PHOTOS: ಸೋಷಿಯಲ್ ಮೀಡಿಯಾದಲ್ಲಿ ಕರೋನಾಗೆ ಸಂಬಂಧಿಸಿದ ಈ 7 ಸುಳ್ಳು ಚಿತ್ರಗಳ ಬಗ್ಗೆ ಎಚ್ಚರ

ಕರೋನಾ ವೈರಸ್‌ಗೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ವೈರಲ್‌ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ.

  • Mar 26, 2020, 12:37 PM IST

ನವದೆಹಲಿ: ಒಂದು ಕಡೆ, ಕರೋನವೈರಸ್ (Coronavirus) ತಡೆಯಲು ಭಾರತದ ಜನರು ಹೋರಾಡುತ್ತಿದ್ದಾರೆ.  ಲಾಕ್‌ಡೌನ್(LOCKDOWN)  ನಂತರ, ಕರೋನಾ ವೈರಸ್‌ಗೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ವೈರಲ್ ಆಗುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ವದಂತಿ ಹರಡುತ್ತಿವೆ. ವೈರಲ್ ಆಗುತ್ತಿರುವ ಈ ಚಿತ್ರಗಳ ಸತ್ಯವೇನು ಎಂದು ನೋಡಿ.

1 /7

ಸುದ್ದಿ-  ಕೋವಿಡ್ -19ರ ಔಷಧಿ ಕಂಡುಬಂದಿದೆ. ಸತ್ಯ - ಇದು ಕರೋನದ ಔಷಧವಲ್ಲ, ಇದು ಪರೀಕ್ಷಾ ಕಿಟ್ ಆಗಿದೆ.

2 /7

ಸುದ್ದಿ- 134 ಕರೋನಾ ಸಂತ್ರಸ್ತರಿಗೆ ಚಿಕಿತ್ಸೆ ನೀಡಿದ ನಂತರ ಸೋಂಕಿಗೆ ಬಲಿಯಾದ ವೈದ್ಯ ದಂಪತಿಗಳು. ಸತ್ಯ - ಈ ಚಿತ್ರವು ಯಾವುದೇ ವೈದ್ಯ ದಂಪತಿಗಳದಲ್ಲ. ಈ ಫೋಟೋ ವಿಮಾನ ನಿಲ್ದಾಣವೊಂದರಲ್ಲಿ ತೆಗೆಯಲಾದ ದಂಪತಿಗಳದ್ದು.

3 /7

ಸುದ್ದಿ- ಇಟಲಿಯಲ್ಲಿ, ಕರೋನಾ ವೈರಸ್ ಕಾಯಿಲೆಯಿಂದ ಮೃತಪಟ್ಟ ಜನರ ಶವಗಳು ಬೀದಿಗಳಲ್ಲಿ ಬಿದ್ದಿವೆ. ಕರೋನಾ ಸೋಂಕಿನ ಭಯವನ್ನು ತಪ್ಪಿಸಲು ಕುಟುಂಬ ಸದಸ್ಯರು ಕೊನೆಯ ವಿಧಿಗಳನ್ನು ಮಾಡುತ್ತಿಲ್ಲ. ಸತ್ಯ - ಈ ಫೋಟೋ 2011 ರಲ್ಲಿ ಬಿಡುಗಡೆಯಾದ ಕಾಂಟ್ಯಾಜನ್ ಎಂಬ ಇಂಗ್ಲಿಷ್ ಚಲನಚಿತ್ರದ ದೃಶ್ಯವಾಗಿದೆ.

4 /7

ಸುದ್ದಿ - ರಷ್ಯಾದ ಅಧ್ಯಕ್ಷ ಪುಟಿನ್ ದೇಶದಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು, ಮನೆಯಿಂದ ಯಾರೂ ಹೊರಬರದಂತೆ ಮಾಡಲು 500 ಸಿಂಹಗಳನ್ನು ಬೀದಿಗೆ ಬಿಡಲಾಗಿದೆ. ಸತ್ಯ - ಈ ಫೋಟೋ ಸಿನಿಮಾವೊಂದರ ದೃಶ್ಯ.

5 /7

ಸುದ್ದಿ - ವೈದ್ಯ ರಮೇಶ್ ಗುಪ್ತಾ ಅವರ ಪುಸ್ತಕ ಪ್ರಾಣಿ ವಿಜ್ಞಾನದಲ್ಲಿ ಕರೋನದ ಚಿಕಿತ್ಸೆ ಇದೆ. ಸತ್ಯ - ಇದು ಸುಳ್ಳು ಸುದ್ದಿ.

6 /7

ಸುದ್ದಿ - ಕರೋನಾ ವೈರಸ್‌ನ ಕಷ್ಟದ ಸಮಯವನ್ನು ಗಮನದಲ್ಲಿಟ್ಟುಕೊಂಡು, ಜಿಯೋ ಕಂಪನಿಯು ತನ್ನ ಬಳಕೆದಾರರಿಗೆ 498 / - ರೂಗಳ ಉಚಿತ ರೀಚಾರ್ಜ್ ನೀಡುತ್ತಿದೆ. ಸತ್ಯ - ಜಿಯೋ ಕಂಪನಿ ಅಂತಹ ಯಾವುದೇ ಆಫರ್ ಸಾಧಿಸಿಲ್ಲ.

7 /7

ಸುದ್ದಿ - ಇಟಲಿಯಲ್ಲಿ, ಕರೋನಾದಿಂದ ಮೃತಪಟ್ಟವರ ಶವವನ್ನು ಅನೇಕ ಶವಪೆಟ್ಟಿಗೆಯಲ್ಲಿ ಇಡಲಾಗಿದೆ. ಅವರನ್ನು ತೆಗೆದುಕೊಳ್ಳಲು ಕುಟುಂಬ ಸದಸ್ಯರು ಬರುತ್ತಿಲ್ಲ. ಸತ್ಯ - ಈ ಫೋಟೋ 7 ವರ್ಷ ಹಳೆಯ ಅಪಘಾತದ ಚಿತ್ರವಾಗಿದೆ, ಇದಕ್ಕೂ ಕರೋನಾಗೆ ಯಾವುದೇ ಸಂಬಂಧವಿಲ್ಲ.