ಟೆಲಿಕಾಂ ಕಂಪನಿಗಳ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವುದು ತಿಳಿಯಿರಿ..!

ಏರ್‌ಟೆಲ್, ವಿ, ಜಿಯೋ ಮತ್ತು ಬಿಎಸ್‌ಎನ್‌ಎಲ್‌ನ ಅತ್ಯುತ್ತಮ ರೀಚಾರ್ಜ್ ಯೋಜನೆಗಳಲ್ಲಿ ಪ್ರತಿದಿನ ಪಡೆಯಿರಿ  2 ಜಿಬಿ ಡೇಟಾ..
 

ನವದೆಹಲಿ : ಈ ದಿನಗಳಲ್ಲಿ ಮೊಬೈಲ್‌ನಲ್ಲಿ ಇಂಟರ್ ನೆಟ್ ಬಳಕೆ ಹೆಚ್ಚಾಗಿದೆ. ಜನರು ಇಂಟರ್ ನೆಟ್  ಅನ್ನು ಚಾಟಿಂಗ್ ಅಥವಾ ಬ್ರೌಸರ್‌ಗಳಿಗೆ ಮಾತ್ರವಲ್ಲ, ಮನರಂಜನೆಗಾಗಿಯೂ ಬಳಸುತ್ತಿದ್ದಾರೆ. ಹಾಗಾಗಿ ಏರ್ಟೆಲ್, Vi, BSNL ಮತ್ತು ಜಿಯೋಗಳ ಅತ್ಯುತ್ತಮ ಪ್ರಿಪೇಯ್ಡ್ ರೀಚಾರ್ಜ್ (Prepaid) ಯೋಜನೆಗಳ ನಾವು ಮಾಹಿತಿ ನೀಡುತ್ತೇವೆ.  ಪ್ಲಾನ್ ಗಳಲ್ಲಿ ಪ್ರತಿದಿನ 2 ಜಿಬಿ ಡೇಟಾವನ್ನು ಪಡೆಯಬಹುದು. ಅಲ್ಲದೆ, ಇನ್ನೂ ಅನೇಕ ವೈಶಿಷ್ಟ್ಯಗಳಿವೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಟೆಲಿಕಾಂ ಕಂಪನಿ ಏರ್‌ಟೆಲ್ (Airtel) ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ 499 ರೂ.ಗಳ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ, ಬಳಕೆದಾರರಿಗೆ ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಯೋಜನೆಯಲ್ಲಿ, ಬಳಕೆದಾರರು Amazon Priceನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.  ಅನಿಯಮಿತ ಕರೆಗಳು ಮತ್ತು 100 ಎಸ್‌ಎಂಎಸ್‌ಗಳ ಹೊರತಾಗಿ, Airtel Xstream Premium ಉಚಿತ ಚಂದಾದಾರಿಕೆಯನ್ನು ಸಹ ಯೋಜನೆಯಲ್ಲಿ ನೀಡಲಾಗುತ್ತಿದೆ.  

2 /4

Vodafone- Idea (Vi) ಯ ಅಧಿಕೃತ ವೆಬ್‌ಸೈಟ್ ಪ್ರಕಾರ, 595 ರೂಗಳಿಗೆ ಉತ್ತಮ ಪ್ಲಾನ್ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, ನೀವು ಪ್ರತಿದಿನ 2 ಜಿಬಿ ಡೇಟಾವನ್ನು ಸಿಗಲಿದೆ.  ಇನ್ನೂ ಉತ್ತಮ ವಿಚಾರವೆಂದರೆ, ಮನರಂಜನೆಗಾಗಿ ZEE5 ಪ್ರೀಮಿಯಂ ಮತ್ತು Vi Movies ಉಚಿತ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇತರ ಕಂಪನಿಗಳಂತೆ Vi ನಿಮಗೆ ಅನಿಯಮಿತ ಕರೆಗಳು ಮತ್ತು 100 ಉಚಿತ SMS ಅನ್ನು ಸಹ ಒದಗಿಸುತ್ತಿದೆ.

3 /4

 ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ತನ್ನ ಗ್ರಾಹಕರಿಗೆ 2 ಜಿಬಿ ಡೇಟಾ ಪ್ಲಾನ್ ನೀಡುತ್ತಿದೆ. ಬಿಎಸ್‌ಎನ್‌ಎಲ್ ಬಳಕೆದಾರರು ಕೇವಲ 189 ರೂಗಳ ರೀಚಾರ್ಜ್‌ನಲ್ಲಿ 2 ಜಿಬಿ ಡೇಟಾವನ್ನು ಪಡೆಯಬಹುದು. ಖಾಸಗಿ ಟೆಲಿಕಾಂನಂತೆ, ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಅನಿಯಮಿತ ಕರೆ ಮತ್ತು ಉಚಿತ ಎಸ್ಎಂಎಸ್ ಸೌಲಭ್ಯವನ್ನು ಸಹ ಒದಗಿಸುತ್ತಿದೆ.

4 /4

ಜಿಯೋ ರೀಚಾರ್ಜ್ ಪ್ಲಾಣ್ ನಲ್ಲಿಯೂ ಪ್ರತಿದಿನ 2 ಜಿಬಿ ಡೇಟಾ ಲಭ್ಯವಿದೆ. ಈ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯ ಬೆಲೆ 444 ರೂ. ಈ ಯೋಜನೆಯಲ್ಲಿ ಇತರ ವೈಶಿಷ್ಟ್ಯಗಳೊಂದಿಗೆ ಬಳಕೆದಾರರಿಗೆ JioCinema ಮತ್ತು  Jio TVಯ  ಉಚಿತ ಚಂದಾದಾರಿಕೆ ನೀಡಲಾಗುತ್ತಿದೆ.