BMW Electric Scooter: ಎಲ್ಲರ ಕಣ್ಮನ ಸೆಳೆಯುವ BMW ಎಲೆಕ್ಟ್ರಿಕ್ ಸ್ಕೂಟರ್‌ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

                     

BMW Electric Scooter: ಜರ್ಮನಿಯ ವಾಹನ ತಯಾರಕ ಬಿಎಂಡಬ್ಲ್ಯು ಮೋಟರ್ರಾಡ್ (BMW Motorrad) ಇಂದು ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಹೆಸರು ಬಿಎಂಡಬ್ಲ್ಯು ಸಿಇ -04 (BMW CE-04). ಈ ಸ್ಕೂಟರ್‌ನೊಂದಿಗೆ ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವನ್ನು ಪ್ರವೇಶಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಿಎಂಡಬ್ಲ್ಯು ಸಿಇ -04 ಸ್ಕೂಟರ್ ಮೇಲೆ ಬಹಳ ದೀರ್ಘ ಸಮಯದಿಂದ ಕಾರ್ಯ ನಿರ್ವಹಿಸುತ್ತಿತ್ತು. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೊದಲ ಬಾರಿಗೆ 2017 ರಲ್ಲಿ ಬಿಎಂಡಬ್ಲ್ಯು ಮೋಟರ್ರಾಡ್ ಕಾನ್ಸೆಪ್ಟ್ ಲಿಂಕ್‌ನಲ್ಲಿ ಪ್ರದರ್ಶಿಸಲಾಯಿತು. 2020 ರಲ್ಲಿ, ಅದರ ಹತ್ತಿರದ ಉತ್ಪಾದನಾ ಮಾದರಿಯನ್ನು ಬಿಎಂಡಬ್ಲ್ಯು ಮೋಟರ್ರಾಡ್ ಡೆಫಿನಿಷನ್ ಸಿಇ 04 (BMW Motorrad Definition CE 04) ಎಂದು ತೋರಿಸಲಾಯಿತು. ಅದರ ಅದ್ಭುತ ವಿನ್ಯಾಸದಿಂದಾಗಿ ಇದು ಬೆಳಕಿಗೆ ಬಂದಿತು.

2 /5

ಬಿಎಂಡಬ್ಲ್ಯು ಸಿಇ 04 (BMW CE 04) 10.25 ಇಂಚಿನ ಬಣ್ಣದ ಟಿಎಫ್‌ಟಿ ಡಿಸ್ಪ್ಲೇ ಅನ್ನು ಹೊಂದಿದೆ. ಇದರಲ್ಲಿ ಸಮಗ್ರ ನಕ್ಷೆ ಸಂಚರಣೆ ಮತ್ತು ಸ್ಮಾರ್ಟ್‌ಫೋನ್ (Smartphone) ಸಂಪರ್ಕದಂತಹ ವೈಶಿಷ್ಟ್ಯಗಳು ಲಭ್ಯವಿದೆ. ನೀವು ಟ್ರ್ಯಾಕ್ಶನ್ ಕಂಟ್ರೋಲ್ ಸಿಸ್ಟಂ, ತೀನ್ ರೈಡಿಂಗ್ ಮೊಡ್ಸ್ , ಪರಿಸರ (Eco), ರಸ್ತೆ ಮತ್ತು ಮಳೆ ಸಹ ಪಡೆಯುತ್ತೀರಿ, ಇದು ಸವಾರಿ ಅನುಭವವನ್ನು ಅತ್ಯುತ್ತಮವಾಗಿಸುತ್ತದೆ. ಈ ಐಷಾರಾಮಿ ಸ್ಕೂಟರ್‌ನ ವೈಶಿಷ್ಟ್ಯಗಳೊಂದಿಗೆ ಇದರ ಬೆಲೆ 2.25 ಲಕ್ಷ ರೂ.ಗಳಿಂದ ಪ್ರಾರಂಭವಾಗಬಹುದು ಎಂದು ನಂಬಲಾಗಿದೆ.

3 /5

ಬಿಎಂಡಬ್ಲ್ಯು ಸಿಇ 04 (BMW CE 04) 8.9 ಕಿಲೋವ್ಯಾಟ್ ಬ್ಯಾಟರಿ ಮತ್ತು ಎಲೆಕ್ಟ್ರಿಕ್ ಮೋಟರ್ ಪಡೆಯುತ್ತದೆ. ಇದು ಸಾಮಾನ್ಯ ಪರಿಸ್ಥಿತಿಗಳಲ್ಲಿ 20 ಬಿಹೆಚ್‌ಪಿ ಉತ್ಪಾದನೆಯನ್ನು ನೀಡುತ್ತದೆ, ಆದರೆ ಗರಿಷ್ಠ 41.5 ಬಿಹೆಚ್‌ಪಿ ವರೆಗೆ ಹೋಗಬಹುದು. ಎಲೆಕ್ಟ್ರಿಕ್ ಸ್ಕೂಟರ್ ಸಿಇ 04 (CE 04) 2.6 ಸೆಕೆಂಡುಗಳಲ್ಲಿ ಗಂಟೆಗೆ 50 ಕಿ.ಮೀ ವೇಗವನ್ನು ತಲುಪುತ್ತದೆ. ಇದರ ಉನ್ನತ ವೇಗ ಗಂಟೆಗೆ 120 ಕಿಲೋಮೀಟರ್ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ- ನಿಮ್ಮ ಬಜೆಟ್‌ನಲ್ಲಿ ಸಿಗಲಿದೆ 200 km ಮೈಲೇಜ್ ನೀಡುವ ಈ ಸ್ಕೂಟರ್

4 /5

ಅದರ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಪೂರ್ಣ ಚಾರ್ಜ್ ನಂತರ, ಇದು 130 ಕಿ.ಮೀ ವರೆಗೆ ಪ್ರಯಾಣಿಸಬಹುದು. ಚಾರ್ಜ್ ಮಾಡಲು ಪ್ರಮಾಣಿತ 2.3 ಕಿ.ವ್ಯಾಟ್ ಚಾರ್ಜರ್ ಅನ್ನು ಬಳಸಲಾಗುತ್ತದೆ. 6.9 ಕಿ.ವ್ಯಾ ವೇಗದ ಚಾರ್ಜರ್ ಬಳಸಿ, ಬ್ಯಾಟರಿಯನ್ನು 1 ಗಂಟೆ 40 ನಿಮಿಷಗಳಲ್ಲಿ ಶೂನ್ಯದಿಂದ ಪೂರ್ಣವಾಗಿ ಚಾರ್ಜ್ ಮಾಡಬಹುದು, ಆದರೆ 45 ನಿಮಿಷಗಳಲ್ಲಿ 20 ಪ್ರತಿಶತದಿಂದ 80 ಪ್ರತಿಶತದವರೆಗೆ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎನ್ನಲಾಗಿದೆ. ಇದನ್ನೂ ಓದಿ- ಪೆಟ್ರೋಲ್ ದರ ಏರಿಕೆ ನಡುವೆ ನಿಮ್ಮ ಟೆನ್ಶನ್ ಕಡಿಮೆ ಮಾಡಲಿರುವ 5 ಅಗ್ಗದ Electric Scooters

5 /5

ಬಿಎಂಡಬ್ಲ್ಯು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ (BMW Electric Scooter) ಸಸ್ಪೆನ್ಶನ್ ಡ್ಯೂಟಿ ಅನ್ನು 35 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಸ್ವಿಂಗಾರ್ಮ್‌ನೊಂದಿಗೆ ಮೊನೊಶಾಕ್ ಒದಗಿಸುತ್ತದೆ, ಆದರೆ ಬ್ರೇಕಿಂಗ್ ಹಾರ್ಡ್‌ವೇರ್ ಎಬಿಎಸ್ನೊಂದಿಗೆ ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್ ಮತ್ತು ಟ್ವಿನ್ ಫ್ರಂಟ್ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಆದಾಗ್ಯೂ, ಕಂಪನಿಯು ಬಿಎಂಡಬ್ಲ್ಯು ಎಬಿಎಸ್ ಪ್ರೊ (ಐಚ್ಛಿಕ ಸಾಧನವಾಗಿ) ಸಹ ನೀಡುತ್ತದೆ. ಇದು ತಿರುವುಗಳಲ್ಲಿ ಬ್ರೇಕಿಂಗ್ ಅನ್ನು ನಿಯಂತ್ರಿಸಲು ಸಂವೇದಕಗಳನ್ನು ಬಳಸುತ್ತದೆ.