PhotoViral : ಜಾಕ್ವೆಲಿನ್ ಫರ್ನಾಂಡೀಸ್ ಅದ್ಭುತ ನೃತ್ಯಾಭ್ಯಾಸಕ್ಕೆ ಅಭಿಮಾನಿಗಳ ಶ್ಲಾಘನೆ

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ನೃತ್ಯ ಪೂರ್ವಾಭ್ಯಾಸದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
 

ಬೆಂಗಳೂರು : ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಯಾವಾಗಲೂ ತಮ್ಮ ಹೇಳಿಕೆಯಿಂದ ಗಮನ ಸೆಳೆಯುತ್ತಾರೆ. ಆದರೆ ಈಗ ಇವರ ನೃತ್ಯ ಪೂರ್ವಾಭ್ಯಾಸದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ. ಈ ಫೋಟೋಗಳನ್ನು ನೋಡಿ ಜಾಕ್ವೆಲಿನ್ ಗೆ ಅಭಿಮಾನಿಗಳಿಂದ ಶ್ಲಾಘನೆ ವ್ಯಕ್ತವಾಗಿದೆ. ಈ ಫೊಟೋಗಳನ್ನು ಜಾಕ್ವೆಲಿನ್ ಹಂಚಿಕೊಂಡ  ಕೇವಲ ಒಂದು ಗಂಟೆಯಲ್ಲಿ 11ಲಕ್ಷಕ್ಕೂ ಹೆಚ್ಚು ಲೈಕ್ ಗಳು ಬಂದಿವೆ. ಎಲ್ಲಾ ಫೋಟೋ ಕೃಪೆ: Instagram@JacquelineFernandez
 

1 /5

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಇತ್ತೀಚಿನ  ದಿನಗಳಲ್ಲಿ ಬ್ಯಾಲೆ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ. ನಟಿಯ ಶ್ರಮಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

2 /5

 ಈ  ಎಲ್ಲಾ ಫೋಟೋಗಳನ್ನು ಸ್ವತಃ ಜಾಕ್ವೆಲಿನ್  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಾನು ಪೋಟೋ ಶೇರ್ ಮಾಡಿಕೊಂಡ ಒಂದೇ ಗಂಟೆಯಲ್ಲಿ ಈ ಫೋಟೋಗಳು 11 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು  ಪಡೆದಿವೆ.    

3 /5

ಇದರೊಂದಿಗೆ, ಇದೀಗ ಕ್ವೀನ್ ಗಳ ಸಮಯ @ sherox.life ಶೀಘ್ರವೇ ಬರಲಿದೆ ಎಂಬ ಶೀರ್ಷಿಕೆ ಬರೆದಿದ್ದಾರೆ. 

4 /5

ಮತ್ತೊಂದು ಫೋಟೋದಲ್ಲಿ  'ನಾವು ಒಟ್ಟಿಗೆ ಎತ್ತರಕ್ಕೆ ಏರುತ್ತೇವೆ .. @ sherox.life ಶೀಘ್ರದಲ್ಲೇ ಬರಲಿದೆ!' ಎಂದು ಬರೆದುಕೊಂಡಿದ್ದಾರೆ.  

5 /5

ಈ ಚಿತ್ರಗಳಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ಬಹಳ ಸುಂದರವಾಗಿ ಕಾಣುತ್ತಾರೆ. ಶೀಘ್ರದಲ್ಲೇ ಅವರು ನರ್ತಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ವರು ಫೋಟೋಗೆನೀಡಿದ ಶೀರ್ಷಿಕೆಗಳೇ ಹೇಳುತ್ತವೆ..  ಎಲ್ಲಾ ಫೋಟೋ ಕೃಪೆ: Instagram@JacquelineFernandez