್ಕೆ ತಮ್ಮ ತಾಯಿ ವಿರೋಧಿಸಿದ್ದರು ಎಂದು ಪ್ರಿಯಾಂಕಾ ಹೇಳಿದ್ದಾರೆ. 

3 /5

ಪ್ರಿಯಾಂಕಾ ಚೋಪ್ರಾ ಅವರ ಕಿರಿಯ ಸಹೋದರ ಹುಟ್ಟಿದಾಗ, ಮನೆಗೆ ಅವರ ಅಜ್ಜಿ ಭೇಟಿ ಕೊಟ್ಟಿದ್ದರಂತೆ. ಆ ರಾತ್ರಿ ಅವರ ಮನೆಯಲ್ಲಿ ಗದ್ದಲ, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ರಸ್ತೆಯಲ್ಲಿ ಯಾರೋ ಬಿಟ್ಟು ಹೋಗಿದ್ದ ಮಗುವನ್ನು ಸಮಾಧಾನ ಪಡಿಸಲು ಪ್ರಿಯಾಂಕಾ ಚೋಪ್ರಾ ಅವರ ತಾಯಿ ಒದ್ದಾಡುತ್ತಿದ್ದರು. ಹೆರಿಗೆಯ ನಂತರ, ಆಸ್ಪತ್ರೆಯ ಹೊರಗೆ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ ಮಗು ಅಳುವ ಶಬ್ದ ಕೇಳಿದೆ ಎಂದು ಅಮ್ಮ ಹೇಳಿದರು. ಧಾರಾಕಾರವಾಗಿ ಮಳೆ ಸುರಿಯುವಾಗ ಯಾರೋ ನವಜಾತ ಹೆಣ್ಣು ಮಗುವನ್ನು ವಾಹನದ ಕೆಳಗೆ ಬಿಟ್ಟು ಹೋಗಿದ್ದರು. ಆ ರಾತ್ರಿ, ನಾವು ಮಗುವನ್ನು ಇಟ್ಟುಕೊಳ್ಳೋಣ ಎಂದು ತುಂಬಾ ಹಠ ಮಾಡಿದೆ. ಆದರೆ ಅಮ್ಮ ಅದು ಸಾಧ್ಯವಿಲ್ಲ ಎಂದರು. ಮಕ್ಕಳಿಲ್ಲದ ದಂಪತಿಗೆ ಮಗುವನ್ನು ಹಸ್ತಾಂತರಿಸಲು ತಾಯಿ ನಿರ್ಧರಿಸಿದ್ದಾರೆ ಎಂದು ಪ್ರಿಯಾಂಕಾ ತಮ್ಮ ಆತ್ಮಚರಿತ್ರೆಯಲ್ಲಿ ಹಂಚಿಕೊಂಡಿದ್ದಾರೆ. 

4 /5

ಹಾಲಿವುಡ್‌ನಲ್ಲೂ ಗುರುತಿಸಿಕೊಂಡಿರುವ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಸರೋಗಸಿ ಮೂಲಕ ಬರಮಾಡಿಕೊಂಡಿರುವ ತಮ್ಮ ಮಗುವಿನ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಮಕ್ಕಳಿಲ್ಲದ ದಂಪತಿಗೆ ಮಗುವನ್ನ ಕೊಡಲು ಹೋಗುವಾಗ ತಮ್ಮ ತೋಳಲ್ಲಿ ಮಗುವನ್ನ ಪ್ರಿಯಾಂಕಾ ಚೋಪ್ರಾ ಹಿಡಿದುಕೊಂಡಿದ್ದರಂತೆ. ಆ ಸಮಯದಲ್ಲಿ ಮಗು ಸ್ವೀಕರಿಸಿದ ದಂಪತಿ ಪಟ್ಟ ಸಂತಸವನ್ನು ನಾನು ಮರೆಯಲು ಸಾಧ್ಯವೇ ಇಲ್ಲ ಎಂದು ಪ್ರಿಯಾಂಕಾ ಹೇಳಿಕೊಂಡಿದ್ದಾರೆ. 

5 /5

ಬಾಡಿಗೆ ತಾಯ್ತನದ ಮೂಲಕ ಮಗು ಪಡೆದ ಮಗುವಿನ ಬಳಿಕ ಸಿನಿಮಾರಂಗದಿಂದ ಪ್ರಿಯಾಂಕಾ ಚೋಪ್ರಾ ಬ್ರೇಕ್ ಪಡೆಯಲಿದ್ದಾರೆ. ಸರೋಗಸಿ ಮೂಲಕ ಮಗು ಏಪ್ರಿಲ್ ತಿಂಗಳಿನಲ್ಲಿ ಜನಿಸಬೇಕಿತ್ತು. ಏಪ್ರಿಲ್‌ನಲ್ಲಿ ಮಗು ಜನಿಸಲಿದೆ ಎಂದು ವೈದ್ಯರು ಹೇಳಿದ್ದರು. ಆದರೆ, ಏಳು ತಿಂಗಳಿಗೇ ಮಗು ಜನಿಸಿತು. ಸರೋಗಸಿ ಮೂಲಕ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಹೆಣ್ಣು ಮಗುವನ್ನು ಪಡೆದಿದ್ದಾರೆ. 12 ವಾರಗಳು ಮುಂಚಿತವಾಗಿ ಹೆಣ್ಣು ಮಗು ಬಾಡಿಗೆ ತಾಯಿಯ ಮೂಲಕ ಜನಿಸಿದೆ. 27 ವಾರಗಳಿಗೇ ಹೆಣ್ಣು ಮಗು ಹುಟ್ಟಿದೆ ಎಂದು ಡೇಲ್ ಮೇಲ್ ವರದಿ ಮಾಡಿತ್ತು.